ಬೆಂಗಳೂರು: ಕೊರೊನಾ ಇನ್ನು ಮುಂದೆಯೂ ಇರುತ್ತೆ, ಅದರ ಜೊತೆಗೆ ನಾವು ಜೀವನ ನಡೆಸಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ಕೊಟ್ಟಿದ್ದೇವೆ. ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿದೆ ಎಂಬ ಮನಸ್ಥಿತಿ ಜನರಲ್ಲಿ ಇರಬೇಕು. ಸರ್ಕಾರ ಈ ಬಗ್ಗೆ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಸ್ವಯಂ ಕ್ವಾರಂಟೈನ್ ಬಗ್ಗೆ ಸಚಿವದ್ವಯರಾದ ಸುಧಾಕರ್, ಸಿ.ಟಿ.ರವಿ ಹೇಳಿದ್ದೇನು? - ಸಿ.ಟಿ.ರವಿ ಸ್ವಯಂ ಕ್ವಾರೆಂಟೈನ್
ಇಷ್ಟು ದಿನ ಸ್ವಯಂ ಕ್ವಾರಂಟೈನ್ನಲ್ಲಿದ್ದ ಸಚಿವರಾದ ಸಿ.ಟಿ.ರವಿ ಹಾಗೂ ಡಾ.ಕೆ.ಸುಧಾಕರ್ ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು.
ಸಚಿವರ ಸುದ್ದಿಗೋಷ್ಟಿ
ಬೆಂಗಳೂರು: ಕೊರೊನಾ ಇನ್ನು ಮುಂದೆಯೂ ಇರುತ್ತೆ, ಅದರ ಜೊತೆಗೆ ನಾವು ಜೀವನ ನಡೆಸಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ ಕೊಟ್ಟಿದ್ದೇವೆ. ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿದೆ ಎಂಬ ಮನಸ್ಥಿತಿ ಜನರಲ್ಲಿ ಇರಬೇಕು. ಸರ್ಕಾರ ಈ ಬಗ್ಗೆ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಸಚಿವ ಸಿ.ಟಿ.ರವಿ ಹೇಳಿದ್ದೇನು?:
ಪಾಲಿಕೆ ಆಯುಕ್ತರು ಕರೆ ಮಾಡಿ ನೀವು ಕ್ವಾರಂಟೈನ್ ಹೋಗಬೇಕು ಎಂದಿದ್ದರು. ಆದರೆ ಸೋಂಕಿತ ಪತ್ರಕರ್ತನಿಗೂ, ನನ್ನ ಟ್ರಾವೆಲ್ ಹಿಸ್ಟರಿಗೂ ಹೋಲಿಕೆ ಆಗುತ್ತಿರಲಿಲ್ಲ. ಆದರೂ ಅಪವಾದ ಬರಬಾರದು ಎಂದು ಟೆಸ್ಟ್ ಮಾಡಿಸಿದೆ. ನಿಯಮ ಪಾಲಿಸುವುದು ನಮ್ಮ ಧರ್ಮ ಎಂದು ಸ್ವಯಂ ಕ್ಯಾರಂಟೈನ್‌ನಲ್ಲಿದ್ದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಆರಂಭದಲ್ಲಿ ಸ್ವಲ್ಪ ನನಗೆ ಹಿಂಸೆ ಅನಿಸಿತು. ಬಳಿಕ ರಿಪೋರ್ಟ್ ನೆಗೆಟಿವ್ ಬಂದ ಬಳಿಕ ನೆಮ್ಮದಿಯಾಯಿತು. ಆದರೂ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮನೆಯಲ್ಲೇ ಇದ್ದು ಮಾಡುತ್ತಿದ್ದೆವು. ಸರ್ಕಾರಕ್ಕಿಂತ ಹೆಚ್ಚು ಜನರ ಮೇಲೆ ಜವಾಬ್ದಾರಿ ಹೆಚ್ಚಿದೆ. ಆಗ ಪಿಪಿಇ ಕಿಟ್ ತರಿಸುವುದೇ ಕಷ್ಟದ ಕೆಲಸ ಅಂತಿದ್ದೆವು. ಈಗ ಆ ಪರಿಸ್ಥಿತಿಯಿಲ್ಲ, ಲಾಕ್‌ಡೌನ್ ಸಡಿಲಿಕೆ ಮಾಡಿರುವುದು ಸ್ವೇಚ್ಚಾಚಾರ ಮಾಡಬಾರದು ಎಂದು ವಿವರಿಸಿದರು.ನೂರು ಜನ ಕುಡುಕರಲ್ಲಿ ಎಪ್ಪತ್ತು ಜನ ಕುಡಿಯೋ ಯೋಚನೆಯಿಂದ ಹೊರ ಬಂದಿದ್ದರು ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದರು. ಅದರ ಅಧ್ಯಯನ ವರದಿಯನ್ನೂ ಪರಿಶೀಲನೆ ಮಾಡಿದ್ದೇನೆ. ವ್ಯಕ್ತಿಗತವಾಗಿ ನಾನು ಮದ್ಯದ ಪರವಾಗಿ ಇಲ್ಲ. ಸಂಪೂರ್ಣ ಪಾನ ನಿಷೇಧಕ್ಕೆ ನಾನು ಬದ್ಧನಾಗಿದ್ದೆ. ಆದರೆ ಅದನ್ನು ಹಲವು ಆಯಾಮಗಳಲ್ಲಿ ನೋಡಬೇಕು ಎಂದರು.
ಟೂರಿಸ್ಟ್ ಗೈಡ್‌ಗಳಿಗೂ ನೆರವಿನ ಹಸ್ತ ನೀಡಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ. ಅಸಂಘಟಿತ ಹಾಗೂ ದುಡಿಯುವ ವರ್ಗಗಳ ಲಿಸ್ಟ್ ಕೊಟ್ಟಿದ್ದು, ಪ್ಯಾಕೇಜ್ ವಿಸ್ತರಿಸಲು ಮನವಿ ಮಾಡಿದ್ದೇವೆ.
ನಮ್ಮ ಮೊದಲ ಆದ್ಯತೆ ಕಡು ಕಷ್ಟದಲ್ಲಿರುವವರಿಗೆ, ನಂತರದ ಆದ್ಯತೆ ಕಷ್ಟದಲ್ಲಿರುವವರಿಗೆ ಎಂದು ತಿಳಿಸಿದ್ರು.