ETV Bharat / state

ಕಸ ಗುಡಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ - ಬೆಂಗಳೂರು ಮೂವರು ಕಳ್ಳರ ಬಂಧನ

ರಸ್ತೆ ಬದಿ ಮೋರಿ ಕ್ಲೀನ್ ಮಾಡುವ ನೆಪದಲ್ಲಿ ಯಾರು ಇಲ್ಲದ ಮನೆಗಳು ಹಾಗೂ ಚಿನ್ನಾಭರಣ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.

Arrest
Arrest
author img

By

Published : Aug 7, 2020, 5:15 PM IST

ಬೆಂಗಳೂರು: ರಸ್ತೆ ಬದಿ ಕಸ ಗುಡಿಸುತ್ತಾ, ಮೋರಿ ಕ್ಲೀನ್ ಮಾಡುವ ನೆಪದಲ್ಲಿ ಚಿನ್ನಾಭರಣ ಅಂಗಡಿಗಳನ್ನು ಹಾಗೂ ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಉತ್ತರ ವಿಭಾಗದ ಸುಬ್ರಮಣ್ಯ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೊಷ್, ನಾಗರಾಜು, ದಿಲೀಪ್ ಬಂಧಿತ ಆರೋಪಿಗಳು. ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕಾಶ್ ಎಂಬುವರ ಹೊಂಡಾ ಶೈನ್ ದ್ವಿಚಕ್ರ ವಾಹನವನ್ನು ಆರೋಪಿಗಳು‌ ಕದ್ದು ಎಸ್ಕೇಪ್ ಆಗಿದ್ದರು. ಈ ಕುರಿತು ಸುಬ್ರಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇರೆಗೆ ಪಿಎಸ್​ಐ ಲತಾ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ದ್ವಿಚಕ್ರವಾಹನ ಕಳ್ಳತನ ಮಾತ್ರವಲ್ಲದೇ, ರಸ್ತೆ ಬದಿ ಮೋರಿ ಕ್ಲೀನ್ ಮಾಡುವ ನೆಪದಲ್ಲಿ ಯಾರೂ ಇಲ್ಲದ ಮನೆ ಹಾಗೂ ಚಿನ್ನಾಭರಣ ಅಂಗಡಿಗಳಿಗೆ ನುಗ್ಗಿ ಅನುಮಾನ ಬಾರದ ಹಾಗೆ ಕಳ್ಳತನ ಮಾಡುತ್ತಿದ್ದರು.

ಇನ್ನು ಬಂಧಿತರ ವಿರುದ್ಧ ಸುಬ್ರಮಣ್ಯನಗರ, ಹಲಸೂರುಗೇಟ್, ಸಿಟಿ ‌ಮಾರ್ಕೆಟ್ ಠಾಣೆ ಸೇರಿದಂತೆ ಒಟ್ಟು 5 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.