ETV Bharat / state

ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಬ್​​​ ಇನ್ಸ್​ಪೆಕ್ಟರ್​​ - ಕಾಡುಗುಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್

ಲಾಕ್​ಡೌನ್​ಗೂ ಮುನ್ನ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿಯೋರ್ವ ಕೈಯಲ್ಲಿ ಕಾಸಿಲ್ಲದೆ ನಗರದಲ್ಲೇ ಸಿಲುಕಿಕೊಂಡಿದ್ದನ್ನು ಗಮನಿಸಿದ ಕಾಡುಗುಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್, ಅನಾರೋಗ್ಯ ಪೀಡಿತ ವ್ಯಕ್ತಿಗೆ ಹಣ ನೀಡಿ ಅವರ ರಾಜ್ಯಕ್ಕೆ ಹಿಂತಿರುಗಲು ಸಹಾಯ ಮಾಡಿದ್ದಾರೆ.

Sub-Inspector
ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಿದ ಸಬ್​ ಇನ್ಸ್​ಪೆಕ್ಟರ್​
author img

By

Published : May 9, 2020, 5:47 PM IST

ಬೆಂಗಳೂರು: ಅನಾರೋಗ್ಯದ ನಿಮಿತ್ತ ನಗರದ ವೈಟ್ ಫೀಲ್ಡ್​​​ನ ಸಾಯಿ ಬಾಬಾ ಆಸ್ಪತ್ರೆಗೆ ಬಂದು ಲಾಕ್​ಡೌನ್ ವೇಳೆ ಊರಿಗೆ ತೆರಳಲು ಸಾಧ್ಯವಾಗದೆ ತನ್ನಲ್ಲಿರುವ ಹಣವನ್ನು ಖರ್ಚು ಮಾಡಿಕೊಂಡಿದ್ದ ಉತ್ತರ ಪ್ರದೇಶದ ವ್ಯಕ್ತಿಗೆ ಕಾಡುಗುಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್, ಪ್ರಯಾಣಕ್ಕೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ವ್ಯಕ್ತಿ ಅನಾರೋಗ್ಯ ನಿಮಿತ್ತ ಎರಡೂವರೆ ತಿಂಗಳ ಹಿಂದೆ ವೈಟ್ ಫೀಲ್ಡ್​​​ನ ಸಾಯಿ ಬಾಬಾ ಆಸ್ಪತ್ರೆಗೆ ಬಂದಿದ್ದ. ಕಡು ಬಡವನಾಗಿರುವ ಈ ವ್ಯಕ್ತಿ, ಸಾಯಿ ಬಾಬಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಒಳಪಟ್ಟಿದ್ದ. ನಂತರ ದೇಶದಲ್ಲಿ ಲಾಕ್​​ಡೌನ್ ವೇಳೆ ಸಾರಿಗೆ ಸಂಪರ್ಕವಿಲ್ಲದೆ ತನ್ನ ರಾಜ್ಯಕ್ಕೆ ಹಿಂತಿರುಗಲು ಸಾಧ್ಯವಾಗದೆ ಬೆಳತೂರಿನಲ್ಲಿ ಉಳಿದುಕೊಂಡಿದ್ದು, ಸದ್ಯ ಊರಿಗೆ ತೆರಳಲು ನಿರ್ಧರಿಸಿದ್ದ.

ನಗರದಲ್ಲಿರುವ ಬೇರೆ ರಾಜ್ಯಗಳ ಜನರು ತಮ್ಮ ಊರಿಗೆ ತೆರಳಲು ಸರ್ಕಾರ ಅನುಮತಿ ನೀಡಿರುವುದರಿಂದ ಕಾಡುಗುಡಿ, ಮಹದೇವಪುರ, ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ವಲಸೆ ಬಂದ ಅನ್ಯ ರಾಜ್ಯಗಳ ಜನರಿಗೆ ಆರೋಗ್ಯ ತಪಾಸಣೆ ಮತ್ತಿತರ ಮಾಹಿತಿಗಳನ್ನು ಕಲೆಹಾಕುವ ವೇಳೆ ಉತ್ತರ ಪ್ರದೇಶದ ವ್ಯಕ್ತಿ ಊರಿಗೆ ತೆರಳಲು ಹಣ ಇಲ್ಲದ ಬಗ್ಗೆ ಇನ್ಸ್‌ಪೆಕ್ಟರ್ ಮಹೇಶ್ ಅವರ ಗಮನಕ್ಕೆ ಬಂದಿತ್ತು. ತಕ್ಷಣವೇ ಆ ವ್ಯಕ್ತಿಯನ್ನು ಕರೆದು ತಮ್ಮ ಕೈಯಿಂದ ಸಾವಿರ ರೂಪಾಯಿ ನೀಡಿ ಸರ್ಕಾರಿ ವಾಹನದ ಮೂಲಕ ಚಿಕ್ಕಬಾಣವಾರ ರೈಲ್ವೆ ನಿಲ್ದಾಣಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಕಳುಹಿಸಿದ್ದಾರೆ.

ಇದಲ್ಲದೆ ಸಬ್ ಇನ್ಸ್‌ಪೆಕ್ಟರ್ ಮಹೇಶ್, ಕಾಡುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವಲಸಿಗರಿಗೆ ತಮ್ಮ ಸಂಬಳದ ಹಣದಲ್ಲಿ ನಲವತ್ತು ಪ್ಯಾಕೇಟ್ ಅಕ್ಕಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಖರೀದಿಸಿ ನೀಡಿದ್ದರು.

ರಾಯಚೂರು ತಾಲೂಕಿನ ಕುಗ್ರಾಮವಾದ ಆಯಿಜಪುರ ಗ್ರಾಮದಲ್ಲಿ ಜನಿಸಿರುವ ಮಹೇಶ್ ಕಳೆದ ಎರಡು ವರ್ಷಗಳಿಂದ ನಗರದ ಕಾಡುಗುಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾ ಬಂದ ನಂತರ ಸಾರ್ವಜನಿಕರ ಸಂಕಷ್ಟ ಹೇಳತಿರದಾಗಿದೆ. ಊರಿಗೆ ತೆರಳಲು ಹಣವಿಲ್ಲದೆ ಪರಿತಪಿಸುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದರಿಂದ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನಾನು ಬಡತನದ ಕುಟುಂಬದಿಂದ ಬಂದಿದ್ದರಿಂದ ಈ ಕಷ್ಟಗಳ ಅರಿವು ನನಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಮಹೇಶ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.