ಬೆಂಗಳೂರು: ಪ್ರಸ್ತುತ ಶಾಲಾ-ಕಾಲೇಜುಗಳ ಪುನರಾಂಭದ ಹಿನ್ನೆಲೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಪಾಸ್ ಆಧಾರದಲ್ಲಿಯೇ ಪ್ರಯಾಣಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.
ಹೀಗಾಗಿ ಎಲ್ಲಾ ವರ್ಗದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಳೇ ಪಾಸ್ನೊಂದಿಗೆ (2019-20) ಪ್ರಸ್ತುತ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಶುಲ್ಕ ಪಾವತಿಸಿರುವ ರಸೀದಿಯನ್ನ ತೋರಿಸಿ ಮಾರ್ಚ್ 31ರವರೆಗೆ ಸಂಚರಿಸಬಹುದಾಗಿದೆ.
ಈ ಹಿಂದೆ ಫೆಬ್ರವರಿ 28ರವರೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸದ್ಯದ ಸ್ಥಿತಿಗತಿ ಗಮನಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.