ETV Bharat / state

ಇನ್‌ಸ್ಟಾಗ್ರಾಂನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಹಾಕಿದ್ದ ವಿದ್ಯಾರ್ಥಿ ಬಂಧನ - ವಿಡಿಯೋ ಹಾಕಿದ್ದ ವಿದ್ಯಾರ್ಥಿ ಬಂಧನ

ಇಬ್ಬರು ವಿದೇಶಿ ಬಾಲಕಿಯರು ಬೆತ್ತಲೆಯಾಗಿ ಆಟವಾಡುತ್ತಿದ್ದ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

student-arrested-who-uploaded-girls-video-in-instagram
ವಿದ್ಯಾರ್ಥಿ ಬಂಧನ
author img

By

Published : Jan 30, 2021, 11:57 PM IST

Updated : Jan 31, 2021, 1:08 AM IST

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಅಪ್​ಲೋಡ್​​ ಮಾಡಿದ್ದ ಪದವಿ ವಿದ್ಯಾರ್ಥಿಯನ್ನು ನಗರದ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಚ್‌ಎಸ್‌ಆರ್ ಲೇಔಟ್ ನಿವಾಸಿ ಡ್ಯಾನಿಯಲ್ ಬ್ರೈಟ್ ಬಂಧಿತ. ಆರೋಪಿಯಿಂದ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮೊಬೈಲ್‌ಗೆ ಬಂದಿದ್ದ ಇಬ್ಬರು ವಿದೇಶಿ ಬಾಲಕಿಯರು ಬೆತ್ತಲೆಯಾಗಿ ಆಟವಾಡುತ್ತಿದ್ದ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ.

ಈ ಬಗ್ಗೆ ದೆಹಲಿ ಸೈಬರ್ ಟಿಪ್‌ಲೈನ್‌ಗೆ ದೂರು ಬಂದಿತ್ತು. ಈ ಪ್ರಕರಣವು ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ವರ್ಗಾವಣೆಯಾಗಿತ್ತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಬಂದಿಸಿದ್ದಾರೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಆರೋಪಿಯ ತಂದೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.

ಈ ಬಗ್ಗೆ ನನಗೆ ಮಾಹಿತಿಯಿಲ್ಲ. ತಮಾಷೆ ವಿಡಿಯೋ ಎಂದು ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದೆ. ಮೊದಲ ಬಾರಿಗೆ ಈ ರೀತಿ ವಿಡಿಯೋ ಹಾಕಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Jan 31, 2021, 1:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.