ಬೆಂಗಳೂರು: ಸತತ 9 ತಿಂಗಳಿಂದ ಐಟಿ-ಬಿಟಿ ಸಂಸ್ಥೆಗಳು ನೌಕರರಿಗೆ ನೀಡಿರುವ ವರ್ಕ್ ಫ್ರಮ್ ಹೋಮ್ನಿಂದಾಗಿ ಅವರ ಮೇಲೆಯೇ ಅವಲಂಬಿತರಾಗಿದ್ದ ಆಟೋ, ಟ್ಯಾಕ್ಸಿ ಚಾಲಕರ ದಿನನಿತ್ಯದ ದುಡಿಮೆಯಲ್ಲಿ ಶೇ. 50ರಷ್ಟು ಇಳಿಕೆ ಕಾಣುವ ಜೊತೆಗೆ ಸಾಲದ ಹೊರೆಯೂ ಹೆಚ್ಚಾಗಿದೆ.
ಇದನ್ನೂ ಓದಿ...ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿದ್ದ ಸಿಬ್ಬಂದಿ ವಜಾ!
ಓಲಾ-ಉಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವಿರ್ ಪಾಷಾ ಮಾತನಾಡಿ, ಬಹುತೇಕ ಚಾಲಕರು ಸಾಲದ ಮೇಲೆ ಕಾರುಗಳನ್ನು ಖರೀದಿಸಿದ್ದಾರೆ. 6 ತಿಂಗಳ ಮಾರಿಟೋರಿಯಂ ಅವಧಿ ಕೂಡ ಮುಗಿದಿದೆ. ಈಗ ಅವರು ಸಾಲದ ಕಂತು ಪಾವತಿಸಲು ಹೆಣಗಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 2ನೇ ದರ್ಜೆ ನಗರಗಳಲ್ಲೂ ಟ್ಯಾಕ್ಸಿ-ಆಟೋ ಚಾಲಕರಿಗೆ ತೀವ್ರ ಹೊಡೆತ ಬಿದ್ದಿದೆ. ಇತ್ತ ಪ್ರವಾಸೋದ್ಯಮಕ್ಕೂ ಜನರ ಆಗಮನ ಅಷ್ಟಕ್ಕಷ್ಟೇ ಆಗಿದೆ. ಒಂದು ವೇಳೆ ಬಂದರೂ ಸ್ವಂತ ವಾಹನಗಳ ಮೂಲಕ ಬರುತ್ತಾರೆ. ಇದು ಆಟೋ, ಟ್ಯಾಕ್ಸಿ ಚಾಲಕರ ಸಂಪಾದನೆಗೆ ಅಡ್ಡಿಯಾಗಿದೆ.