ಬೆಂಗಳೂರು: ಜಿಮ್‌ಗೆ ಬರುವವರಿಗೆ ಸ್ಟಿರಾಯ್ಡ್ ನೀಡುತ್ತಿದ್ದ ಆರೋಪದ ಮೇರೆಗೆ ಜಿಮ್ ಟ್ರೈನರ್ ಶಿವಕುಮಾರ್ನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ ಶಿವಕುಮಾರ್, ಜಿಮ್‌ಗೆ ಬರುವ ಗ್ರಾಹಕರಿಗೆ ಹಾನಿಕಾರಕ ಔಷಧ ನೀಡುತ್ತಿದ್ದ. ದೇಹ ದಪ್ಪ ಮಾಡಲು ಮತ್ತು ತೆಳ್ಳಗಾಗಲು ನೀಡುತ್ತಿದ್ದ ಔಷಧ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆಗಸ್ಟ್ 21ರಂದು ಜಿಮ್ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಬಂಧಿಸಿದ್ದರು.
ದಾಳಿ ವೇಳೆ, ಜಿಮ್‌ನಲ್ಲಿ ಹಲವು ಸ್ಟಿರಾಯ್ಡ್‌ಗಳು, ದೇಹ ಹುರಿಗೊಳಿಸಲು ಟ್ಯಾಬ್ಲೆಟ್ ಮತ್ತು ಇಂಜೆಕ್ಷನ್‌ಗಳು ಜೊತೆಗೆ ಕೆಲವೊಂದು ಪ್ರೊಟೀನ್ ಬಾಟಲ್‌ಗಳು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆನ್‌ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ, ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಸ್ಟಿರಾಯ್ಡ್ ಬಳಕೆಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ ಎನ್ನಲಾಗುತ್ತಿದೆ. ಆರೋಪಿ ವಿರುದ್ದ ಐಪಿಎಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಲಾಗಿದೆ.