ETV Bharat / state

ಲಾಕ್‌ಡೌನ್​ನಿಂದ ರಾಜ್ಯದ ನಿರುದ್ಯೋಗ ಪ್ರಮಾಣ ಏರಿಕೆ.. ಆರ್ಥಿಕ ತಜ್ಞರು ಹೇಳೋದೇನು? - ರಾಜ್ಯದ ನಿರುದ್ಯೋಗ ಪ್ರಮಾಣ

ದೇಶಕ್ಕೆ‌ ಹೋಲಿಸಿದರೆ ರಾಜ್ಯದ ನಿರುದ್ಯೋಗ ಪ್ರಮಾಣ ಉತ್ತಮವಾಗಿದೆ. CMIE ಪ್ರಕಾರ ಜೂನ್ ತಿಂಗಳಲ್ಲಿ ದೇಶದ ಒಟ್ಟು ನಿರುದ್ಯೋಗ ಪ್ರಮಾಣ ಸರಾಸರಿ 10.55% ಇತ್ತು. ಅದೇ ರಾಜ್ಯದ ನಿರುದ್ಯೋಗ ಪ್ರಮಾಣ 9.2% ಇದೆ. ದೇಶಕ್ಕೆ ಹೋಲಿಸಿದರೆ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ..

Banglore
ಲಾಕ್‌ಡೌನ್​ನಿಂದ ರಾಜ್ಯದ ನಿರುದ್ಯೋಗ ಪ್ರಮಾಣ ಏರಿಕೆ
author img

By

Published : Jul 17, 2020, 7:16 PM IST

Updated : Jul 17, 2020, 8:02 PM IST

ಬೆಂಗಳೂರು : ಕೋವಿಡ್-19 ಇಡೀ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಅದಕ್ಕೆ ನಮ್ಮ ರಾಜ್ಯ ಕರ್ನಾಟಕವೂ ಹೊರತಾಗಿಲ್ಲ. ಲಾಕ್‌ಡೌನ್ ಹೊಡೆತಕ್ಕೆ ಬಹುತೇಕ ಎಲ್ಲಾ ಕ್ಷೇತ್ರಗಳು ನಲುಗಿ ಹೋಗಿವೆ. ಕೊರೊನಾ ಹೇರಿಸಿದ ಲಾಕ್‌ಡೌನ್​ನಿಂದ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಆಘಾತಕಾರಿಯಾಗಿದೆ. ಲಾಕ್‌ಡೌನ್ ಮುನ್ನ, ಲಾಕ್‌ಡೌನ್ ವೇಳೆ ಮತ್ತು ಲಾಕ್‌ಡೌನ್ ಬಳಿಕ ರಾಜ್ಯದಲ್ಲಿನ ನಿರುದ್ಯೋಗ ಪ್ರಮಾಣದ ಸ್ಥಿತಿಗತಿಯ ವರದಿ ಇಲ್ಲಿದೆ.

ಲಾಕ್‌ಡೌನ್​ನಿಂದ ರಾಜ್ಯದ ನಿರುದ್ಯೋಗ ಪ್ರಮಾಣ ಏರಿಕೆ.. ಆರ್ಥಿಕ ತಜ್ಞರು ಹೇಳೋದೇನು?

ಕೊರೊನಾ ವೈರಾಣು ಜನರ ಆರೋಗ್ಯಕ್ಕೆ ಕಂಟಕವಾಗಿದ್ರೆ, ಲಾಕ್‌ಡೌನ್ ರಾಜ್ಯದ ಆರ್ಥಿಕತೆಯ ಆರೋಗ್ಯವನ್ನೂ ಸಂಪೂರ್ಣ ಹದಗೆಡಿಸಿದೆ. ಲಾಕ್‌ಡೌನ್ ರಾಜ್ಯದ ಪ್ರತಿ ಕ್ಷೇತ್ರಕ್ಕೂ ಹಿಂದೆಂದೂ‌ ಕಾಣದ ಹೊಡೆತ ನೀಡಿದೆ. ಲಾಕ್‌ಡೌನ್ ಹೊಡೆತದಿಂದ ರಾಜ್ಯ ಇದೀಗ ಹಿಂದೆಂದೂ ಕಾಣದಷ್ಟು ನಿರುದ್ಯೋಗ ಸಮಸ್ಯೆಯನ್ನು ತಂದೊಡ್ಡಿದೆ. ಇತರ ರಾಜ್ಯಗಳಿಗೆ ಹೋಲಿಸಿದ್ರೆ ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವೂ ಆಶಾದಾಯಕ ಮಿತಿಯಲ್ಲೇ ಇತ್ತು.‌ ಆದರೆ, ಮೂರು ತಿಂಗಳ‌ ಲಾಕ್‌ಡೌನ್​ನಿಂದ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಲೆಕ್ಕಕ್ಕೆ ಸಿಗದ ಸ್ಥಿತಿಗೆ ಹೋಗಿದೆ.

ಏನಿದೆ ರಾಜ್ಯದ ನಿರುದ್ಯೋಗ ಪ್ರಮಾಣ? : ದೇಶದ ಪ್ರತಿಷ್ಠಿತ ಸೆಂಟರ್ ಆಫ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಸಂಸ್ಥೆ ರಾಜ್ಯದಲ್ಲಿನ ನಿರುದ್ಯೋಗದ ವಸ್ತುಸ್ಥಿತಿಯನ್ನು ಮುಂದಿಟ್ಟಿದೆ. ಲಾಕ್‌ಡೌನ್ ರಾಜ್ಯಕ್ಕೆ ಯಾವ ರೀತಿ ಹೊಡೆತ ನೀಡಿದೆ ಎಂಬುದಕ್ಕೆ ಸಿಎಂಐಇ ದತ್ತಾಂಶ ತೋರಿಸಿರುವ ನಿರುದ್ಯೋಗ ಪ್ರಮಾಣ ಕೈಗನ್ನಡಿಯಾಗಿದೆ. ಸಾಮಾನ್ಯವಾಗಿ ರಾಜ್ಯದ ನಿರುದ್ಯೋಗ ಪ್ರಮಾಣ ಸರಾಸರಿ 2 ರಿಂದ 5% ವ್ಯಾಪ್ತಿಯಲ್ಲಿತ್ತು. ಆದರೆ, ಕೊರೊನಾ ಲಾಕ್‌ಡೌನ್ ರಾಜ್ಯದ ನಿರುದ್ಯೋಗ ಪ್ರಮಾಣವನ್ನು ಬುಡಮೇಲು ಮಾಡಿದೆ.

ಲಾಕ್‌ಡೌನ್ ಹೇರುವ ಮುನ್ನ ಅಂದರೆ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ 3.5%ರ ಆಸುಪಾಸಿನಲ್ಲಿತ್ತು. ಆದರೆ, ಯಾವತ್ತು ಲಾಕ್‌ಡೌನ್ ಹೇರಲಾಯಿತು ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಯಿತು. ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ 29.8%ಗೆ ದಾಖಲೆ ಏರಿಕೆ ಕಂಡಿತು. ಅದೇ ಮೇ ತಿಂಗಳಲ್ಲಿ ಅಲ್ಪ ಮಟ್ಟಿನ ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆ ನಿರುದ್ಯೋಗ ಪ್ರಮಾಣ 20.4%ಗೆ ಅಲ್ಪ ಇಳಿಕೆ ಕಂಡಿತು. ಜೂನ್ ತಿಂಗಳಲ್ಲಿ ಅನ್​ಲಾಕ್ ಪ್ರಕ್ರಿಯೆ ಆರಂಭವಾದ ಕಾರಣ ನಿರುದ್ಯೋಗ ಪ್ರಮಾಣದಲ್ಲಿ ಚೇತರಿಕೆ ಕಾಣಿಸಿದೆ. ಅಂದರೆ ಜೂನ್ ತಿಂಗಳಲ್ಲಿ ನಿರುದ್ಯೋಗದ ಪ್ರಮಾಣ 9.2%ಗೆ ಇಳಿಕೆ ಕಂಡಿತು.

ಪ್ರಮುಖ ರಾಜ್ಯಗಳ ನಿರುದ್ಯೋಗ ಸ್ಥಿತಿ ಹೇಗಿದೆ? : ಮಹಾರಾಷ್ಟ್ರದಲ್ಲಿ ಏಪ್ರಿಲ್​ನಲ್ಲಿ ನಿರುದ್ಯೋಗ ಪ್ರಮಾಣ 20.9%, ಮೇನಲ್ಲಿ 16.5% ಇದ್ದರೆ, ಜೂನ್‌ನಲ್ಲಿ ಅದು 9.7%ಗೆ ಇಳಿಕೆಯಾಗಿತ್ತು. ಗುಜರಾತ್‌ನಲ್ಲಿ ಏಪ್ರಿಲ್ ವೇಳೆ ನಿರುದ್ಯೋಗ ಪ್ರಮಾಣ 18.7%, ಮೇನಲ್ಲಿ 13.6%ಗೆ ಇಳಿಕೆಯಾಯಿತು. ಅದೇ ಜೂನ್‌ನಲ್ಲಿ 2.8%ಗೆ ಗಣನೀಯ ಚೇತರಿಕೆ ಕಂಡಿದೆ. ಇನ್ನು, ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಏಪ್ರಿಲ್ ವೇಳೆ 20.5% ಇದ್ದ ನಿರುದ್ಯೋಗ ಪ್ರಮಾಣ ಮೇನಲ್ಲಿ 17.5%ಗೆ ಇಳಿಯಿತು.‌ ಅದೇ ಜೂನ್​ನಲ್ಲಿ ಅದು 2.1%ಗೆ ಗಣನೀಯ ಇಳಿಕೆ ಕಂಡಿದೆ. ಇತ್ತ ತೆಲಂಗಾಣದಲ್ಲಿ ಏಪ್ರಿಲ್ ತಿಂಗಳಲ್ಲಿ 6.2% ಇದ್ದ ನಿರುದ್ಯೋಗ ಮೇನಲ್ಲಿ 34.8%ಗೆ ಏರಿಕೆಯಾಗಿದೆ. ಅನ್‌ಲಾಕ್ ಬಳಿಕ ಜೂನ್‌ನಲ್ಲೂ 15.5% ನಿರುದ್ಯೋಗ ಪ್ರಮಾಣ ಇದೆ. ತಮಿಳುನಾಡಿನಲ್ಲಿ ಏಪ್ರಿಲ್‌ನಲ್ಲಿ 49.8% ಇದ್ದ ನಿರುದ್ಯೋಗ ಮೇನಲ್ಲಿ 33% ಇತ್ತು. ಅದೇ ಜೂನ್​ನಲ್ಲಿ ನಿರುದ್ಯೋಗ ಪ್ರಮಾಣ 13.5%ಗೆ ಇಳಿಕೆಯಾಯಿತು.

ಅಧಿಕ ಉದ್ಯೋಗ ನಷ್ಟವಾದ ಕ್ಷೇತ್ರ ಯಾವುದು? : ಅಸಂಘಟಿತ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಲಾಕ್​ಡೌನ್ ವೇಳೆ ಅಸಂಘಟಿತ ವಲಯದಲ್ಲಿ ಲಕ್ಷಾಂತರ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಇದರ ಜೊತೆಗೆ ಪ್ರವಾಸೋದ್ಯಮ, ಸಾರಿಗೆ ಕ್ಷೇತ್ರ, ಹೋಟೆಲ್, ರೆಸ್ಟೋರೆಂಟ್ ಕ್ಷೇತ್ರಗಳಿಗೆ ಲಾಕ್‌ಡೌನ್‌ನಿಂದ ಏಟು ಬಿದ್ದಿದೆ. ಹೋಟೆಲ್ ಉದ್ಯಮ, ಪ್ರವಾಸೋದ್ಯಮ ನೆಲಕಚ್ಚಿರುವ ಹಿನ್ನೆಲೆ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ಆಗಿದೆ. ಇನ್ನು, ಅದೇ ರೀತಿ ನಿರ್ಮಾಣ ಕ್ಷೇತ್ರ, ಮನರಂಜನಾ ಕ್ಷೇತ್ರಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನಷ್ಟ ಆಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಆರ್ಥಿಕ ತಜ್ಞರ ಅಭಿಪ್ರಾಯ ಏನು? : ಆರ್ಥಿಕ ತಜ್ಞ ಸಿ ಎ ರುದ್ರಮೂರ್ತಿ ಹೇಳುವ ಪ್ರಕಾರ ರಾಜ್ಯದ ನಿರುದ್ಯೋಗ ಪ್ರಮಾಣ ಸುಧಾರಿಸಬೇಕಾದ್ರೆ ಇನ್ನೂ ಕನಿಷ್ಠ ಒಂದು ವರ್ಷ ಬೇಕಾಗಲಿದೆ. ದೇಶದ ಸರಾಸರಿ ನಿರುದ್ಯೋಗ ಪ್ರಮಾಣ ನೋಡಿದ್ರೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಲಾಕ್‌ಡೌನ್ ಮುಂದುವರಿಸಿದ್ರೆ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Last Updated : Jul 17, 2020, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.