ETV Bharat / state

ನಾಡಿನ ಜನತೆಗೆ ನವರಾತ್ರಿ, ವಿಜಯದಶಮಿ ಶುಭ ಕೋರಿದ ರಾಜ್ಯ ನಾಯಕರು

ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಹಿನ್ನಲೆ ರಾಜ್ಯ ನಾಯಕರು ನಾಡಿನ ಜನತೆಗೆ ಶುಭಕೋರಿದ್ದಾರೆ. ಕೋವಿಡ್ ಕಾರಣದಿಂದ ಹಬ್ಬವನ್ನು ಮುಂಜಾಗೃತಾ ಕ್ರಮ ತೆಗೆದುಕೊಂಡು ಆಚರಿಸುವಂತೆ ಕರೆ ನೀಡಿದ್ದಾರೆ.

ನಾಡಿನ ಜನತೆಗೆ ನವರಾತ್ರಿ, ವಿಜಯದಶಮಿ ಹಬ್ಬದ ಶುಭ ಕೋರಿದ ರಾಜ್ಯ ನಾಯಕರು
author img

By

Published : Oct 17, 2020, 1:19 PM IST

ಬೆಂಗಳೂರು: ಒಂಬತ್ತು ದಿನಗಳ ಶಕ್ತಿದೇವತೆಯ ಆರಾಧನೆಗೆ ಇಂದು ಚಾಲನೆ ದೊರೆತಿದೆ. ಇನ್ನು ನವರಾತ್ರಿ ಹಬ್ಬಕ್ಕೆ ರಾಜ್ಯ ನಾಯಕರು ಶುಭಕೋರಿದ್ದು, ಜನರಿಗೆ ಶುಭ ಸಂದೇಶ ರವಾನಿಸಿದ್ದಾರೆ.

ಸಿಎಂ ಬಿ.ಎಸ್​.ಯಡಿಯೂರಪ್ಪ

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸಂತೋಷ, ನೆಮ್ಮದಿ, ಆರೋಗ್ಯ ಕರುಣಿಸಲಿ, ಕೊರೊನಾ, ನೆರೆ ಸಂಕಷ್ಟಗಳು ಕಳೆದು ನಾಡು ಸಮೃದ್ಧವಾಗಿರುವಂತೆ ತಾಯಿ ಅನುಗ್ರಹಿಸಲಿ. ಎಲ್ಲರೂ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ, ನಾಡಿನ ಒಳಿತಿಗಾಗಿ ಪ್ರಾರ್ಥಿಸೋಣ ಎಂದಿದ್ದಾರೆ.

  • ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ಕೊರೋನಾ, ನೆರೆ ಸಂಕಷ್ಟಗಳು ಕಳೆದು ನಾಡು ಸಮೃದ್ಧವಾಗಿರುವಂತೆ ತಾಯಿ ಅನುಗ್ರಹಿಸಲಿ. ಎಲ್ಲರೂ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ, ನಾಡಿನ ಒಳಿತಿಗಾಗಿ ಪ್ರಾರ್ಥಿಸೋಣ. pic.twitter.com/E7grAODkUT

    — B.S. Yediyurappa (@BSYBJP) October 17, 2020 " class="align-text-top noRightClick twitterSection" data=" ">

ಮಾಜಿ ಸಿಎಂ ಕುಮಾರಸ್ವಾಮಿ

ವಿಜಯದಶಮಿಯ ಆರಂಭ ಎಲ್ಲರಿಗೂ ಒಳಿತು ಮಾಡಲಿ. ಸಕಲ ಸಂಕಷ್ಟಗಳು ದೂರಾಗಿ ಶಾಂತಿ, ನೆಮ್ಮದಿ ನೆಲೆಸಲಿ. ನಾಡು ಸುಭೀಕ್ಷವಾಗಿ ಸಮೃದ್ಧಿಯಾಗಿರಲಿ ಎಂದು ನಾಡದೇವತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.

  • ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು. ವಿಜಯದಶಮಿಯ ಆರಂಭ ಎಲ್ಲರಿಗೂ ಒಳಿತು ಮಾಡಲಿ.
    ಸಕಲ ಸಂಕಷ್ಟಗಳು ದೂರಾಗಿ ಶಾಂತಿ, ನೆಮ್ಮದಿ ನೆಲೆಸಲಿ. ನಾಡು ಸುಭೀಕ್ಷವಾಗಿ ಸಮೃದ್ದಿಯಾಗಿರಲಿ ಎಂದು ನಾಡದೇವತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ.
    ಸರ್ವೇ ಜನಾಃ ಸುಖಿನೋ ಭವಂತು 💐

    — H D Kumaraswamy (@hd_kumaraswamy) October 17, 2020 " class="align-text-top noRightClick twitterSection" data=" ">

ಡಾ.ಕೆ.ಸುಧಾಕರ್

ನವರಾತ್ರಿಯ ಮೊದಲನೇ ದಿನವಾದ ಇಂದು ಜಗನ್ಮಾತೆ ದುರ್ಗೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಜಗಜ್ಜನನಿ ಶೈಲಪುತ್ರಿ ನಮ್ಮೆಲ್ಲರ ಮನೋಭಿಲಾಷೆಯನ್ನು ಈಡೇರಿಸಲಿ ಎಂದು ಪ್ರಾರ್ಥಿಸೋಣ. ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ, ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ಎಂದು ಪ್ರಾರ್ಥಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ. ನಾಡಿನ ಸಂಕಷ್ಟಗಳು ಕಳೆದು ನಾಡು ಸಮೃದ್ಧವಾಗಿರುವಂತೆ ತಾಯಿ ಅನುಗ್ರಹಿಸಲಿ. ಎಲ್ಲರೂ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ. ನಾಡಿನ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸಂತೋಷ, ನೆಮ್ಮದಿ, ಆರೋಗ್ಯವನ್ನು ಕರುಣಿಸಿ, ನಮ್ಮೆಲ್ಲರ ಸಂಕಷ್ಟಗಳನ್ನು ದೂರ ಮಾಡಲಿ ಎಂದು ಪ್ರಾರ್ಥಿಸೋಣ ಎಂದಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ್

ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವ ದಿನವಾದ ಇಂದು ನಾಡಿನ ಸಮಸ್ತ ಜನತೆಗೆ ನನ್ನ ಶುಭ ಹಾರೈಕೆಗಳು. ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ, ಭಕ್ತಿ ಭಾವದಿಂದ ಕಣ್ತುಂಬಿಕೊಳ್ಳೋಣ ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.