ETV Bharat / state

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

author img

By

Published : Jan 18, 2023, 5:00 PM IST

Updated : Jan 18, 2023, 5:35 PM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಅಸೋಸಿಯೇಶನ್ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ತನ್ನ ಸಿಟ್ಟು ಹೊರ ಹಾಕಿತು.

ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ
ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ
ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾತನಾಡಿದರು

ಬೆಂಗಳೂರು: '‘ಪ್ರಧಾನಿ ಮೋದಿ ಅವರಿಗೆ ಒಂದು ವರ್ಷದ ಹಿಂದೆಯೇ ಕಮಿಷನ್​​ ಬಗ್ಗೆ ಪತ್ರ ಬರೆದಿದ್ದೇನೆ. ಆದರೆ, ಇದುವರೆಗೂ ಏನೂ ಕ್ರಮ ಆಗಿಲ್ಲ. ಪ್ರಧಾನಿ ಪ್ರಾಮಾಣಿಕವಾಗಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ, ಆದರೆ, ಸಚಿವರು, ಶಾಸಕರು ಮಾತ್ರ ತಿನ್ನುವುದನ್ನು ಬಿಟ್ಟಿಲ್ಲ‘‘ ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.

‘‘2019 ರಿಂದ 10 ರಿಂದ ಶೇ 40ರಷ್ಟಕ್ಕೆ ಕಮಿಷನ್​ ಏರಿಕೆಯಾಗಿದೆ. ದೂರು ನೀಡಿದ್ರೂ ಒಂದು ದಿನವೂ ನಮ್ಮನ್ನ ಕರೆದು ಸಭೆ ಕರೆದು ಮಾತನಾಡಿಲ್ಲ. ರಾತ್ರಿ 8 ಗಂಟೆಗೆ ನನ್ನನ್ನ ಬಂಧನ ಮಾಡಿದ್ದರು. ನಾವೇನು ಕಳ್ಳರಾ ? ಮೋಸ ಮಾಡಿರುವವರೇ ಆರಾಮಾಗಿದ್ದಾರೆ. ಭ್ರಷ್ಟಾಚಾರ ವಿರೋಧಿಗಳು ನಾವು, ಕೊನೆಯವರೆಗೂ ಗುತ್ತಿಗೆದಾರನಾಗಿಯೇ ಸಾಯುತ್ತೇನೆ‘‘ ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ಬಾಕಿ ಮೊತ್ತ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಅಸೋಸಿಯೇಶನ್ ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದ ಗುತ್ತಿಗೆದಾರರ ಸಂಘ ಇಂದಿನಿಂದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದಕ್ಕೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ.

ನಾವು ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯದಿಂದ ಕೂಡಿವೆ: ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ,' ಕೆಲಸದ ವಿಚಾರದಲ್ಲಿ ಕ್ವಾಲಿಟಿ ಕೇಳ್ತಾರೆ. ಕಮಿಷನ್ ಕೇಳಿದ್ರೆ ಕ್ವಾಲಿಟಿ ಹೇಗೆ ಕೋಡೋದು?. ಕಾಮಗಾರಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ. ಎಲ್ಲ ದಾಖಲೆಗಳನ್ನ ಲಾಯರ್ ಬಳಿ ನೀಡಿದ್ದೇವೆ. ಕಾಂಟ್ರ್ಯಾಕ್ಟರ್​​​ಗಳು ಇವಾಗ ಕೂಲಿ ಕೆಲಸದವರಾಗಿದ್ದಾರೆ. ಕ್ವಾಲಿಫೈ ಇಲ್ಲದಿದ್ದರೂ ಗುತ್ತಿಗೆ ನೀಡುತ್ತಾರೆ‌.

ಶಾಸಕರು ಹಾಗೂ ಸಚಿವರ ಭ್ರಷ್ಟಾಚಾರದ ದಾಖಲೆಗಳ ವಿಚಾರ ಲಾಯರ್ ನೋಡಿಕೊಳ್ತಾರೆ. ನಾಳೆ ಕೋರ್ಟ್​​​ಗೆ ದಾಖಲೆಗಳನ್ನ ಸಲ್ಲಿಸುತ್ತಾರೆ. ನಾವು ಮಾಡುತ್ತಿರುವ ಆರೋಪಗಳೆಲ್ಲ ಸತ್ಯ ಸತ್ಯ ಸತ್ಯ ಎಂದು ಕೆಂಪಣ್ಣ ಹೇಳಿದರು. ಈ ಸಂಬಂಧ ಸರ್ಕಾರ ಬೇಕಿದ್ದರೆ ಒಂದು ಕಮಿಷನ್ ಮಾಡಿ ವಿಚಾರಣೆ ನಡೆಸಲಿ ಎಂದು ಕೆಂಪಣ್ಣ ಒತ್ತಾಯಿಸಿದರು.

ರಾಜ್ಯ ಸರ್ಕಾರಕ್ಕೆ ಗಡುವು: ಏಪ್ರಿಲ್​ನಲ್ಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಬೊಮ್ಮಾಯಿ ಸಮ್ಮತಿಸಿದ್ದರು. ಭರವಸೆ ಈಡೇರದ ಹಿನ್ನೆಲೆ ಇಂದು ಗುತ್ತಿಗೆದಾರರ ಸಂಘ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದು, ಇದೇ ತಿಂಗಳ 30ರವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ ಎಂದು ಇದೇ ವೇಳೆ ಕೆಂಪಣ್ಣ ಹೇಳಿದರು.

ಲೋಕೋಪಯೋಗಿ ಇಲಾಖೆಯಲ್ಲಿ 4 ಸಾವಿರ ಕೋಟಿ ಬಿಲ್ ಬಾಕಿ: ಇತ್ತೀಚೆಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಅಸೋಸಿಯೇಷನ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸರ್ಕಾರ ಒಟ್ಟು 25 ಸಾವಿರ ಕೋಟಿ ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿ 4 ಸಾವಿರ ಕೋಟಿ ಬಿಲ್ ಬಾಕಿ ಇದೆ. ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಸುಮಾರು 8 ಸಾವಿರ ಕೋಟಿ ಮೊತ್ತದ ಬಾಕಿ ಬಿಲ್ ಬರಬೇಕಾಗಿದೆ ಎಂದು ಆರೋಪಿಸಿದ್ದರು.

ಓದಿ: ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ, ಕಮೀಷನ್ ಕುರಿತಂತೆ ಶೀಘ್ರದಲ್ಲೇ ದಾಖಲೆ ಬಿಡುಗಡೆ: ಕೆಂಪಣ್ಣ

Last Updated : Jan 18, 2023, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.