ETV Bharat / state

ದಿಲ್ಲಿಗೆ ತೆರಳಿದ ಕೈ ನಾಯಕರು: ರಾತ್ರಿಯೇ ವಾಪಸ್ ಸಾಧ್ಯತೆ - ETV Bharath Kannada

ಬೇರೆ ರಾಜ್ಯದ ಚುನಾವಣೆ ಫಲಿತಾಂಶ ಬೇರೆ ಇಲ್ಲಿಯ ಫಲಿತಾಂಶವೇ ಬೇರೆ. ಪ್ರಧಾನ ಮಂತ್ರಿಯನ್ನೇ ಬದಲಾಯಿಸ ಬೇಕು ಎಂದು ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನೂ ರಾಜ್ಯದಲ್ಲಿ ಇವರು ಗೆಲ್ಲುವುದುಂಟಾ ಎಂದು ಡಿ ಕೆ ಶಿವಕುಮಾರ್​ ಟೀಕಿಸಿದ್ದಾರೆ.

state-congress-leaders-travel-to-delhi
ದಿಲ್ಲಿಗೆ ತೆರಳಿದ ಕೈ ನಾಯಕರು: ರಾತ್ರಿ ವಾಪಾಸ್
author img

By

Published : Dec 12, 2022, 11:54 AM IST

ಬೆಂಗಳೂರು: ಇಂದು ರಾಜ್ಯ ನಾಯಕರ ಜೊತೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಭೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರ ನಾಯಕರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಯಕರು ದಿಲ್ಲಿಗೆ ಪ್ರಯಾಣ ಹೊರಟಿದ್ದಾರೆ. ರಾತ್ರಿ ದಿಲ್ಲಿಯಿಂದ ಹೊರಟು ಬೆಂಗಳೂರಿಗೆ ವಾಪಸಾಗಲಿದ್ದಾರೆ. ದಿಲ್ಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ದೇಶದ ಕಾಂಗ್ರೆಸ್ ಪಕ್ಷವನ್ನು ಯಾರು ತೆಗೆಯಲು ಆಗಲ್ಲ. ಕೆಲವರು ಪ್ರಧಾನ ಮಂತ್ರಿ ಬದಲಾದರೆ ದೇಶವೇ ಬದಲಾವಣೆ ಆಗುತ್ತೆ ಎಂದು ಹೇಳುತ್ತಿದ್ದಾರೆ ಎಂದರು.

ಹಿಮಾಚಲ ದೆಹಲಿಯ ಪಕ್ಕದಲ್ಲಿತ್ತು, ದೆಹಲಿಯಲ್ಲಿ ಅವರ ಸರ್ಕಾರ ಮಂತ್ರಿಗಳಿದ್ದರು, ಆಪ್ ಪಾರ್ಟಿ ಬಂತು. ಹಾಗೇ ಕರ್ನಾಟಕಕ್ಕೂ, ಬೇರೆ ರಾಜ್ಯಕ್ಕೂ ಸಂಬಂಧವಿಲ್ಲ. ಮೊದಲಿಂದಲೂ ಒಂದು ಪದ್ಧತಿಯಿದೆ. ಇಲ್ಲಿಯ ಆಡಳಿತ ಕೆಟ್ಟುಹೋಗಿದೆ. ದೇಶದಲ್ಲಿ ಜನ ಪ್ರಜ್ಞಾವಂತರು ಇದ್ದಾರೆ. ಕರ್ನಾಟಕ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ಯಾಕೆ ಇವರು ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಎಲೆಕ್ಷನ್ ಮಾಡಿಲ್ಲ? ಅವರ ಸರ್ವೇ ರಿಪೋರ್ಟ್​ನಲ್ಲಿ ಅವರ ವಿರುದ್ಧ ಜನ ಇದ್ದಾರೆ. ಸೋಲುತ್ತೇವೆ ಎನ್ನುವ ಮರ್ಯಾದೆ ದೃಷ್ಟಿಯಿಂದ ಎಲೆಕ್ಷನ್ ಮಾಡಿಲ್ಲ. ಜನರ ಮುಂದೆ ಹೋಗಲು ಬಿಜೆಪಿಗೆ ಹೆದರಿಕೆ ಇದೆ. 140 ರಿಂದ 150 ಸ್ಥಾನಗಳು ನಮ್ಮ ಪಕ್ಷಕ್ಕೆ ಬರ್ತವೇ. ಸ್ಪಷ್ಟ ಬಹುಮತ ಕಾಂಗ್ರೆಸ್​ಗೆ ಸಿಗುತ್ತದೆ. ಮಲ್ಲಿಕಾರ್ಜುನ ಖರ್ಗೆಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ದೇಶ ಒಗ್ಗೂಡಿಸಲು ರಾಹುಲ್ ಗಾಂಧಿ ನಡೆಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ನವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಾಪ ಹತಾಶರಾಗಿರುವವರ ಜೊತೆ ನಾನೇನು ಮಾತಾಡಲಿ. ಸೋಲಿನ ಭೀತಿ, ಮೊದಲು ಅವರು ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್ ಎಲೆಕ್ಷನ್ ಮಾಡಲಿ ಎಂದರು.

ಹೈಕಮಾಂಡ್​ ಕರೆದಿದೆ ಹೋಗ್ತಿದ್ದೇವೆ: ದಿಲ್ಲಿಗೆ ತೆರಳುವ ಮುನ್ನ ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹೈಕಮಾಂಡ್ ಕರೆದಿದ್ದಾರೆ. ಹೀಗಾಗಿ ಇಂದು ದೆಹಲಿಗೆ ಹೋಗುತ್ತಿದ್ದೇನೆ. ಮೊದಲ ಲಿಸ್ಟ್ ಫೈನಲ್ ಬಗ್ಗೆ ಚರ್ಚೆ ಇಲ್ಲ. ಹೈಕಮಾಂಡ್ ಕರೆದಿದ್ದಾರೆ ಹೋಗ್ತಿದ್ದೇನೆ ಅಷ್ಟೇ ಎಂದರು.

ಇದನ್ನೂ ಓದಿ: ಗಾಯಾಳುಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ವಿಳಂಬ.. ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಜಿ ಪರಮೇಶ್ವರ್ ತರಾಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.