ಬೆಂಗಳೂರು: ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಿರುವ ಹಿಂದಿನ ಬಿಜೆಪಿ ಪಿತೂರಿ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಮುಖಂಡರು ಗಾಂಧಿ ಪ್ರತಿಮೆ ಮುಂಭಾಗ ಜಮಾವಣೆಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು. ಸಚಿವ ಪ್ರಿಯಾಂಕಾ ಖರ್ಗೆ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಪ್ರತಿಭಟನೆಯಲ್ಲಿ ಸಚಿವರ ಡಾ.ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಂ.ಸಿ. ಸುಧಾಕರ್, ಶಾಸಕ ಶರತ್ ಬಚ್ಚೇಗೌಡ, ಕೆ.ವೈ. ನಂಜೇಗೌಡ, ತನ್ವೀರ್ ಸೇಠ್, ಯು.ಬಿ. ವೆಂಕಟೇಶ್, ಪ್ರಕಾಶ್ ರಾಥೋಡ್ ಸೇರಿದಂತೆ ಕೈ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕೈ ನಾಯಕರು, ದ್ವೇಷದ ರಾಜಕಾರಣಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ''ರಾಜ್ಯ ಆರ್ಥಿಕ ಪ್ರಗತಿಗೆ ದಾರಿ ದೀಪವಾದ ಬಜೆಟ್ ಆಗಲಿದೆ. ಬಸವಣ್ಣನವರ ತತ್ವದ ಸರ್ವರಿಗೂ ಸಮಪಾಲು ಇದೆ. ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಬಜೆಟ್ ಇದಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಬಜೆಟ್ ಇನ್ನೂ ಅನುಷ್ಠಾನ ಆಗಿಲ್ಲ. ಆಗಲೇ ಬೋಗಸ್ ಬಜೆಟ್ ಅಂತ ಬಿಜೆಪಿಯವರು ಹೇಳ್ತಿದಾರೆ. ವಿಶ್ಲೇಷಣೆಗಿಂತ ತಮ್ಮ ಪಕ್ಷದ ಚಟುವಟಿಕೆಗಳ ಬಗ್ಗೆ ಗಮನ ನೀಡಿ. ಬಜೆಟ್ ನಡೀದಿತಿದೆ. ಪ್ರತಿ ಪಕ್ಷದ ನಾಯಕರ ಆಯ್ಕೆ ಆಗಿಲ್ಲ'' ಎಂದು ಹೇಳಿದರು.
''ಬಿಜೆಪಿಯವರು ವಲಯವಾರು ಅನುದಾನ ನೀಡ್ತಿದ್ರು, ನಾವು ಇಲಾಖೆವಾರು ಅನುದಾನ ನೀಡಿದ್ದೇನೆ. ಜಲಜೀವನ್ ಮಿಷನ್ನಲ್ಲಿ ಕನ್ನಡಿಗರ ದುಡ್ಡು ಇದೆ. ಥರ್ಡ್ ಪಾರ್ಟಿ ಆಡಿಟಿಂಗ್ಗೆ ಸಿದ್ಧವಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಜೆಟ್ ತಲುಪುತ್ತಿದೆ. ಐಟಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಎಲ್ಲಾ ಇಲಾಖೆಗಳಿಗೆ ಯೋಜನೆ ಇದೆ. ನಾನು ಸಚಿವರಾಗಿ 100 ಯೋಜನೆಗಳಗೆ ಕೇಳಿರುತ್ತೇವೆ. ಅದರಲ್ಲಿ 60 ರಷ್ಟು ಆಗುತ್ತವೆ. ಐದು ಗ್ಯಾರಂಟಿಗಳು ಜಾರಿ ಮಾಡಬೇಕು. ಇದರಿಂದ ನಾಲ್ಕು ಕೋಟಿ ಜನರಿಗೆ ಅನುಕೂಲ ಆಗಲಿದೆ'' ಎಂದರು.
''ಇವತ್ತಿನ ಬಜೆಟ್ ಗಮನಿಸಿದರೆ, ಮತ್ತೊಮ್ಮೆ ಕರ್ನಾಟಕ ಆರ್ಥಿಕ ಪ್ರಗತಿಗೆ ದಾರದೀಪ ಆಗಲಿದೆ. ಸಾಮಾಜಿಕ, ಆರ್ಥಿಕ ಹಿಂದುಳಿದ, ಪ.ಜಾ, ಪ.ಪಂ ಸೇರಿದಂತೆ ಎಲ್ಲರಿಗೂ ಬಜೆಟ್ ಅನುಕೂಲ ಇದೆ. ಮಹಿಳೆಯರು, ಯುವಕರು, ಎಲ್ಲರಿಗೂ ಅನುಕೂಲ ಆಗುವ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದರು.
ಮಳೆಯಲ್ಲೇ ಮುಂದೂವರಿದ ಪ್ರತಿಭಟನೆ: ಮಳೆಯ ನಡುವೆಯೇ ಕೆಲ ಕಾಲ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಚಿವರು, ಶಾಸಕರು, ನಂತರ ಮಳೆ ಹೆಚ್ಚಾಗುತ್ತಿದ್ದಂತೆ ಪ್ರತಿಭಟನೆ ಕೈ ಬಿಟ್ಟು ಹೊರಟರು. ಮಳೆಯಲ್ಲೇ ಪ್ರತಿಭಟನೆ ಮುಂದುವರಿಸಿದ್ದ ಸಲೀಂ ಅಹ್ಮದ್ ಹಾಗೂ ಕೆಲ ಕಾರ್ಯಕರ್ತರನ್ನು ನಂತರ, ಡಿ.ಕೆ. ಶಿವಕುಮಾರ್ ಸಹ ಸೇರಿಕೊಂಡರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ''ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅವಮಾನ. ಏಳು ಲಕ್ಷ ಲೀಡ್ನಲ್ಲಿ ಗೆದ್ದಿದ್ರು. ಗಾಂಧಿ ಕುಟುಂಬ ದೇಶಕ್ಕೆ ತ್ಯಾಗ ಮಾಡಿದೆ. ನಮ್ಮ ರಾಜ್ಯದಲ್ಲಿ ಭಾಷಣ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಇದು ಬಿಜೆಪಿಯ ಕುತಂತ್ರ. ರಾಹುಲ್, ಸೋನಿಯಾ ಅವರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ರಾಹುಲ್ ಭಾರತ್ ಜೋಡೋ ಯಾತ್ರೆ ಮಾಡಿದ್ರು. ದೇಶ ಒಗ್ಗೂಡಿಸುವ ಕೆಲಸ ಮಾಡಿದ್ರು. ಇದನ್ನು ಸಹಿಸದೇ ಸಂಸತ್ ಸ್ಥಾನದಿಂದ ರದ್ದು ಮಾಡಿಸಿದ್ದಾರೆ. ನಮಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ. ಮಳೆ ನಡುವೆ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಹೋರಾಟ ಮುಂದುವರೆಯುತ್ತೆ'' ಎಂದರು.
ಬ್ರಾಂಡ್ ಬೆಂಗಳೂರು ಸ್ವಾಭಿಮಾನದ ಹೆಸರು ಉಳಿಸುತ್ತೇವೆ-ಡಿಕೆಶಿ: ಬಜೆಟ್ ಮಂಡನೆ ಬಗ್ಗೆ ವಿಪಕ್ಷಗಳ ಟೀಕೆ ವಿಚಾರ ಮಾತನಾಡಿದ ಅವರು, ''ನಾವು ಕೊಟ್ಟ ಮಾತು ಉಳಿಸಿದ್ದೇವೆ. ಗ್ಯಾರಂಟಿಗಳ ಘೋಷಣೆ ಜಾರಿ ಮಾಡಿದ್ದೇವೆ. ಪ್ರಣಾಳಿಕೆ ಭರವಸೆಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ. ಬೊಮ್ಮಾಯಿ ಬಜೆಟ್ ಮಂಡನೆ ಮಾಡಿದ್ರು. ಅದಕ್ಕೆ ಒಂದು ಹೊಸ ರೂಪ ಕೊಟ್ಟಿದ್ದೇವೆ. ಬ್ರಾಂಡ್ ಬೆಂಗಳೂರು ಸ್ವಾಭಿಮಾನ ಹೆಸರು ಉಳಿಸುವ ಕೆಲಸ ಮಾಡುತ್ತೇವೆ. ನಮಗೆ ಸಂಪನ್ಮೂಲಗಳ ಕ್ರೋಢೀಕರಣ ಗೊತ್ತಿದೆ. ಎಲ್ಲ ಪ್ಲಾನ್ ಪ್ರಕಾರ ಆಗುತ್ತಿದೆ'' ಎಂದು ಹೇಳಿದರು.
ಇದನ್ನೂ ಓದಿ: ಸಿದ್ದು ಮಂಡಿಸಿದ್ದು ರಿವರ್ಸ್ ಗೇರ್ ಬಜೆಟ್, ಜನವಿರೋಧಿ ಎಂದ ಬಸವರಾಜ ಬೊಮ್ಮಾಯಿ..!