ಬೆಂಗಳೂರು: ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಆನ್ಲೈನ್ ಮಾತ್ರವಲ್ಲದೇ ಇನ್ಮುಂದೆ ಖುದ್ದು ರೈಲ್ವೇ ನಿಲ್ದಾಣಕ್ಕೆ ಹೋಗಿ ಟಿಕೆಟ್ ಬುಕ್ ಮಾಡಬಹುದು. ಇಂದಿನಿಂದ ನಿಗದಿಪಡಿಸಿದ ರೈಲ್ವೇ ಸ್ಟೇಷನ್ನ ಪಿಆರ್ಎಸ್( ಪ್ರಯಾಣಿಕರ ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರ) ಕಾರ್ಯಾಚರಣೆ ನಡೆಸಲಿದ್ದು, ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
ನೈರುತ್ಯ ರೈಲ್ವೇ ವಿಭಾಗದಲ್ಲಿ ಬರುವ ಆಯ್ದ 17 ರೈಲು ನಿಲ್ದಾಣಗಳಾದ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ವಿಜಯಪುರ, ಧಾರವಾಡ, ಹೊಸಪೇಟೆ, ವಾಸ್ಕೋಡಿ-ಗಾಮ, ಬೆಂಗಳೂರು ನಗರ ರೈಲು ನಿಲ್ದಾಣ, ಯಶವಂತಪುರ, ಬೆಂಗಳೂರ ಕಂಟ್ಮೋನೆಂಟ್, ಬಂಗಾರಪೇಟೆ, ಕೆಂಗೇರಿ, ಕೆ.ಆರ್.ಪುರ, ಎಸ್.ಎಸ್.ಪಿ. ನಿಲಯಂ, ಮೈಸೂರು, ದಾವಣಗೆರೆ ಹಾಗೂ ಶಿವಮೊಗ್ಗ ರೈಲು ನಿಲ್ದಾಣಗಳಿಂದ ರೈಲು ಹೊರಡುವ ಸ್ಥಳಗಳಿಗೆ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ರಾಜಧಾನಿ ವಿಶೇಷ ರೈಲುಗಳಿಗೆ, ಕರ್ನಾಟಕದ ಜಿಲ್ಲೆಗಳೊಳಗಿನ ರೈಲುಗಳಿಗೆ ಹಾಗೂ ಘೋಷಣೆಯಾದ 200 ರೈಲುಗಳಿಗೆ ಕೌಂಟರ್‌ಗಳಲ್ಲಿ ಕಾಯ್ದಿರಿಸಬಹುದು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದ ಜೊತೆಗೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.