ETV Bharat / state

ಪರೀಕ್ಷೆಗೆ ಓದೋದು ಬಿಟ್ಟು ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರು! - ಕಿಟ್​

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರಿಬ್ಬರು ಲಾಕ್​ಡೌನ್​ ವೇಳೆ ಬಡ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮಾಸ್ಕ್​, ನ್ಯಾಪ್​ಕಿನ್​, ಶಾಂಪೂ ಮುಂತಾದ ಸಾಮಾಗ್ರಿಗಳಿರುವ ಕಿಟ್​ಗಳನ್ನು ವಿತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

sslc students helped poor women
ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರ ಸಹಾಯಹಸ್ತ
author img

By

Published : Apr 30, 2020, 7:26 PM IST

ಬೆಂಗಳೂರು: ಲಾಕ್​​​ಡೌನ್ ಸದ್ಯಕ್ಕೆ ಬಡವರ ಜೀವನವನ್ನು ಸಂಕಷ್ಟಕ್ಕೆ ನೂಕಿದೆ. ನಿರ್ಗತಿಕರು ಒ‌ಂದೊತ್ತು ಊಟಕ್ಕೆ ದಾನಿಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತವರ ಕಷ್ಟಕ್ಕೆ ಮಿಡಿದ ಇಬ್ಬರು ಎಸ್​​ಎಸ್​ಎಲ್​​​ಸಿ ವಿದ್ಯಾರ್ಥಿನಿಯರು ಸಮಾಜಮುಖಿ‌ ಕೆಲಸ ಮಾಡಿ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರ ಸಹಾಯಹಸ್ತ

ಸಿಲಿಕಾನ್ ಸಿಟಿ ನಿವಾಸಿಗಳಾದ ಟಿಯಾ ಪೂವಯ್ಯ ಹಾಗೂ ನಿಖಿತಾ ಖನ್ವಾ ಎಂಬ ಇಬ್ಬರು ಸ್ನೇಹಿತೆಯರು ಸದ್ಯ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತಯಾರಾಗಬೇಕಿತ್ತು. ಈ ವೇಳೆ ಓದಿಗಾಗಿ, ಪರೀಕ್ಷಾ ತಯಾರಿಗೆ ಸಮಯ ಮೀಸಲಿಡಬೇಕಿದ್ದ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಬ್ಬರು ದಿಟ್ಟ ನಿರ್ಧಾರ ತೆಗೆದುಕೊಂಡು ಮಹಿಳೆಯರಿಗೆ ಬೇಕಾದ ಸ್ಯಾನಿಟರಿ ಪ್ಯಾಡ್, ಮಾಸ್ಕ್ ಇರುವ ಸಾವಿರ ಕಿಟ್​​ಗಳನ್ನು ಮಹಿಳೆಯರಿಗೆ ಹಂಚುತ್ತಿದ್ದಾರೆ.

ಈ ಕಿಟ್​ಗಳಿಗೆ ತಮ್ಮ ಸಂಬಂಧಿಕರು, ಸ್ನೇಹಿತರು ಮುಂತಾದವರ ಬಳಿ ಇನ್​​ಸ್ಟಾಗ್ರಾಂನಲ್ಲಿ ಹಣ ಸಂಗ್ರಹಿಸಿದ್ದಾರೆ. ಅವುಗಳನ್ನು ಹೇಗೆ ಮಹಿಳೆಯರಿಗೆ ತಲುಪಿಸಬೇಕೆಂದು ತಿಳಿಯದೇ ಇದ್ದಾಗ ಕೋರಮಂಗಲ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಈಶ್ವರಿ ಅವರನ್ನು ನೂಪುರ್ ಎಂಬುವರ ಸಹಾಯದಿಂದ ಭೇಟಿಯಾಗಿದ್ದಾರೆ.

ಈಗಾಗಲೇ ಈಶ್ವರಿಯವರು ಬಡಜನರಿಗೆ, ಮಹಿಳೆಯರಿಗೆ ಲಾಕ್​​ಡೌನ್ ಸಂದರ್ಭದಲ್ಲಿ ಸಹಾಯ‌ ಮಾಡಿ ಹೆಸರುವಾಸಿಯಾಗಿದ್ದು, ಬೆಂಗಳೂರು ಆಗ್ನೇಯ ವಿಭಾಗದ ಬಡ ಮಹಿಳೆಯರಿಗೆ ಈಶ್ವರಿ ಅವರ ನೇತೃತ್ವದಲ್ಲಿ ಟಿಯಾ ಪೂವಯ್ಯ ಹಾಗೂ ನಿಖಿತಾ ಖನ್ವಾ ನ್ಯಾಪ್​ಕಿನ್​, ಶಾಂಪೂ, ಸೋಪ್​, ಮಾಸ್ಕ್​ ಒಳಗೊಂಡ ಕಿಟ್​ಗಳನ್ನು ವಿತರಿಸಲಾಗಿದೆ. ಮಹಿಳೆಯರಿಗೆ ನೆರವಾಗಲು ಬಂದಿರುವ ಈ ವಿದ್ಯಾರ್ಥಿನಿಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.