ETV Bharat / state

ಆಮ್ಲಜನಕ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚಳ : ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಎಸ್​ಆರ್​ಪಿ ಕಿಡಿ - ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್

ಒಂದೇ ದಿನದಲ್ಲಿ ಒಂದು ಸರ್ಕಾರವನ್ನು ಉರುಳಿಸುವ, ಹೊಸ ಸರ್ಕಾರ ತರುವ ಬಿಜೆಪಿ ನಾಯಕರಿಗೆ ರಾಜ್ಯದ ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಎಸ್ ಆರ್​ ಪಾಟೀಲ್ ಪ್ರಶ್ನಿಸಿದ್ದಾರೆ. ಅಲ್ಲದೆ, ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಆಗಿರುವುದು ಆತಂಕಕಾರಿ ಎಂದಿದ್ದಾರೆ.

srp
srp
author img

By

Published : May 5, 2021, 4:55 PM IST

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಈ ಆತಂಕ ವ್ಯಕ್ತಪಡಿಸಿರುವ ಅವರು, ಒಂದೇ ದಿನದಲ್ಲಿ ಒಂದು ಸರ್ಕಾರವನ್ನು ಉರುಳಿಸುವ, ಹೊಸ ಸರ್ಕಾರ ತರುವ ಬಿಜೆಪಿ ನಾಯಕರಿಗೆ ರಾಜ್ಯದ ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲ ಮಾಡಲು ತೋರಿದ ಆಸಕ್ತಿಯನ್ನು ಜನರ ಜೀವ ಉಳಿಸಲು ಬಳಸಿದ್ರೆ ಅಮಾಯಕ ಜನರ ಜೀವವಾದರೂ ಉಳಿಯುತ್ತಿತ್ತು. ರಾಜ್ಯದಲ್ಲಿ ಆಕ್ಸಿಜನ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಸರ್ಕಾರ ಆಕ್ಸಿಜನ್ ಪೂರೈಕೆಯತ್ತ ಗಮನ ಹರಿಸುತ್ತಿಲ್ಲ. ಪ್ರತಿದಿನ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಸಾಯುತ್ತಿರುವವರಿಗಿಂತ ಆಕ್ಸಿಜನ್ ಇಲ್ಲದೇ ಪ್ರಾಣ ಬಿಡುವವರ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ.

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ದೊಡ್ಡ ಮಟ್ಟದ ಆಕ್ಸಿಜನ್ ಅನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಖಾಸಗಿ ಆಕ್ಸಿಜನ್ ಪ್ಲಾಂಟ್ ಮಾಲೀಕರು ಆಕ್ಸಿಜನ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್ ನಮ್ಮ ರಾಜ್ಯದಲ್ಲೇ ಬಳಸಲು ಕೇಂದ್ರ ಸರ್ಕಾರ ಅನುಮತಿಸುತ್ತಿಲ್ಲ. ರಾಜ್ಯದಲ್ಲಿ ಖಾಸಗಿ ಆಕ್ಸಿಜನ್ ಪ್ಲಾಂಟ್​ ಗಳಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಅನ್ನು ಸ್ಥಳೀಯವಾಗಿ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರ ನಿಜಕ್ಕೂ ಕೆಲಸ ಮಾಡುತ್ತಿದೆಯಾ..? ಎಂದು ಎಸ್​ ಆರ್​ ಪಾಟೀಲ್​ ಪ್ರಶ್ನಿಸಿದ್ದಾರೆ.

ವ್ಯಾಕ್ಸಿನ್ ಅಭಾವ:
ಕರ್ನಾಟಕದಲ್ಲಿ ವ್ಯಾಕ್ಸಿನ್ ನ ತೀವ್ರ ಅಭಾವ ಇದೆ. ಇಡೀ ರಾಜ್ಯದಲ್ಲಿ ವ್ಯಾಕ್ಸಿನ್ ಅಭಿಯಾನ ಕುಂಟುತ್ತಾ ಸಾಗಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ ಸರಾಸರಿ 30ರಿಂದ 40ಸಾವಿರ ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿವೆ. ದಿನಕ್ಕೆ 200 ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ವ್ಯಾಕ್ಸಿನ್ ಸಂಗ್ರಹವೇ ಇಲ್ಲ. ಭಾನುವಾರ ರಾಜ್ಯದಲ್ಲಿ 23 ಸಾವಿರ, ಸೋಮವಾರ 60 ಸಾವಿರ, ನಿನ್ನೆ 36 ಸಾವಿರ ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಡೋಸ್ ವ್ಯಾಕ್ಸಿನ್ ಹಾಕಲಾಗುತ್ತಿತ್ತು. ಸೋಂಕು ಹೆಚ್ಚೆಚ್ಚು ಸಾಂಕ್ರಾಮಿಕವಾಗುತ್ತಿರುವ ಸಂದರ್ಭದಲ್ಲಿ ವ್ಯಾಕ್ಸಿನೇಶನ್ ಹೆಚ್ಚಿಸಬೇಕಾದ ಸರ್ಕಾರ ಕೈ ಕಟ್ಟಿ ಕುಳಿತಿದೆ ಎಂದು ಪಾಟೀಲ್​ ಆರೋಪಿಸಿದ್ದಾರೆ.

ರಾಜ್ಯದಲ್ಲಿ ದಿನಕ್ಕೆ ಸರಾಸರಿ 30 ರಿಂದ 40 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಲಸಿಕೆ ಅಭಿಯಾನವನ್ನು ಸಮರೋಪಾದಿಯಲ್ಲಿ ಮಾಡಿ ಸೋಂಕು ಹರಡದಂತೆ ತಡೆಯಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ಕೊರೊನಾ ವಿಷಯದಲ್ಲಿ ಮಾಡುತ್ತಿರುವುದೆಲ್ಲವೂ ತದ್ವಿರುದ್ಧ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ವ್ಯಾಕ್ಸಿನ್ ವಿಷಯದಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ಮೊದಲು ಜನರ ಜೀವ ಉಳಿಸುವ ಕೆಲಸ ಮಾಡಿ. ರಾಜ್ಯದ ಪಾಲಿನ ವ್ಯಾಕ್ಸಿನ್ ಅನ್ನು ಕೇಂದ್ರದಿಂದ ಪಡೆಯಲು ಇರುವ ಅಡ್ಡಿಯಾದರೂ ಏನು? 2 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿ ಆದೇಶವಾಗಿದೆ ಎಂದಿರಲ್ಲ ಅದು ಯಾವಾಗ ಬರುತ್ತೆ..? ಎಂದು ಎಸ್ ಆರ್​ ಪಿ ​ಕೇಳಿದ್ದಾರೆ.

ರಾಜ್ಯದ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋದವರನ್ನು ವಾಪಸ್ ಕಳಿಸಲಾಗುತ್ತಿದೆ. ಹಿರಿಯ ನಾಗರೀಕರು ವ್ಯಾಕ್ಸಿನೇಶನ್ ಸೆಂಟರ್ ಗಳಿಗೆ ಅಲೆಯುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ 18 ವರ್ಷ ಮೀರಿದವರಿಗೂ ವ್ಯಾಕ್ಸಿನ್ ಕೊಡ್ತೀವಿ ಅಂತ ಈ ಭಂಡ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ. ಕರ್ನಾಟಕದ ಒಟ್ಟಾರೆ ಆಕ್ಸಿಜನ್ ಬೇಡಿಕೆ ದಿನಕ್ಕೆ 1,800 ಮೆಟ್ರಿಕ್ ಟನ್ ನಷ್ಟಿದೆ. ಆದ್ರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ದಿನ ಕೇವಲ 865 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಮಾತ್ರ ಪೂರೈಕೆಯಾಗುತ್ತಿದೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನ 935 ಮೆಟ್ರಿಕ್ ಟನ್ ಆಕ್ಸಿಜನ್ ಕೊರತೆ ಇದೆ ಎಂದು ಎಸ್​ ಆರ್​ ಪಾಟೀಲ್​ ಆತಂಕ ವ್ಯಕ್ತಪಡಿಸಿದ್ದಾರೆ.

ವಾಸ್ತವ ಸ್ಥಿತಿ ಹೀಗಿರುವಾಗ ರಾಜ್ಯದ ಬಿಜೆಪಿ ಸರ್ಕಾರ ಎಲ್ಲವೂ ಸರಿಯಾಗಿದೆ ಎಂದು ಸುಳ್ಳು ಹೇಳುತ್ತಿದೆ. ಬೇಡಿಕೆಯ ಅರ್ಧದಷ್ಟನ್ನೂ ನರೇಂದ್ರ ಮೋದಿ ಅವರ ಸರ್ಕಾರ ರಾಜ್ಯಕ್ಕೆ ಪೂರೈಸುತ್ತಿಲ್ಲ ಅಂದರೆ ಕೊರೊನಾ ಸೋಂಕಿತರ ಜೀವ ಉಳಿಸಲು ಸಾಧ್ಯವಾ..? ಬೆಂಗಳೂರು ನಗರವೊಂದಕ್ಕೆ 1,000 ದಿಂದ 1,200 ಮೆಟ್ರಿಕ್ ಟನ್ ಆಕ್ಸಿಜನ್ ಪ್ರತಿ ದಿನ ಅಗತ್ಯವಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಪೂರೈಕೆ ಮಾಡುತ್ತಿರುವ ಆಕ್ಸಿಜನ್ ನಿಂದ ಬೆಂಗಳೂರಿನ ಬೇಡಿಕೆಯನ್ನೇ ಪೂರೈಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್ ಆದೇಶ:

ರಾಜ್ಯಕ್ಕೆ ಬೇಕಾಗುವಷ್ಟು ಆಕ್ಸಿಜನ್ ಅನ್ನು ಪೂರೈಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಾದ 1,800 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಪೂರೈಸಬೇಕು ಎಂದು ಆಗ್ರಹಿಸುತ್ತೇನೆ. ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಬೇಡಿಕೆಯಷ್ಟು ಆಕ್ಸಿಜನ್ ಪೂರೈಕೆ ಮಾಡುವಲ್ಲಿ ವಿಫಲವಾದರೆ ಸಾವಿರಾರು ಕೊರೊನಾ ಸೋಂಕಿತರು ಜೀವ ಬಿಡಬೇಕಾಗುತ್ತದೆ. ಆಕ್ಸಿಜನ್ ಇಲ್ಲದೇ ಸಂಭವಿಸುವ ಪ್ರತಿ ಸಾವುಗಳಿಗೆ ನರೇಂದ್ರ ಮೋದಿ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಸ್​ಆರ್​ಪಿ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.