ETV Bharat / state

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಉಗುಳಿದ್ರೆ ಬೀಳುತ್ತೆ ದಂಡ : ಈವರೆಗೆ ವಸೂಲಿ ಆದ ಹಣ ಎಷ್ಟು ಗೊತ್ತಾ?

ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ Beautiful Bangalore ಹಾಗೂ ಸಾರೇ ಜಹಾಂಸೆ ಅಚ್ಚಾ (Sare Jahan se accha) ಫುಣೆ ತಂಡಗಳು "ಉಗುಳುವ ನಿಷೇಧದ ಅಭಿಯಾನ"ವನ್ನ ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿದ್ದಾರೆ.‌

ಉಗುಳುವ ನಿಷೇಧದ ಅಭಿಯಾನಕ್ಕೆ ಚಾಲನೆ
ಉಗುಳುವ ನಿಷೇಧದ ಅಭಿಯಾನಕ್ಕೆ ಚಾಲನೆ
author img

By

Published : Aug 7, 2021, 10:24 AM IST

ಬೆಂಗಳೂರು : ಶುಚಿತ್ವ ಹಾಗೂ ಉತ್ತಮ ಹವ್ಯಾಸಗಳಿಂದಾಗಿ ಎಲ್ಲರೂ ದೇಹಾರೋಗ್ಯವನ್ನು ಕಾಪಾಡಿಕೊಳ್ಳೊವುದು ಅತ್ಯಗತ್ಯ.‌ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಬರಹವಿರುವ ಅಭಿಯಾನದ ವಾಹನಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವುದಲ್ಲದೆ, ಶುಚಿತ್ವಕ್ಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ. ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಕಳೆದ ಜೂನ್ 2020 ರಿಂದ ಜಾರಿಗೆ ತರಲಾಗಿದೆ.

ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ Beautiful Bangalore ಹಾಗೂ ಸಾರೇ ಜಹಾಂಸೆ ಅಚ್ಚಾ (Sare Jahan se accha) ಪುಣೆ ತಂಡಗಳು "ಉಗುಳುವ ನಿಷೇಧದ ಅಭಿಯಾನ"ವನ್ನ ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿದ್ದಾರೆ.‌

ಕೊರೊನಾ ಮಹಾಮಾರಿ ಪ್ರಪಂಚವನ್ನೇ ತಲ್ಲಣಕ್ಕೆ ಗುರಿ ಮಾಡಿರುವ ಸಂದರ್ಭದಲ್ಲಿ ಇಂತಹ ಅಭಿಯಾನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಾಗೂ ಈ ಸಂದೇಶವನ್ನು ಎಲ್ಲಾ ಕಡೆಗೂ ಸಾರಬೇಕೆಂದು ಕೆಎಸ್ಆರ್ ಟಿಸಿ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ S.R. ಚಂದ್ರ ಶೇಖರ್ ಮನವಿ ಮಾಡಿದ್ದಾರೆ.‌

ಈ ಸಂದರ್ಭದಲ್ಲಿ ನಿಗಮದ ಪರಿಸರ ಅಧಿಕಾರಿ ಸತೀಶ್, Beautiful Bangalore ತಂಡದ ಸಂಸ್ಥಾಪಕಿ ಒಡೆಟ್ ಕಾತರಕ್ ಹಾಗೂ Sare jaha se aacha ದ ಸಂಸ್ಥಾಪಕ ನಿರ್ದೇಶಕರಾದ ರಾಜಾ ನರಸಿಂಹನ್ ಹಾಗೂ ಪ್ರೀತಿ ರಾಜಾ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರಭು ಕಾಶೀನಾಥ್ ನೆರೆದಿದ್ದ ಜನರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಈ ಜಾಗೃತಿ ಕುರಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ ‌ನೀಡಿದ ವಿಡಿಯೋ ಸಂದೇಶವನ್ನ ಕೂಡ ಪ್ರದರ್ಶಿಸಲಾಯಿತು.‌

ಇದನ್ನೂ ಓದಿ : ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳುಹಿಸಲಿದ್ದೇನೆ: ತುಮಕೂರಲ್ಲಿ CM ಹೇಳಿಕೆ

ಸಾರ್ವಜನಿಕ‌ ಸ್ಥಳಗಳಾದ ನಿಗಮದ ಬಸ್ ನಿಲ್ದಾಣಗಳು, ಘಟಕ, ಕಾರ್ಯಾಗಾರ ಮತ್ತು ಕಚೇರಿಯ ಪ್ರದೇಶಗಳಲ್ಲಿ ಉಗುಳುವವರಿಗೆ ಬಿಬಿಎಂಪಿ ಮಾರ್ಷಲ್‌ಗಳಿಂದ ಈವರೆಗೂ ರೂ.100 ದಂಡವನ್ನ ವಿಧಿಸಲಾಗುತ್ತಿತ್ತು. ಅದರಂತೆ ಜೂನ್ 2020 ರಿಂದ ಮಾರ್ಚ್ 2021 ರವರೆಗೆ ರೂ. 4,66,500 ದಂಡ ಹಾಗೂ ಏಪ್ರಿಲ್ 2021 ರಿಂದ ಜೂನ್ 2021 ರವರೆಗೆ ರೂ.17,100 ರೂ ದಂಡ ಸಂಗ್ರಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.