ETV Bharat / state

ವಿಜಯದಶಮಿ, ಚತ್ ಹಬ್ಬ: ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ

author img

By

Published : Oct 15, 2020, 9:54 AM IST

ಮುಂಬರುವ ದಿವನಗಳಲ್ಲಿ ದೇಶಾದ್ಯಂತ ವಿಜಯದಶಮಿ ಹಬ್ಬ ಹಾಗೂ ಚತ್ ಹಬ್ಬ ಆಚರಣೆ ಇರುವ ಕಾರಣಕ್ಕೆ ನೈರುತ್ಯ ರೈಲ್ವೆ ಇಲಾಖೆ 22 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

Special Trains service from Southwest Railway
ವಿಜಯದಶಮಿ - ಚತ್ ಹಬ್ಬ ಆಚರಣೆ; ನೈರುತ್ಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ

ಬೆಂಗಳೂರು: ವಿಜಯದಶಮಿ ಹಾಗೂ ಚತ್ ಹಬ್ಬಾಚರಣೆ ಇರುವ ಕಾರಣ ನೈರುತ್ಯ ರೈಲ್ವೆ ವಿಭಾಗ 22 ವಿಶೇಷ ರೈಲುಗಳನ್ನು ಓಡಿಸಲಿದೆ.

ಹಬ್ಬದ ಈ ಎಲ್ಲಾ ವಿಶೇಷ ರೈಲುಗಳು ಕಾಯ್ದಿರಿಸಿದ ಸೇವೆಗಳು​​ ಆಗಿವೆ. ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಪ್ರಯಾಣಿಕರು ಥರ್ಮಲ್ ಸ್ಕೀನಿಂಗ್​​ಗೆ ಒಳಗಾಗಬೇಕು. ಸಾಮಾಜಿಕ ಅಂತರ ನಿಯಮ ಪಾಲಿಸಿ ಫೇಸ್ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ. ರೈಲು ಪ್ರಯಾಣದ ವೇಳೆ ಕೋವಿಡ್​​ ಪ್ರೋಟೋಕಾಲ್ ಎಂದಿನಂತೆ ಜಾರಿಯಲ್ಲಿ ಇರಲಿದೆ ಎಂದು ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

ರೈಲು ಸೇವೆಗಳ ವಿವರ:

1) ಯಶವಂತಪುರ - ಕೊರ್ಬಾ (ಛತ್ತೀಸ್​ಗಡ)ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್​​ಪ್ರೆಸ್​​ ಸ್ಪೆಷಲ್ ಟ್ರೈನ್

*ಯಶವಂತಪುರದಿಂದ ಅಕ್ಟೋಬರ್ 23 ರಿಂದ ನವೆಂಬರ್ 27 ರವರೆಗೆ ಪ್ರತಿ ಶುಕ್ರವಾರದಂದು ಸಂಚಾರ.

*ಕೊರ್ಬಾದಿಂದ ಅಕ್ಟೋಬರ್ 25 ರಿಂದ ನವೆಂಬರ್ 29 ರವರೆಗೆ ಸಂಚಾರ.

2) ಮೈಸೂರು-ವಾರಣಾಸಿ ವೀಕ್ಲಿ ಎಕ್ಸ್​​ಪ್ರೆಸ್​​ ಸ್ಪೆಷಲ್ ಟ್ರೈನ್

*ಅಕ್ಟೋಬರ್ 20 ರಿಂದ ನವೆಂಬರ್ 26 ರವರೆಗೆ ಸಂಚಾರ- ಪ್ರತಿ ಮಂಗಳವಾರ ಮತ್ತು ಗುರುವಾರ ಮೈಸೂರಿನಿಂದ ಹೊರಡಲಿದೆ.

*ವಾರಣಾಸಿಯಿಂದ ಅಕ್ಟೋಬರ್ 22 ರಿಂದ ಸಂಚಾರ ಆರಂಭಗೊಂಡು ನವೆಂಬರ್ 28ರವರೆಗೆ ಸಂಚಾರ ನಡೆಸಲಿದೆ.

3) ಅಹಮದಾಬಾದ್- ಯಶವಂತಪುರ ವೀಕ್ಲಿ ಎಕ್ಸ್​​ಪ್ರೆಸ್ ಸ್ಪೆಷಲ್ ಟ್ರೈನ್

*ಅಹಮದಾಬಾದ್​​ನಿಂದ ಅಕ್ಟೋಬರ್ 27 ರಿಂದ ಡಿಸೆಂಬರ್ 1 ರವರೆಗೆ ಸಂಚಾರ.

*ಯಶವಂತಪುರದಿಂದ ಅಕ್ಟೋಬರ್ 25 ರಿಂದ ನವೆಂಬರ್ 29ರವರೆಗೆ ಸಂಚಾರ.

4) ಗಾಂಧಿಧಾಮ-ಕೆಎಸ್ಆರ್ ಬೆಂಗಳೂರುವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು

*ಗಾಂಧಿಧಾಮದಿಂದ ಅಕ್ಟೋಬರ್ 10 ರಿಂದ ಡಿಸೆಂಬರ್ 1 ರವರೆಗೆ ಸಂಚಾರ.‌

*ಕೆಎಸ್ಆರ್ ಬೆಂಗಳೂರಿನಿಂದ ಅಕ್ಟೋಬರ್ 24 ರಿಂದ ನವೆಂಬರ್ 28ರ ವರೆಗೆ ಸಂಚಾರ.

5) ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್​​​​ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು

*ಹುಬ್ಬಳ್ಳಿಯಿಂದ ಅಕ್ಟೋಬರ್ 22 ರಿಂದ ನವೆಂಬರ್ 30ರವರೆಗೆ ಸಂಚಾರ.

*ಲೋಕಮಾನ್ಯ ತಿಲಕ್ ಟರ್ಮಿನಸ್​​​ನಿಂದ ನವೆಂಬರ್ 23 ರಿಂದ ಡಿಸೆಂಬರ್ 1 ರವರೆಗೆ ಸಂಚಾರ ಮಾಡಲಿದೆ.

6) ಮೈಸೂರು-ಧಾರವಾಡ ಡೈಲಿ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು.

*ಮೈಸೂರಿನಿಂದ ಅಕ್ಟೋಬರ್ 21 ರಿಂದ ಡಿಸೆಂಬರ್ 1 ರವರೆಗೆ ಓಡಾಟ ನಡೆಸಲಿದೆ.

*ಧಾರವಾಡದಿಂದ ಅಕ್ಟೋಬರ್ 20 ರಿಂದ ನವೆಂಬರ್ 30ರವೆಗೆ ಸಂಚಾರ ಇರಲಿದೆ.

7) ವಾಸ್ಕೋಡಾ-ಗಾಮಾ - ಪಟ್ನಾ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು

*ವಾಸ್ಕೋ-ಡಾ-ಗಾಮಾದಿಂದ ಅಕ್ಟೋಬರ್ 21 ರಿಂದ ನವೆಂಬರ್ 25ರವರೆಗೆ ಪ್ರತಿ ಬುಧವಾರ ಹೊರಡಲಿದೆ.

*ಪಟ್ನಾದಿಂದ ಅಕ್ಟೋಬರ್ 24ರಿಂದ ನವೆಂಬರ್ 28ರವರೆಗೆ ಸಂಚರಿಸಲಿದೆ.

8) ಕೆಎಸ್ಆರ್ ಬೆಂಗಳೂರು - ಜೋದ್ಪುರ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು

*ಬೆಂಗಳೂರಿನಿಂದ ಅಕ್ಟೋಬರ್ 24 ರಿಂದ ಡಿಸೆಂಬರ್ 3 ರವರೆಗೆ ಸಂಚಾರ.

*ಜೋಧ್ಪುರನಿಂದ ಅಕ್ಟೋಬರ್ 21 ರಿಂದ ನವೆಂಬರ್ 30ರವರೆಗೆ ಓಡಾಟ.

9) ಹುಬ್ಬಳ್ಳಿ- ಸಿಕಂದರಾಬಾದ್ ಡೈಲಿ ಸ್ಪೆಷಲ್ ಟ್ರೈನ್

*ಹುಬ್ಬಳ್ಳಿ ಯಿಂದ ಅಕ್ಟೋಬರ್ 20 ರಿಂದ ನವೆಂಬರ್ 30ರವರೆಗೆ ಸಂಚಾರ.

*ಸಿಕಂದರಾಬಾದ್​​ನಿಂದ ಅಕ್ಟೋಬರ್ 21 ರಿಂದ ಡಿಸೆಂಬರ್ 1ರ ವರೆಗೆ ಸಂಚಾರ.

10) ಅಜ್ಮೇರ್- ಮೈಸೂರು ವೀಕ್ಲಿ ಎಕ್ಸ್‌ಪ್ರೆಸ್‌ ರೈಲು

*ಅಜ್ಮೇರ್​​ನಿಂದ ಅಕ್ಟೋಬರ್ 23‌ರಿಂದ ನವೆಂಬರ್ 29ರವರೆಗೆ ಪ್ರತಿ ಭಾನುವಾರ ಮತ್ತು ಶುಕ್ರವಾರ ಹೊರಡಲಿದೆ.‌

*ಮೈಸೂರಿನಿಂದ ಅಕ್ಟೋಬರ್ 20 ರಿಂದ ನವೆಂಬರ್ 26ರವರದೆ ಸಂಚಾರ ನಡೆಸಲಿದೆ.

11) ಹುಬ್ಬಳ್ಳಿ- ವಾರಣಾಸಿ ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು

*ಹುಬ್ಬಳ್ಳಿಯಿಂದ ಅಕ್ಟೋಬರ್ 23 ರಿಂದ ನವೆಂಬರ್‌ 27 ರವರಗೆ ಪ್ರತಿ ಶುಕ್ರವಾರದಂದು ಸಂಚಾರ.

*ವಾರಣಾಸಿಯಿಂದ ಅಕ್ಟೋಬರ್ 25 ರಿಂದ ನವೆಂಬರ್ 29ರವರೆಗೆ ಪ್ರತಿ ಭಾನುವಾರ ಓಡಾಟ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.