ETV Bharat / state

ಡಿ. 5ರಂದು ಕರ್ನಾಟಕ ಬಂದ್: ಬಿಗಿಭದ್ರತೆಗೆ ಕಮಲ್​ ಪಂತ್​ ವಿಶೇಷ ಸೂಚನೆ - bangalore latest news

ಡಿಸೆಂಬರ್ 5ರಂದು ಕರ್ನಾಟಕ ಬಂದ್ ಹಿನ್ನೆಲೆ, ಸಮಾಜಘಾತುಕ ಕೃತ್ಯಕ್ಕೆ ಕೈ ಹಾಕುವವರನ್ನು ವಶಕ್ಕೆ ಪಡೆಯತಕ್ಕದ್ದು, ಮುಷ್ಕರ ತಿಳಿಯಾಗುವವರೆಗೂ ಗರಿಷ್ಠ ಪೊಲೀಸ್ ನಿಯೋಜನೆ ಕಡ್ಡಾಯ, ಅಧಿಕಾರಿಗಳು ಹೆಲ್ಮೆಟ್, ರಿವಾಲ್ವರ್, ವಾಕಿಟಾಕಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು, ಭದ್ರತಾ ಮೇಲ್ವಿಚಾರಣೆಯನ್ನ ಡಿಸಿಪಿಗಳು ನಿರ್ವಹಿಸಬೇಕು, ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಭದ್ರತಾ ಕ್ರಮ ಕೈಗೊಳ್ಳತಕ್ಕದ್ದು, ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸತಕ್ಕದ್ದು, ಸಿಎಂ, ಸಚಿವರ ನಿವಾಸಗಳ ಬಳಿ ಹೆಚ್ಚಿನ ಭದ್ರತೆ ವಹಿಸತಕ್ಕದ್ದು ಎಂದು ಪೊಲೀಸ್​ ಅಧಿಕಾರಿಗಳಿಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​​​ ಸೂಚನೆ ನೀಡಿದ್ದಾರೆ.

Kamal Panth
ಬೆಂಗಳೂರು ನಗರ ಪೊಲೀಸ್​​ ಕಮಿಷನರ್​​ ಕಮಲ್​ ಪಂಥ್
author img

By

Published : Dec 3, 2020, 8:31 AM IST

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಡಿಸೆಂಬರ್ 5 ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿರುವ ಹಿನ್ನೆಲೆ, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​​ಗೆ ಬೆಂಗಳೂರು ನಗರ ಪೊಲೀಸ್​​ ಕಮಿಷನರ್​​ ಕಮಲ್​ ಪಂತ್​ ವಿಶೇಷ ಸೂಚನೆ ನೀಡಿದ್ದಾರೆ.

ಡಿಸೆಂಬರ್ 4 ರ ಮಧ್ಯರಾತ್ರಿಯಿಂದಲೇ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಇದ್ದು, ಡಿಸೆಂಬರ್ 5ರ ಬೆಳಗ್ಗೆ 4:30ರಿಂದ ಹೊಯ್ಸಳ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ವಿಶೇಷವಾಗಿ ಕೆಎಸ್ಆರ್​ಟಿಸಿ, ಬಿಎಂಟಿಸಿ, ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಇರುತ್ತದೆ. ಬಂದ್ ಱಲಿ ಹಿನ್ನೆಲೆ ಕೂಡ ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ.

Special notification to police department from Kamal Panth due to band
​​ ಕಮಿಷನರ್​​ ಕಮಲ್​ ಪಂತ್​​​ರಿಂದ ವಿಶೇಷ ಸೂಚನೆ

ಸಮಾಜಘಾತುಕ ಕೃತ್ಯಕ್ಕೆ ಕೈ ಹಾಕುವವರನ್ನು ವಶಕ್ಕೆ ಪಡೆಯತಕ್ಕದ್ದು, ಮುಷ್ಕರ ತಿಳಿಯಾಗುವವರೆಗೂ ಗರಿಷ್ಠ ಪೊಲೀಸ್ ನಿಯೋಜನೆ ಕಡ್ಡಾಯ, ಅಧಿಕಾರಿಗಳು ಹೆಲ್ಮೆಟ್, ರಿವಾಲ್ವರ್, ವಾಕಿಟಾಕಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು, ಭದ್ರತಾ ಮೇಲ್ವಿಚಾರಣೆಯನ್ನ ಡಿಸಿಪಿಗಳು ನಿರ್ವಹಿಸಬೇಕು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಭದ್ರತಾ ಕ್ರಮ ಕೈಗೊಳ್ಳತಕ್ಕದ್ದು, ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸತಕ್ಕದ್ದು, ಸಿಎಂ, ಸಚಿವರ ನಿವಾಸಗಳ ಬಳಿ ಹೆಚ್ಚಿನ ಭದ್ರತೆ ವಹಿಸತಕ್ಕದ್ದು, ಕೆಎಸ್ಆರ್​ಪಿ ತುಕಡಿಗಳ ನಿಯೋಜನೆ ಮಾಡಬೇಕೆಂದು ಕಮಲ್​ ಪಂತ್​​​​ ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 'ಏ ತೋ ಝಲಕ್​​​​ ಹೈ, ಪಿಕ್ಚರ್ ಅಭಿ ಬಾಕಿ ಹೈ': ಕನ್ನಡ ಸಂಘಟನೆಗಳ ವಿರುದ್ಧ ಯತ್ನಾಳ್ ಗುಡುಗು

ಡಿ. 5ಕ್ಕೆ ವಾಟಾಳ್ ನಾಗರಾಜ್ ಮತ್ತು ಕೆಲವು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್​​ಗೆ ಕರೆ ಕೊಡಲಾಗಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕಮಿಷನರ್ ಸೂಚನೆ ನೀಡಿದ್ದು, ಕನ್ನಡಪರ ಸಂಘಟನೆಗಳು ಮತ್ತು ಹೋರಾಟಗಾರರ ಸಂಪರ್ಕದಲ್ಲಿ ಪೊಲೀಸ್ ಅಧಿಕಾರಿಗಳು ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.