ಬೆಂಗಳೂರು: ಬ್ಯಾಡರಹಳ್ಳಿಯ ಲೋಟಸ್ ಆಯುರ್ವೇದಿಕ್ ಸ್ಪಾ ಮೇಲೆ ದಾಳಿ ನಡೆಸಿ ಓರ್ವ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ಬಿ.ಎನ್. ಶ್ರೀನಿವಾಸ್ ನೇತೃತ್ವದ ತಂಡ ನಗರದ ಮುದ್ದಿನಪಾಳ್ಯ ದೊಡ್ಡಣ್ಣ ಸರ್ಕಲ್ನಲ್ಲಿದ್ದ ಸ್ಪಾ ಮೇಲೆ ತಡರಾತ್ರಿ ದಾಳಿ ನಡೆಸಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣಿಕೆ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಪಾ ಒನರ್ ಚಂದ್ರಕಲಾ ಎಂಬಾಕೆಯನ್ನ ಬಂಧಿಸಿ, ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಮಸಾಜ್ ಹೆಸರಿನಲ್ಲಿ ಗಿರಾಕಿಗಳನ್ನು ಕರೆಸುತ್ತಿದ್ದರು ಎಂಬ ಆರೋಪ ಚಂದ್ರಕಲಾ ಮೇಲಿದೆ. ಅಕ್ರಮ ಚಟುವಟಿಕೆಗೆ ಜಾಗ ನೀಡಿದ ಕಟ್ಟಡದ ಮಾಲೀಕ ಆಂಜಿನಪ್ಪ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.