ಬೆಂಗಳೂರು : ಕೋವಿಡ್ ಪ್ರಕರಣಗಳು ಉಲ್ಭಣಗೊಂಡ ಹಿನ್ನೆಲೆ ನೈರುತ್ಯ ರೈಲ್ವೆ ವಿಭಾಗದಿಂದ ಇ-ಬುಕ್ಕಿಂಗ್ ಕೌಂಟರ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪ್ರಯಾಣಿಕರ ಕೊರತೆ ಹಿನ್ನೆಲೆ ಈಗಾಗಲೇ ರೈಲ್ವೆ ಸೇವೆಯನ್ನೂ ಸ್ಥಗಿತಗೊಳಿಸಲಾಗಿದ್ದು, ರಾಜ್ಯದ ಪ್ರಮುಖ ನಿಲ್ದಾಣಗಳಾದ ಮಂಡ್ಯದ ಬಿ.ಜಿ ನಗರ ಮತ್ತು ತುಮಕೂರಿನ ಎಡಿಯೂರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
ಓದಿ : ಬೆಡ್ ಸಿಗದೆ ಚಿಕಿತ್ಸೆಗಾಗಿ ಸೋಂಕಿತರು ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದಾರೆ: ಡಿಸಿ
ರಾಜ್ಯದಲ್ಲಿ ಮೇ 10 ರಿಂದ 24 ರ ವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಿ ಸಿಎಂ ಬಿಎಸ್ವೈ ಈಗಾಗಲೇ ಘೋಷಣೆ ಮಾಡಿದ್ದು, ಲಾಕ್ ಡೌನ್ ಅವಧಿಯಲ್ಲಿ ಬಸ್, ಆಟೋ, ಕ್ಯಾಬ್ಗಳ ಸಂಚಾರವೂ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕಾರ್ಮಿಕರು ನಗರದ ಬಿಟ್ಟು ಹೋಗದಂತೆ ಸಿಎಂ ಮನವಿ ಮಾಡಿದ್ದಾರೆ.