ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ 4 ನೇ ದಿನಕ್ಕೆ ಕಾಲಿಟ್ಟಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಮೆಮು ರೈಲುಗಳ ಕಾರ್ಯಾಚರಣೆ ನೈರುತ್ಯ ರೈಲ್ವೆ ವಿಸ್ತರಿಸಿದೆ.
ನೌಕರರ ಮುಷ್ಕರ ಮತ್ತು ಯುಗಾದಿ ಹಬ್ಬದ ನಿಮಿತ್ತ ಸಾರ್ವಜನಿಕ ಅನುಕೂಲಕ್ಕಾಗಿ ಬೆಂಗಳೂರು - ಮೈಸೂರು ಮೆಮು (MEMU) ರೈಲು ವಾರದ ಎಲ್ಲ ದಿನಗಳು (ರವಿವಾರ ಸಹ) ಸಂಚರಿಸಲಿದೆ.
ಈ ಮೊದಲು ಭಾನುವಾರ ಸಂಚಾರವಿರಲಿಲ್ಲ. ಇದೀಗ ಭಾನುವಾರವೂ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈಲುಗಾಡಿ ಸಂಖ್ಯೆ 06255, 06256, 06257, 06258 ಆಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.