ETV Bharat / state

ಕೃಷಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕು : ಕೂರುಬೂರು ಶಾಂತಕುಮಾರ್ - ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಬೇಕು

ರೈತರ ಸಾಲ ನೀತಿಯಲ್ಲಿ ಬದಲಾವಣೆ ತರಬೇಕು (ಕೃಷಿ ಭೂಮಿ ಮೌಲ್ಯದ ಶೇ 25 ರಷ್ಟು ಸಾಲ ನೀಡುವ ನೀತಿ) ಕಬ್ಬಿನ ಎಫ್ಆರ್‌ಪಿ ದರವನ್ನು ರೈತರ ಹೊಲದಲ್ಲಿ ನಿಗದಿಪಡಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತಹ ಕಾನೂನು ಜಾರಿ ಮಾಡಬೇಕು..

south indian states farmer leaders round table meet
ವಿವಿಧ ರಾಜ್ಯಗಳ ರೈತ ಮುಖಂಡರಿಂದ ದುಂಡು ಮೇಜಿನ ಸಭೆ
author img

By

Published : Mar 20, 2022, 4:01 PM IST

ಬೆಂಗಳೂರು : ಕೃಷಿ ಕಾಯ್ದೆ ಮಾರ್ಪಾಡು ಮಾಡಲು ತಮಿಳುನಾಡು, ತೆಲಂಗಾಣದಲ್ಲಿ ರೈತ ಸಭೆ ನಡೆಸಲಾಗಿದೆ. ನಿನ್ನೆ ಹಾಗೂ ಇಂದು ರೈತ ಮುಖಂಡರಿಂದ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ.

ಕೃಷಿ ಉತ್ಪನ್ನಗಳಿಗೆ ತಕ್ಷಣ ಜಿಎಸ್‌ಟಿ ತೆರಿಗೆ ರದ್ದು ಮಾಡಬೇಕು ಎಂಬುದು ಸಭೆಯಲ್ಲಿ ಎಲ್ಲ ರೈತ ಮುಖಂಡರ ಪ್ರಮುಖ ಬೇಡಿಕೆಯಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಕೃಷಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕೆಂದು ಕೂರುಬೂರು ಶಾಂತಕುಮಾರ್ ಅವರು ಆಗ್ರಹಿಸಿರುವುದು..

ವಿವಿಧ ರಾಜ್ಯಗಳ ರೈತ ಮುಖಂಡರಿಂದ ರಾಜಧಾನಿಯ ಚಿತ್ರಕಲಾ ಪರಿಷತ್​ನಲ್ಲಿ ಭಾನುವಾರ ದುಂಡು ಮೇಜಿನ ಸಭೆ ನೆಡೆಯಿತು. ಈ ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ರೈತ ಮುಖಂಡರು ಭಾಗಿಯಾಗಿದ್ದರು.

ರೈತರ ಸಾಲ ನೀತಿಯಲ್ಲಿ ಬದಲಾವಣೆ ತರಬೇಕು (ಕೃಷಿ ಭೂಮಿ ಮೌಲ್ಯದ ಶೇ 25 ರಷ್ಟು ಸಾಲ ನೀಡುವ ನೀತಿ) ಕಬ್ಬಿನ ಎಫ್ಆರ್‌ಪಿ ದರವನ್ನು ರೈತರ ಹೊಲದಲ್ಲಿ ನಿಗದಿಪಡಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತಹ ಕಾನೂನು ಜಾರಿ ಮಾಡಬೇಕು ಎಂದರು.

ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ರದ್ದು ಪಡಿಸಿದಂತೆ ರಾಜ್ಯದಲ್ಲಿ ಕೂಡ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನು ಅಧಿವೇಶನದಲ್ಲಿ ರದ್ದುಗೊಳಿಸಬೇಕು. ಈ ರೀತಿಯ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಿರುವುದಾಗಿ ತಿಳಿಸಿದರು.

ಕೋಡಿಹಳ್ಳಿ ನೇತೃತ್ವದ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ : ಕಳೆದ ಹಲವು ವಾರಗಳಿಂದ ರಾಜ್ಯದಲ್ಲಿ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ವಿವಿಧ ಪ್ರತಿಭಟನೆಗಳು, ಜಾಥಾಗಳು ನಡೆದುಕೊಂಡು ಬರುತ್ತಿವೆ. ಸಂಘಟನೆಗಳಿಂದ ಹಲವು ಸ್ಥಳಗಳಲ್ಲಿ ಪ್ರತಿಭಟನೆ, ಸಮಾವೇಶಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಾಳೆಯೂ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದೆ.

ಆದರೆ, ನಾಳಿನ ಪ್ರತಿಭಟನೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಸುವುದಿಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.