ETV Bharat / state

ಕಣ್ಣೆದುರೇ ತಾಯಿಯ ಶವವಿದ್ದರೂ ತಂದೆಯ ಜೀವ ಉಳಿಸಲು ಹೋರಾಡಿದ ಮಗ - bengalore BTM layout corona latest news 2021

ಕೊರೊನಾ ಮಹಾಮಾರಿಗೆ ರಾಜಧಾನಿ ಜನರು ತತ್ತರಿಸಿದ್ದಾರೆ. ಸಕಾಲಕ್ಕೆ ಆಕ್ಸಿಜನ್ ಇಲ್ಲದೆ ಕೆಲವರು ಸಾಯುತ್ತಿದ್ದರೆ, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮನೆಯಲ್ಲೇ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ.

son-traing-to-save-his-fathers-life-dispite-mother-body-lying-in-front-of-eyes
ಸೋಂಕಿತ ವ್ಯಕ್ತಿ
author img

By

Published : May 4, 2021, 9:38 PM IST

ಬೆಂಗಳೂರು: ಚಿಕಿತ್ಸೆ‌‌ ಹಾಗೂ ಮೂಲಸೌಲಭ್ಯವಿಲ್ಲದೆ ಕಣ್ಣೇದುರೇ ಸೋಂಕಿತ ತಾಯಿಯನ್ನು ಕಳೆದುಕೊಂಡ ಮಗ, ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿರುವ ತಂದೆಯನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸಪಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಕಂಡು ಬಂದಿದೆ.

ಕಣ್ಣೆದುರೇ ತಾಯಿಯ ಶವವಿದ್ದರೂ ತಂದೆಯ ಜೀವ ಉಳಿಸಲು ಹೋರಾಡಿದ ಮಗ

ಬಿಟಿಎಂ ಲೇಔಟ್ ಮೊದಲ ಹಂತದಲ್ಲಿ ಮನೆ ಮಾಡಿಕೊಂಡಿರುವ ಖಾಸಗಿ ಕಂಪನಿ ಉದ್ಯೋಗಿಯ ತಂದೆ ತಾಯಿಗೆ ಕೊರೊನಾ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಬೆಡ್​ಗಳ ಅಭಾವದಿಂದ ಮನೆಯಲ್ಲಿ ಪೋಷಕರಿಗೆ ಉಸಿರಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಆಕ್ಸಿಜನ್ ಸಿಲಿಂಡರ್ ತಂದಿಟ್ಟಿದ್ದರು. ಕಳೆದ‌ ಎರಡು‌ - ಮೂರು ದಿನಗಳಿಂದ ಆಕ್ಸಿಜನ್‌ ವ್ಯವಸ್ಥೆ ಮನೆಯಲ್ಲೇ ಕಲ್ಪಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕನ ತಾಯಿ ನಿನ್ನೆಯೇ ಮೃತಪಟ್ಟಿದ್ದಾರೆ.‌

ಇದೀಗ ಮನೆಯ ಮತ್ತೊಂದು‌ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಸ್ಥಿತಿಯೂ ಚಿಂತಾಜನಕವಾಗಿದ್ದು, ಒಂದೆಡೆ ತಾಯಿ ಶವ, ಮತ್ತೊಂದೆಡೆ ತಂದೆಯ ಜೀವ ಉಳಿಸಲು‌ ಪರದಾಡುತ್ತಿರುವ ಮಗನ ಸಂಕಷ್ಟ ಹೇಳ ತೀರದಾಗಿದೆ.

ಓದಿ: ಇಮ್ಯುನಿಟಿ ಜಾಸ್ತಿ ಅಂತ ಎಲ್ಲೆಂದರಲ್ಲಿ ಓಡಾಡೋ ಮುನ್ನ ಎಚ್ಚರ.. ರೂಪಾಂತರಿ ವೈರಸ್ ಯಾರನ್ನೂ ಬಿಡೋದಿಲ್ಲ ಜೋಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.