ETV Bharat / state

ಗ್ರಹಣ ಕಾಲದಲ್ಲಿ ಕಾಂಗ್ರೆಸ್ ಚಟುವಟಿಕೆಯೂ ಸ್ತಬ್ಧ? ಕುತೂಹಲ ಮೂಡಿಸಿದ ನಾಯಕರ ನಡೆ!

'ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ತರಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ಅದ್ಯಾಕೋ ಸೂರ್ಯಗ್ರಹಣ ಸಂದರ್ಭ ಸ್ತಬ್ಧರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Solar eclipse: Congress activity are halted
ಸೂರ್ಯಗ್ರಹಣ ಕಾಲ: ಕಾಂಗ್ರೆಸ್ ಚಟುವಟಿಕೆಯೂ ಸ್ಥಬ್ಧ!
author img

By

Published : Dec 26, 2019, 11:00 AM IST

ಬೆಂಗಳೂರು: 'ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ತರಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ಅದ್ಯಾಕೋ ಸೂರ್ಯಗ್ರಹಣ ಸಂದರ್ಭದಲ್ಲಿ ಸ್ತಬ್ಧರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರೇ ಸಾಕಷ್ಟು ಮುತುವರ್ಜಿವಹಿಸಿ ಖುದ್ದು ಕಾಯ್ದೆ ಜಾರಿಗೆ ಮುಂದಾಗಿದ್ದರು. ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಅವರು ಸಾಕಷ್ಟು ಆಸಕ್ತಿ ತೋರಿಸಿದ್ದರು. ಆದರೆ, ಅವರು ಇಂದು ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲೇ ಇದ್ದರೂ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಯಾರನ್ನೂ ಭೇಟಿಯೂ ಆಗುತ್ತಿಲ್ಲ. ಮನೆಯಿಂದ ಆಚೆ ತೆರಳದೇ ಇರಲು ಮಾಜಿ ಸಿಎಂ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ಇನ್ನೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ವಾರಕ್ಕೆ ಮೂರ್ನಾಲ್ಕು ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಇಂದು ಸುದ್ದಿಯಲ್ಲಿಲ್ಲ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರು ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಕೆಪಿಸಿಸಿ ಕಚೇರಿಗೆ ಅವರು ಬಂದಿದ್ದೇ ಕಡಿಮೆ. ಇದುವರೆಗೂ ಅವರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ನಿರಾಕರಣೆಯೂ ಆಗಿಲ್ಲ. ಆದರೆ, ನಿನ್ನೆಯವರೆಗೆ ರಾಜ್ಯ ಪ್ರವಾಸದಲ್ಲಿದ್ದ ಅವರು, ಇಂದು ಬೆಂಗಳೂರಿನಲ್ಲಿದ್ದು, ಮಧ್ಯಾಹ್ನದ ನಂತರದವರೆಗೂ ಯಾವುದೇ ಕಾರ್ಯಕ್ರಮ ಇರಿಸಿಕೊಂಡಿಲ್ಲ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲೇ ಇದ್ದರೂ ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಮಾಜಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಬೆಂಗಳೂರು ನಿವಾಸದಲ್ಲಿಯೇ ಇದ್ದರೂ ಯಾರನ್ನೂ ಭೇಟಿಯಾಗುವ ಅಥವಾ ಮನೆಯಾಚೆ ತೆರಳುವ ಕಾರ್ಯಕ್ರಮ ಇರಿಸಿಕೊಂಡಿಲ್ಲ.

ಹೋಮ-ಹವನ, ಪೂಜೆ-ಪುನಸ್ಕಾರ ಹಮ್ಮಿಕೊಳ್ಳದಿದ್ದರೂ, ಮನೆಯಾಚೆ ಬರದೇ ಗ್ರಹಣವನ್ನು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಚಟುವಟಿಕೆಯಿಂದ ದೂರವಿಡುವ ಮೂಲಕ ಆಚರಿಸಿದ್ದಾರೆ. ಈ ಮೂಲಕ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಮುಂದಾದವರೇ ಸೂರ್ಯಗ್ರಹಣಕ್ಕೆ ಬೆಲೆ ಕೊಟ್ಟು ಮನೆಯಲ್ಲಿ ಕುಳಿತಿದ್ದು ವಿಶೇಷ.

ಅಂದಹಾಗೆ ಬೆಂಗಳೂರಿನ ಪುರಭವನದಲ್ಲಿ ಪ್ರಗತಿಪರ ನಾಯಕರು ಉಪಹಾರ ಕೂಟ ಆಯೋಜಿಸಿದ್ದಾರೆ. ಅಲ್ಲದೇ ಚಾಲುಕ್ಯ ವೃತ್ತದ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲೆಲ್ಲಿಯೂ ಕಾಂಗ್ರೆಸ್ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಆಗಮಿಸುವ ಭರವಸೆಯನ್ನೂ ನೀಡಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಕಾಂಗ್ರೆಸ್ ಪಕ್ಷದ ನಾಯಕರ ನಿಲುವಿನ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

Intro:newsBody:ಗ್ರಹಣ ಕಾಲ ಕಾಂಗ್ರೆಸ್ ಚಟುವಟಿಕೆಯೂ ಸ್ಥಬ್ಧ!

ಬೆಂಗಳೂರು: “ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ತರಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ಅದ್ಯಾಕೋ ಸೂರ್ಯಗ್ರಹಣ ಸಂದರ್ಭ ಸ್ಥಬ್ಧರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಕಾಯ್ದೆ ಜಾರಿಗೆ ಮುಂದಾಗಿದ್ದವರು. ಸಾಕಷ್ಟು ಆಸಕ್ತಿಯನ್ನು ಸಹ ತೋರಿಸಿದ್ದರು. ಆದರೆ ಇಂದು ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲೇ ಇದ್ದರೂ, ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಯಾರನ್ನೂ ಭೇಟಿಯಾಗುತ್ತಿಲ್ಲ, ಮನೆಯಿಂದ ಆಚೆ ತೆರಳದೇ ಇರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.
ಇನ್ನೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ವಾರಕ್ಕೆ ಮೂರ್ನಾಲ್ಕು ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಇಂದು ಸುದ್ದಿಯಲ್ಲಿಲ್ಲ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರು ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಕೆಪಿಸಿಸಿ ಕಚೇರಿಗೆ ಬಂದಿದ್ದೇ ಕಡಿಮೆ. ಇದುವರೆಗೂ ಅವರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ನಿರಾಕರಣೆಯೂ ಆಗಿಲ್ಲ. ಆದರೆ ನಿನ್ನೆಯವರೆಗೆ ರಾಜ್ಯ ಪ್ರವಾಸದಲ್ಲಿದ್ದ ಅವರು, ಇಂದು ಬೆಂಗಳೂರಿನಲ್ಲಿದ್ದು, ಮಧ್ಯಾಹ್ನದ ನಂತರದವರೆಗೂ ಯಾವುದೇ ಕಾರ್ಯಕ್ರಮ ಇರಿಸಿಕೊಂಡಿಲ್ಲ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲೇ ಇದ್ದು, ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಮಾಜಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಬೆಂಗಳೂರು ನಿವಾಸದಲ್ಲಿಯೇ ಇದ್ದರೂ, ಯಾರನ್ನೂ ಭೇಟಿಯಾಗುವ, ಮನೆಯಾಚೆ ತೆರಳುವ ಕಾರ್ಯಕ್ರಮ ಇರಿಸಿಕೊಂಡಿಲ್ಲ.
ತೀರಾ ಹೋಮ, ಹವನ, ಪೂಜೆ, ಪುನಸ್ಕಾರ ಹಮ್ಮಿಕೊಳ್ಳದಿದ್ದರೂ, ಮನೆಯಾಚೆ ಬರದೇ ಗ್ರಹಣ ಸಂದರ್ಭವನ್ನು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಚಟುವಟಿಕೆಯಿಂದ ದೂರವಿಡುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಮುಂದಾದವರೇ ಸೂರ್ಯಗ್ರಹಣಕ್ಕೆ ಬೆಲೆ ಕೊಟ್ಟು ಮನೆಯಲ್ಲಿ ಕುಳಿತಿದ್ದು, ವಿಶೇಷ.
ಪ್ರಗತಿಪರರಿಗೆ ಇಲ್ಲ ಬೆಂಬಲ
ಅಂದಹಾಗೆ ಬೆಂಗಳೂರಿನ ಪುರಭವನದಲ್ಲಿ ಪ್ರಗತಿಪರ ನಾಯಕರು ಉಪಹಾರ ಕೂಟ ಆಯೋಜಿಸಿದ್ದಾರೆ. ಅಲ್ಲದೇ ಚಾಲುಕ್ಯ ವೃತ್ತದ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲೆಲ್ಲಿಯೂ ಕಾಂಗ್ರೆಸ್ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಆಗಮಿಸುವ ಭರವಸೆಯನ್ನೂ ನೀಡಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷದ ನಾಯಕರ ನಿಲುವಿನ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.