ETV Bharat / state

ಕೋವಿಡ್ ಸಮಯದಲ್ಲಿ KSRTC ಮಹತ್ವದ ಕಾರ್ಯ : ರೋಟರಿಯಿಂದ ಸಾಮಾಜಿಕ ಕಳಕಳಿ ಪ್ರಶಸ್ತಿ - KSRTC latest news

ದೇಶದ ಸಾರಿಗೆ ನಿಗಮಗಳಲ್ಲಿಯೇ ಮೊದಲ ಪ್ರಯತ್ನವಾಗಿ ಸಾರಿಗೆ ಸುರಕ್ಷಾ ಸಂಚಾರಿ ಐಸಿಯು ಆಕ್ಸಿಜನ್ ವೆಂಟಿಲೇಟರ್ ವ್ಯವಸ್ಥೆಯುಳ್ಳ 5 ಹಾಸಿಗೆಯ ಐಸಿಯು ಬಸ್‌ ಅನ್ನು ಆಂತರಿಕವಾಗಿ ನಿರ್ಮಿಸಲಾಗಿದೆ. ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ 21 ಗ್ರಾಮಗಳ 1303 ಮಂದಿ ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ. ಹೀಗಾಗಿ, ಪ್ರಶಸ್ತಿ ನೀಡಿ ಗೌರವಿಸಲಾಗಿದೆ..

Social Worship Award to KSRTC
Social Worship Award to KSRTC
author img

By

Published : Aug 17, 2021, 8:42 PM IST

ಬೆಂಗಳೂರು : ಕೆಎಸ್‌ಆರ್‌ಟಿಸಿಯು ಕೋವಿಡ್ ಸಮಯದಲ್ಲಿ ಅನುಷ್ಠಾನಗೊಳಿಸಿದ ಉಪಕ್ರಮಗಳಿಗೆ ರೋಟರಿ 3190 ಡಿಸ್ಟಿಕ್‌ನ ಸಾಮಾಜಿಕ ಕಳಕಳಿಯ ಪ್ರಶಸ್ತಿ ಲಭಿಸಿದೆ.

ಮೊಬೈಲ್ ಫೀವರ್ ಕ್ಲಿನಿಕ್​ಗೆ ನಿಗಮದ ಹಳೆಯ ಬಸ್‌ಗಳನ್ನು ಬಳಸಿ ನಿಗಮದ ಕಾರ್ಯಾಗಾರಗಳಲ್ಲಿಯೇ 20 ಮೊಬೈಲ್ ಫೀವರ್ ಕ್ಲಿನಿಕ್ ಬಸ್‌ಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರಿನಲ್ಲಿ ಅಂತರಿಕವಾಗಿ ಲಭ್ಯವಿರುವ ವಸ್ತುಗಳಲ್ಲಿ ಮಿನಿ ಬಸ್‌ನ ಸಾರಿಗೆ ಸಂಜೀವಿನಿ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿತ್ತು. ಬಸವೇಶ್ವರ ಬಸ್ ನಿಲ್ದಾಣದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ಸ್ಯಾನಿಟೈಸರ್ ಬಸ್‌ಗಳನ್ನು ಸಹ ನಿರ್ಮಿಸಲಾಗಿತ್ತು.

ಕೆಎಸ್‌ಆರ್‌ಟಿಸಿಯು ತನ್ನ ಅನುಪಯುಕ್ತ ಬಸ್‌ ಅನ್ನು (Scrap Bus) ಸುಸಜ್ಜಿತಾ ಸ್ತ್ರೀ ಶೌಚಾಲಯವನ್ನಾಗಿ ನಿರ್ಮಿಸಿ ಬೆಂಗಳೂರು ಮತ್ತು ದಾವಣಗೆರೆಯಲ್ಲಿನ ಬಸ್ ನಿಲ್ದಾಣಗಳಲ್ಲಿ ಬಳಕೆ ಮಾಡಲು ನೀಡಿದೆ.

ಅದೇ ರೀತಿ, ಹಳೆಯ ಐರಾವತ ಹವಾನಿಯಂತ್ರಿತ ಬಸ್‌ ಅನ್ನು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಅವರಿಗೆ ಉಚಿತವಾಗಿ ನೀಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್‌ ಬಗ್ಗೆ ತಿಳುವಳಿಕೆ ಮೂಡಿಸುವ ಹಾಗೂ ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸುವಿಕೆಗಾಗಿ ಮೊಬೈಲ್ ರಕ್ತದಾನದ ಬ್ಲಡ್ ಬ್ಯಾಂಕ್ ಬಸ್‌ ಆಗಿ ಉಪಯೋಗಿಸಲಾಗುತ್ತಿದೆ.

ದೇಶದ ಸಾರಿಗೆ ನಿಗಮಗಳಲ್ಲಿಯೇ ಮೊದಲ ಪ್ರಯತ್ನವಾಗಿ ಸಾರಿಗೆ ಸುರಕ್ಷಾ ಸಂಚಾರಿ ಐಸಿಯು ಆಕ್ಸಿಜನ್ ವೆಂಟಿಲೇಟರ್ ವ್ಯವಸ್ಥೆಯುಳ್ಳ 5 ಹಾಸಿಗೆಯ ಐಸಿಯು ಬಸ್‌ ಅನ್ನು ಆಂತರಿಕವಾಗಿ ನಿರ್ಮಿಸಲಾಗಿದೆ. ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ 21 ಗ್ರಾಮಗಳ 1303 ಮಂದಿ ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ. ಹೀಗಾಗಿ, ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.