ETV Bharat / state

ನಾಳೆ ವಿಶ್ವ ಯೋಗ ದಿನ: ಸಾಮಾಜಿಕ ಮಾಧ್ಯಮವೇ ವೇದಿಕೆ; ಈ ವೆಬ್​ಸೈಟ್ ಮೂಲಕ ನೀವೂ ಭಾಗಿಯಾಗಿ.. - ಅಂತಾರಾಷ್ಟ್ರೀಯ ಯೋಗ ದಿನಾಚರಣೆ

7 ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಮಾಜಿಕ ಜಾಲತಾಣವೇ ವೇದಿಕೆಯಾಗಲಿದ್ದು, ಬಹಿರಂಗ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಈ ಬಾರಿ ‘ಮನೆಯಲ್ಲಿಯೇ ಇದ್ದು ಯೋಗ ಆಚರಿಸಿ’ ಕೇಂದ್ರ ಆಯುಷ್ ಇಲಾಖೆ ಮನವಿ ಮಾಡಿದೆ.

International Yoga Day
7 ನೇ ಅಂತಾರಾಷ್ಟ್ರೀಯ ಯೋಗ ದಿನ
author img

By

Published : Jun 20, 2021, 10:13 AM IST

Updated : Jun 20, 2021, 10:36 AM IST

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ. ಇದರ ಪರಿಣಾಮ ತಿಂಗಳು ಗಟ್ಟಲೆ ಜನರು ಮನೆಯಲ್ಲಿಯೇ ಬಂಧಿಯಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳ ಮೇಲೆ ಕರಿಛಾಯೆ ಬೀರಿದೆ.‌

ದೇಶವ್ಯಾಪಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ 7 ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಮಾಜಿಕ ಜಾಲತಾಣವೇ ವೇದಿಕೆಯಾಗಲಿದ್ದು, ಬಹಿರಂಗ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.‌ ಹಾಗಾಗಿ, ಈ ಬಾರಿ ‘ಮನೆಯಲ್ಲಿಯೇ ಇದ್ದು ಯೋಗ ಆಚರಿಸಿ’ ಎಂದು ಕೇಂದ್ರ ಆಯುಷ್ ಇಲಾಖೆ ಮನವಿ ಮಾಡಿದೆ.

ನಾಳೆ ಬೆಳಿಗ್ಗೆ 7 ಗಂಟೆಗೆ ಆನ್​ಲೈನ್​ ಮೂಲಕ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ಕೋರಿದೆ. http://main.ayush.gov.in ಅಥವಾ http://yoga.ayush.gov.in/yoga ಮೂಲಕ ಭಾಗಿಯಾಗಬಹುದು. #BeWithYogaBeAtHome #YogaForAll #IDY2021 #YogaForHealth ಹ್ಯಾಶ್ ಟ್ಯಾಗ್ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಯುಷ್ ಇಲಾಖೆ ಮನವಿ ಮಾಡಿದೆ.

ರಾಜ್ಯದಲ್ಲಿ ಲಸಿಕಾ ಮೇಳ:

ರಾಜ್ಯದಲ್ಲಿ ಯೋಗ ದಿನದ ಅಂಗವಾಗಿ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ‌. ನಾಳೆ 5-7 ಲಕ್ಷದಷ್ಟು ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡಲು ಸಹಕರಿಸುವಂತೆ ಮನವಿ ಮಾಡಲಾಗಿದೆ. ರೋಗದ ವಿರುದ್ಧ ಯೋಗವೂ ಸಹಕಾರಿಯಾಗಲಿದ್ದು, ಮನೆಯಲ್ಲಿಯೇ ಯೋಗಾಸನನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತೆ ಆರೋಗ್ಯ ಇಲಾಖೆ ಕೋರಿದೆ.

Last Updated : Jun 20, 2021, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.