ETV Bharat / state

ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವ ರಾಜ್ಯದ ಆರು ರಾಜಕೀಯ ನಾಯಕರು ಇವರು..

ರಾಜ್ಯದ ಪಾಲಿಗೆ ಇದು ಸುವರ್ಣ ವರ್ಷ. ರಾಜಕೀಯದಲ್ಲಿ ಈಗಿನ್ನೂ ಪರಿಚಿತರಾಗುತ್ತಿರುವ ಹಾಗೂ ರಾಜಕೀಯ ಹಿನ್ನೆಲೆ ಹೊಂದದೇ ಬೆಳೆದ ಇಬ್ಬರು ಯುವ ನಾಯಕರಿಗೆ ಮಹತ್ವದ ಜವಾಬ್ದಾರಿ ಲಭಿಸಿದೆ..

Six political leaders of the state shone in national politics
ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿವೆ ರಾಜ್ಯದ ಆರು ರಾಜಕೀಯ ನಾಯಕರು
author img

By

Published : Dec 6, 2020, 6:48 AM IST

ಬೆಂಗಳೂರು : ರಾಜ್ಯದ ರಾಜಕೀಯ ನಾಯಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಅದರಲ್ಲೂ ಎರಡು ರಾಷ್ಟ್ರೀಯ ಪಕ್ಷಗಳ ಅತ್ಯುನ್ನತ ಸ್ಥಾನ ಸಿಕ್ಕಿದ್ದಂತೂ ಅತ್ಯಂತ ವಿರಳ. ಆದರೆ, 2020 ಅಂತಹ ಒಂದು ಹಸಿವನ್ನು ನೀಗಿಸಿದೆ. ರಾಜ್ಯದ ಆರು ಮಂದಿ ನಾಯಕರು ಎರಡು ರಾಷ್ಟ್ರೀಯ ಪಕ್ಷದ ಆಯಕಟ್ಟಿನ ಸ್ಥಾನ ಗಳಿಸಿ ಕರ್ನಾಟಕದ ಗರಿಮೆ ಹೆಚ್ಚಿಸಿದ್ದಾರೆ.

ಕರ್ನಾಟಕ ರಾಜ್ಯ ಒಬ್ಬ ಪ್ರಧಾನಿಯನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ಹೊಂದಿದೆ. ಸಾಕಷ್ಟು ಕ್ಷೇತ್ರದಲ್ಲಿ ಸಾಧನಕರಾಗಿ ಗುರುತಿಸಿಕೊಂಡವರು ಕರ್ನಾಟಕದವರು ಎನ್ನುವ ಹೆಗ್ಗಳಿಕೆ ಇದೆ. ಸಾಕಷ್ಟು ಮಂದಿ ರಾಷ್ಟ್ರೀಯ ನಾಯಕರಾಗಿ ಗಮನ ಸೆಳೆದಿದ್ದರೂ, ರಾಜಕೀಯ ಸ್ಥಾನ ಮಾನಗಳ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಬೆಳಗಿದ್ದರು.

ಆದರೆ, ಈ ಸಾರಿ ರಾಜ್ಯದ ಕೆಲ ನಾಯಕರಿಗೆ ಸಿಕ್ಕ ಅವಕಾಶ ಅನ್ಯ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಮೆರೆಯುವ ಅವಕಾಶ ನೀಡುವ ಮೂಲಕ ನಿಜವಾದ ಪ್ರತಿಭೆಗಳು ರಾಜ್ಯದಲ್ಲಿಯೂ ಇದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಅವಕಾಶ ಒದಗಿಸಿಕೊಟ್ಟಿದೆ.

ವಿಶೇಷ ಅಂದರೆ ರಾಜಕೀಯ ಸ್ಥಾನಮಾನದ ಮೂಲಕ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡ ಆರು ಪ್ರಮುಖ ರಾಜಕೀಯ ನಾಯಕರೆಂದರೆ ಬಿಜೆಪಿಯ ಬಿ.ಎಲ್. ಸಂತೋಷ್, ಸಿಟಿ ರವಿ, ತೇಜಸ್ವಿ ಸೂರ್ಯ, ಹೆಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ಬಿ ವಿ ಶ್ರೀನಿವಾಸ್ ಆಗಿದ್ದಾರೆ. ಬಿ ಎಲ್ ಸಂತೋಷ್ ರಾಷ್ಟ್ರೀಯ ಬಿಜೆಪಿಯಲ್ಲಿ ಒಂದು ಹಂತಕ್ಕೆ ಅತ್ಯುನ್ನತ ಸ್ಥಾನ ಎನ್ನಬಹುದಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ.

ಮಾಜಿ ಸಚಿವ ಸಿ ಟಿ ರವಿ ಕೂಡ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಜತೆಗೆ ತಮಿಳುನಾಡು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಯಾಗಿ ಕೂಡ ನೇಮಕಗೊಂಡಿದ್ದಾರೆ. ಸಂಘ ಪರಿವಾರದ ಹಿನ್ನೆಲೆ ಒಳಗೊಂಡು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯಗೆ ಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ಕೂಡ ರಾಜ್ಯ ನಾಯಕರಿಗೆ ಮಹತ್ವದ ಹಾಗೂ ಆಯಕಟ್ಟಿನ ಸ್ಥಾನ ಕಲ್ಪಿಸಿದೆ. ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ಹೆಚ್ ಕೆ ಪಾಟೀಲರನ್ನು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ಮಾಡಲಾಗಿದೆ. ಅದೇ ರೀತಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತಮಿಳುನಾಡು, ಗೋವಾ ಹಾಗೂ ಪುದುಚೆರಿ ಉಸ್ತುವಾರಿ ಮಾಡಲಾಗಿದೆ. ಜತೆಗೆ ಇವರನ್ನು ಎಐಸಿಸಿ ತನ್ನ ಸಿಡಬ್ಲ್ಯುಸಿ ಸದಸ್ಯರನ್ನಾಗಿ ಕೂಡ ನೇಮಿಸಿದೆ.

ಈವರೆಗೂ ಹಂಗಾಮಿ ಅಧಿಕಾರದಲ್ಲಿದ್ದ ಬಿ ವಿ ಶ್ರೀನಿವಾಸ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಇದರ ಜತೆ ಇನ್ನೊಂದು ಗಮನಾರ್ಹ ಸಂಗತಿ ಅಂದರೆ ಕಾಂಗ್ರೆಸ್​ನ ಮಾಜಿ ಸಚಿವ ಕೃಷ್ಣ ಬೈರೇಗೌಡರನ್ನು ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ನೇಮಿಸಲಾಗಿದೆ.

ಓದಿ:ಒಟ್ಟಿಗೆ ಪ್ರಯಾಣಿಸಿದ ಟಗರು - ರಾಜಾಹುಲಿ: ಒಂದೇ ವಿಮಾನದಲ್ಲಿ ಕೈ-ಕಮಲ ನಾಯಕರು

ರಾಜ್ಯದ ಪಾಲಿಗೆ ಇದು ಸುವರ್ಣ ವರ್ಷ. ರಾಜಕೀಯದಲ್ಲಿ ಈಗಿನ್ನೂ ಪರಿಚಿತರಾಗುತ್ತಿರುವ ಹಾಗೂ ರಾಜಕೀಯ ಹಿನ್ನೆಲೆ ಹೊಂದದೇ ಬೆಳೆದ ಇಬ್ಬರು ಯುವ ನಾಯಕರಿಗೆ ಮಹತ್ವದ ಜವಾಬ್ದಾರಿ ಲಭಿಸಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್ ಕೌಟುಂಬಿಕ ರಾಜಕೀಯ ಹಿನ್ನೆಲೆ ಹೊಂದದ ನಾಯಕ. ಆದರೆ, ರಾಜಕೀಯ ಬದುಕಿನ ಆರಂಭದಲ್ಲೇ ಉತ್ತಮ ಉತ್ತುಂಗದ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಮೂಲದ ತೇಜಸ್ವಿ ಸೂರ್ಯ ಉತ್ತಮ ವಾಗ್ಮಿ ಹಾಗೂ ಸಂಘ ಪರಿವಾರದ ಹಿನ್ನೆಲೆ ಹೊಂದಿದ ಯುವ ನಾಯಕ. ಇವರಿಗೆ ಮಹತ್ವದ ಜವಾಬ್ದಾರಿಯಾಗಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ತಮ್ಮ ಆಯ್ಕೆಯನ್ನು ಸಮರ್ಥವಾಗಿ ಪ್ರಕಟಪಡಿಸುವ ಅವಕಾಶವನ್ನೂ ಈ ನಾಯಕರು ಬಳಸಿಕೊಂಡಿದ್ದಾರೆ. ಕೋವಿಡ್ ಸಂದರ್ಭ ಜನ ಸೇವೆ, ಕೇಂದ್ರ ಸರ್ಕಾರದ ವಿರುದ್ಧ ಸಮರ್ಥ ಹೋರಾಟದ ಮೂಲಕ ಬಿ.ವಿ. ಶ್ರೀನಿವಾಸ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರೆ, ತೇಜಸ್ವಿ ಸೂರ್ಯ ಪಶ್ಚಿಮ ಬಂಗಾಳದಲ್ಲಿ ನಡೆಸಿದ ಹೋರಾಟದ ಮೂಲಕ ರಾಷ್ಟ್ರ ಮಟ್ಟದಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿದ್ದಾರೆ.

ರಾಜಕೀಯ ಹಿನ್ನೆಲೆ : ಕಾಂಗ್ರೆಸ್​​ನ ಹೆಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ರಾಜಕೀಯ ಕುಟುಂಬದಿಂದ ಬಂದವರು. ಹೆಚ್ ಕೆ ಪಾಟೀಲರ ತಂದ ಕೆ ಹೆಚ್ ಪಾಟೀಲ್ ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದ್ದರು. ದಿನೇಶ್ ತಂದೆ ಆರ್. ಗುಂಡೂರಾವ್ ರಾಜ್ಯದ ಸಿಎಂ ಆಗಿದ್ದವರು. ಕೃಷ್ಣ ಬೈರೇಗೌಡರ ತಂದೆ ಬೈರೇಗೌಡರು ಹಿರಿಯ ರಾಜಕಾರಣಿ ಆಗಿದ್ದರು.

ಇವರು ಸಹಜವಾಗಿ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಅವಕಾಶವೂ ದಿನೇಶ್ ಗುಂಡೂರಾವ್​ಗೆ ಅವರಿಗೆ ಸಿಕ್ಕಿದೆ. ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆ ಕಣವಾಗಿದ್ದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಹಾಘಟ ಬಂಧನ್ ಬಲ ಹೆಚ್ಚಿಸುವ ಜವಾಬ್ದಾರಿ ಹೆಚ್ ಕೆ ಪಾಟೀಲರದ್ದಾಗಿದೆ.

ಓದಿ:ಸಂಪುಟ ವಿಸ್ತರಣೆ ಸಂಬಂಧ ಅರುಣ್ ಸಿಂಗ್ ಶೀಘ್ರವೇ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ: ಸಿಎಂ ವಿಶ್ವಾಸ

ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಗಿದ್ದ ಬಿ ಎಲ್ ಸಂತೋಷ್ ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸಂಘ ಪರಿವಾರದ ಬಲವಾದ ಬೆಂಬಲ ಇರುವ ಇವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ನಂತರದ ಸಾಲಿನ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದಾರೆ. ತಮ್ಮದೇ ಚಾಣಾಕ್ಷ ಬುದ್ದಿಯಿಂದಾಗಿ ರಾಷ್ಟ್ರೀಯ ಬಿಜೆಪಿಯಲ್ಲಿ ಉತ್ತಮ ಹೆಸರು ಹೊಂದಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ರಾಷ್ಟ್ರೀಯ ಪಕ್ಷದ ನಾಯಕರ ಪಾಲಿಗೆ 2020 ವರ್ಷ ಅತ್ಯಂತ ಫಲಪ್ರಧವಾಗಿ ಲಭಿಸಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇವರ ಮುಂದಿದ್ದು, ಯಾವ ರೀತಿ ಯಶಸ್ಸು ಕಾಣಲಿದ್ದಾರೆ ಎನ್ನುವುದಕ್ಕೆ ಮುಂದಿನ ದಿನಗಳು ಉತ್ತರವಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.