ETV Bharat / state

ತಮಿಳುನಾಡಿಗೆ ಹೋಗಿ ಬಂದವರಲ್ಲಿ ಕೊರೊನಾ: ಬೆಂಗಳೂರಿನಲ್ಲಿ ಆರು ಪಾಸಿಟಿವ್ ..! - Six Corona Positives in Bangalore

ಅಂತ್ಯಕ್ರಿಯೆಗಾಗಿ ತಮಿಳುನಾಡಿಗೆ ಹೋಗಿ ಬೆಂಗಳೂರಿಗೆ ವಾಪಸಾದ ತಂದೆ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಂದು ಸಿಲಿಕಾನ್ ಸಿಟಿಯಲ್ಲಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿವೆ.

Corona Positives
ಕೊರೊನಾ ಪಾಸಿಟಿವ್
author img

By

Published : May 27, 2020, 2:44 PM IST

ಬೆಂಗಳೂರು: ಸಂಬಂಧಿಕರ ಅಂತ್ಯಕ್ರಿಯೆಗಾಗಿ ತಮಿಳುನಾಡಿಗೆ ಹೋಗಿ ಬೆಂಗಳೂರಿಗೆ ವಾಪಸಾದ ತಂದೆ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. P -2,334, 60 ವರ್ಷದ ವ್ಯಕ್ತಿ ಹಾಗೂ, P - 2,336 , 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆ.

ಇನ್ನು ಹೆಬ್ಬಗೋಡಿಯ 57 ವರ್ಷದ (P- 2,333) ಎಎಸ್​​​ಐಗೂ ಕೊರೊನಾ ಬಂದಿದ್ದು, ಮೇಲ್ನೋಟಕ್ಕೆ P - 1,396 ಸೋಂಕಿತನ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಆದರೆ ಎಎಸ್​​​​ಐ ಹದಿನೈದು ದಿನ ರಜೆಯಲ್ಲಿದ್ದು, ಬೆಂಗಳೂರು ನಗರಕ್ಕೆ ಬಂದು ವಾಪಾಸ್ಸಾದಾಗ ಕೊರೊನಾ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಉಳಿದ ಮೂವರು ಅಂತರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಲ್ಲೂ ಕೊರೊನಾ ಬಂದಿದೆ.

P - 2,335, 25 ವರ್ಷದ ಮಹಿಳೆ - ಮಧ್ಯಪ್ರದೇಶದಿಂದ ವಾಪಾಸ್ಸಾದವರು

P- 2,387, 22 ವರ್ಷದ ಮಹಿಳೆ - ನೇಪಾಳದಿಂದ ಪ್ರಯಾಣ

P- 2,388, 28 ವರ್ಷದ ಮಹಿಳೆ - ದುಬೈನಿಂದ ಪ್ರಯಾಣ, ಆದರೆ ಇವರಿಗೆ ಬೆಂಗಳೂರಿನ ಲೋಕಲ್ ವಿಳಾಸ ಇಲ್ಲ. ಇವರು ಪ್ರಯಾಣ ಮಾಡಿ ಬಂದಿದ್ದು, ಹೋಟೆಲ್ ಕ್ವಾರಂಟೈನ್​​​​ನಲ್ಲಿ ಇಡಲಾಗಿತ್ತು ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.