ಬೆಂಗಳೂರು : ಕೊರೊನಾ ಕೆಂಗಣ್ಣಿನಿಂದ ಕಲ್ಯಾಣ ಮಂಟಪಗಳಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಗಳೆಲ್ಲಾ ಸರಳವಾಗಿ ಮನೆಯಲ್ಲೇ ನಡೆಯುತ್ತಿವೆ.
ರಾಮಚಂದ್ರಾಪುರದಲ್ಲಿ ನವ ಜೋಡಿಯೊಂದು ಸಿಂಪಲ್ ಆಗಿ ಹಸೆಮಣೆಯೇರಿ ಹೊಸ ಜೀವನಕ್ಕೆ ಕಾಲಿಟ್ಟರು. ರಾಮಚಂದ್ರಪುರದ ವಧು ಹರ್ಷಿತಾ ಹಾಗೂ ವರ ಜಲಂಧರ್ ವಿವಾಹ ವಧುವಿನ ಮನೆಯಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕುಟುಂಬಸ್ಥರಷ್ಟೇ ಪಾಲ್ಗೊಂಡು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಮಾಸ್ಕ್ ಧರಿಸಿದ್ದರು.
ಸಿಂಪಲ್ ಆಗಿ ಹಸೆ ಮನೆ ಏರಿದ ನವ ಜೋಡಿ ಮದುವೆಯನ್ನು ಕಲ್ಯಾಣ ಮಂಟಪದಲ್ಲಿ ತುಂಬಾ ಗ್ರ್ಯಾಂಡ್ ಆಗಿ ನಡೆಸಲು ನಿಶ್ಚಯಿಸಲಾಗಿತ್ತು. ವಿವಾಹ ಸಮಾರಂಭಕ್ಕೆ ಸುಮಾರು 2 ಸಾವಿರ ಜನರನ್ನು ಆಹ್ವಾನಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆ ಕೇವಲ ವಧು ಹಾಗೂ ವರನ ತಂದೆ ತಾಯಿ ಮತ್ತು ಹತ್ತಿರದ ಕುಟುಂಬಸ್ಥರ ಎದುರಲ್ಲಿ ವಿವಾಹ ನೆರವೇರಿದೆ.ನಾವೂ ಕೂಡ ಇಂಥಹ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನ ಪಾಲಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕ್ ಗಳನ್ನ ಧರಿಸಿ ಮದುವೆಯಾಗುತ್ತಿರುವುದಾಗಿ ವಧು ವರರು ತಿಳಿಸಿದ್ದಾರೆ.