ಬೆಂಗಳೂರು: ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಎದ್ದಿರುವ ಚರ್ಚೆಯ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ.
ರಾಜ್ಯದ 757 ಪ್ರಾರ್ಥನಾ ಕೇಂದ್ರಗಳಿಗೆ ಹಾಗೂ 111 ವರ್ಷಾಸನ ಪಡೆಯುತ್ತಿರುವ ಪ್ರಾರ್ಥನಾ ಕೇಂದ್ರಗಳಿಗೆ ಸರ್ಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನ ತಡೆ ಹಿಡಿದಿದ್ದು, ಇಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ನೀಡುವುದನ್ನು ತಡೆ ಹಿಡಿಯಲಾಗಿದೆ.
ಇನಾಂ ರದ್ದತಿ ಕಾಯ್ದೆ 1977 ರ ಪರಿಹಾರಾರ್ಥವಾಗಿ ನೀಡುತ್ತಿರುವ ತಸ್ತಿಕ್ ಮತ್ತು ವರ್ಷಾಸನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನಗಳಿಂದ ನೀಡುವ ಬದಲು, ಇನ್ನು ಮುಂದೆ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾ , ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತಿಕ್ ಮತ್ತು ವರ್ಷಾಸನ ನೀಡಲು ಅನುದಾನ ಬಿಡುಗಡೆ ಮಾಡತಕ್ಕದ್ದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವರದಿಯನ್ನಾದರಿಸಿ ಸರ್ಕಾರ ಆದೇಶ ನೀಡಿದೆ.
ಇದನ್ನೂ ಓದಿ : 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ವ..