ETV Bharat / state

ಕೋರ್ಟ್ ಮೊರೆ ಹೋದ 6 ಮಂತ್ರಿಗಳು ಸಚಿವ ಸ್ಥಾನದಲ್ಲಿರಲು ಯೋಗ್ಯರಲ್ಲ: ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ - ವಿಧಾನಸಭೆ ಕಲಾಪ

ವಿಧಾನಸಭೆ ಕಲಾಪದಲ್ಲಿಂದು ಕಾಂಗ್ರೆಸ್ ನಾಯಕರು ಸಿಡಿ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋರ್ಟ್​ ಮೆಟ್ಟಿಲೇರಿರುವ 6 ಮಂದಿ ಶಾಸಕರು ಸಚಿವರಾಗಿ ಮುಂದುವರೆಯಲು ಅನರ್ಹರಾಗಿದ್ದಾರೆ, ಅವರೆಲ್ಲ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

siddramaiah
ಸಿದ್ದರಾಮಯ್ಯ
author img

By

Published : Mar 22, 2021, 7:47 PM IST

ಬೆಂಗಳೂರು: ಸದನದಲ್ಲಿ ಇಂದು ಸಿಡಿ ವಿಚಾರ ಸ್ಫೋಟಗೊಂಡಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿ ವಿಚಾರವಾಗಿ ವಿಷಯ ಪ್ರಸ್ತಾಪಿಸಿ ಸರ್ಕಾರ, ಕೋರ್ಟ್ ಮೊರೆ ಹೋದ ಮಂತ್ರಿಗಳ ವಿರುದ್ಧ ಗುಡುಗಿದರು.

ವಿಧಾನಸಭೆಯಲ್ಲಿ ಸಿಡಿ ಪ್ರಕರಣ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇರೆಗೆ ಸಿಡಿ ವಿಚಾರ ಪ್ರಸ್ತಾಪಿಸಿದ ಅವರು, ಸಿಡಿ ವಿಚಾರವಾಗಿ ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು ಮಂತ್ರಿ ಸ್ಥಾನದಲ್ಲಿರಲು ಯೋಗ್ಯರಲ್ಲ. ಹೀಗಾಗಿ ಅವರು ಕ್ಲೀನ್ ಚಿಟ್ ಸಿಗುವವರೆಗೆ ರಾಜೀನಾಮೆ ಕೊಡಬೇಕು. ಅಲ್ಲಿವರೆಗೆ ಅವರಿಗೆ ಮಂತ್ರಿ ಸ್ಥಾನದಲ್ಲಿರಲು ನೈತಿಕತೆ ಇಲ್ಲ ಎಂದು ಆಗ್ರಹಿಸಿದರು.

ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದವರು. ಅವರ ಬಳಿ ಹೆಣ್ಣುಮಗಳು ಕೆಲಸ ಕೇಳಿಕೊಂಡು ಹೋಗಿದ್ದಾರೆ. ಆಗ ಅವರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದಿನೇಶ್ ಕಲ್ಲಳ್ಳಿ ಎಂಬುವರು ದೂರು ಕೊಟ್ಟಿದ್ದಾರೆ. ಆದರೆ, ಇವರು ಕೊಟ್ಟ ದೂರು ದಾಖಲಾಗಲಿಲ್ಲ. ಮೊದಲು ಎಫ್​​​ಐಆರ್ ದಾಖಲಿಸಿಕೊಳ್ಳಬೇಕು. ನಂತರ ನ್ಯಾಯಾಲಯದ ಗಮನಕ್ಕೆ ತರಬೇಕು. ಆದರೆ, ಪೊಲೀಸರು ಆ ರೀತಿ ಮಾಡಲಿಲ್ಲ‌ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಾಲಚಂದ್ರ ಜಾರಕಿಹೊಳಿ ಹೇಳುತ್ತಾರೆ ಸಿಡಿ ತಯಾರಿಗೆ 20 ಕೋಟಿ ರೂ. ಖರ್ಚು ಮಾಡಲಾಗಿದೆ. ಓರಿಯನ್ ಮಾಲ್ ಪಕ್ಕದ ಅಪಾರ್ಟ್​​​​ಮೆಂಟ್ ಇದೆ. ಅಲ್ಲಿ ಈ ಸಿಡಿ ತಯಾರಾಗಿದೆ ಎಂದು ಹೇಳುತ್ತಾರೆ. ಆದರೆ, ಸಿಡಿ ಕೃತ್ಯ ಯಾರು ಅನ್ನೋದನ್ನ ಹೇಳಲ್ಲ ಎಂದು ಕಿಡಿಕಾರಿದರು.

ಯುವತಿಯೂ ವಿಡಿಯೋ ಹೇಳಿಕೆ ನೀಡಿದ್ದಾಳೆ. ಅದರ ಪ್ರಕಾರ ಅದು ಅತ್ಯಾಚಾರ ಆಗುತ್ತದೆ. ಆದರೆ, ಇನ್ನೂ ಪ್ರಕರಣ ದಾಖಲಾಗಿಲ್ಲ. ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ. ಯುವತಿಗೆ ಒಂದು ನ್ಯಾಯವಾಗಿದೆ. ಆ ಯುವತಿಗೆ ನ್ಯಾಯ ಸಿಗಬೇಕಾದರೆ ದೂರು ದಾಖಲಾಗಬೇಕಿತ್ತು. ಪೊಲೀಸರು ಇಲ್ಲಿ ವಿಫಲರಾಗಿದ್ದಾರೆ. ಎಸ್​ಐಟಿಯ ತನಿಖೆ ಯಾರು ಷಡ್ಯಂತ್ರ ‌ಮಾಡಿದ್ದಾರೆ ಎಂಬ ದಿಸೆಯಲ್ಲಿ ನಡೆಯುತ್ತಿದೆ. ಆ ಯುವತಿಗೆ ಪೂರಕವಾಗಿ ತನಿಖೆ ನಡೆಯುತ್ತಿಲ್ಲ ಎಂದರು.

ಹೀಗಾಗಿ ಕೂಡಲೇ ರಮೇಶ್ ಜಾರಕಿಹೊಳಿ ವಿರುದ್ಧ ಸೆಕ್ಷನ್ 376 ಅಡಿ ದೂರು ದಾಖಲಿಸಬೇಕು. ಇದು ಪೊಲೀಸರ ಕರ್ತವ್ಯ, ಸರ್ಕಾರದ ಕರ್ತವ್ಯವಾಗಿದೆ. ಇಲ್ಲವಾದರೆ ಆ ಯುವತಿಗೆ ಅನ್ಯಾಯವಾಗಲಿದೆ. ಎಲ್ಲ ದೂರುಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು.‌ ಇದು ಎಸ್​ಐಟಿಯಿಂದ ಸಾಧ್ಯವಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕುಂಬಳ ಕಾಯಿ ಕಳ್ಳ ಅಂತ ತಿವಿದ ಸಿದ್ದರಾಮಯ್ಯ: ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿದರು ಎಂಬ ಮಾತಿದೆ. ಮಂತ್ರಿಗಳು ಏನು ತಪ್ಪು ಮಾಡಿಲ್ಲ ಎಂದಾದರೆ 6 ಮಂದಿ ಮಂತ್ರಿಗಳು ಏಕೆ ಕೋರ್ಟ್ ಮೊರೆ ಹೋದರು? ಎಂದು 6 ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

6 ಮಂತ್ರಿಗಳು ಶಾಸಕರಾಗಿ ಮತ್ತು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಯಾವುದೇ ಭಯ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಹಾಗಾದರೆ ಏಕೆ ಅವರು ಭಯ ಪಡುತ್ತಿದ್ದಾರೆ. ಏಕೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ?. ಇನ್ನು ಜನರಿಗೆ ಈ ಮಂತ್ರಿಗಳು ಹೇಗೆ ರಕ್ಷಣೆ ಕೊಡ್ತಾರೆ?. ಅವರೇ ಭಯದಲ್ಲಿ ಇದ್ದಾಗ ಅವರು ಹೇಗೆ ರಕ್ಷಣೆ ಕೊಡ್ತಾರೆ? ಎಂದು ಕಿಡಿಕಾರಿದರು.

ಕರ್ನಾಟಕದ ಇತಿಹಾಸದಲ್ಲಿ ಮಂತ್ರಿಗಳು ಕೋರ್ಟ್ ಮೊರೆ ಹೋಗಿ ನಮಗೆ ಭಯ ಇದೆ, ನನ್ನ ವಿರುದ್ಧ ಸಿಡಿ ಬಿಡುಗಡೆ ಆಗಬಹುದು, ನನ್ನ ತೇಜೋವಧೆ ಆಗಬಹುದು ಅಂತ ಯಾರೂ ಹೋಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಈ ಮಂತ್ರಿಗಳಿಗೆ ಮಾತ್ರ ಏಕೆ ಈ ಭಯ ಇದೆ. ಗೋಪಾಲಯ್ಯ ಏಕೆ ತಗೊಂಡಿಲ್ಲ. ಎಂಟಿಬಿ ಏಕೆ ತಗೊಂಡಿಲ್ಲ?.ಬಾಂಬೆಗೆ ಹೋಗಿರುವವರು ಮಾತ್ರ ಏಕೆ ಕೋರ್ಟ್​​ಗೆ ಏಕೆ ಹೋದರು?. ಶೆಟ್ಟರ್ ಏಕೆ ಕೋರ್ಟ್​​ಗೆ ಹೋಗಿಲ್ಲ, ಸೋಮಣ್ಣ ಏಕೆ ಹೋಗಿಲ್ಲ, ಕಾರಜೋಳ ಏಕೆ ಹೋಗಿಲ್ಲ. ಈಶ್ವರಪ್ಪ ಏಕೆ ಹೋಗಿಲ್ಲ? ಎಂದು ಪ್ರಶ್ನಿಸಿದರು.

ಮಂತ್ರಿಗಳು ಪೊಲೀಸ್ ಸ್ಟೇಷನ್​​​ಗೆ ಹೋಗಬೇಕಿತ್ತು. ಅವರು ಭಯವಿಲ್ಲದೇ ಕೆಲಸ ಮಾಡಲು ಆಗುತ್ತಾ?. ಇದೊಂದು ಕಲ್ಪಿತ ಆಪಾದನೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರಂತೆ. ಇದು ನಮ್ಮ ಕಡೆ ಇರುವ ಗಾದೆ ಮಾತು. ಈ ಸಚಿವರು ಯಾಕೆ ಕೋರ್ಟ್​​​ನಲ್ಲಿ ಸ್ಟೇ ತರಬೇಕು?. ಯಾವುದೇ ತಪ್ಪಿಲ್ಲದೇ ಯಾಕೆ ತಂದ್ರು ಎಂದು ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ಹಿಂದೆ ಸರ್ಕಾರ ಬರಲು ಯೋಗೇಶ್ವರ್ ಕಾರಣ ಎಂದು ಈ‌ ಹಿಂದೆ ಹೇಳಿಕೆ ನೀಡಿದ್ದರು. ತಮ್ಮ ಮೇಲೆ 9 ಕೋಟಿ ರೂ. ಸಾಲ ತಂದಿದ್ದರು. ಎಂಟಿಬಿ ನಾಗರಾಜ್ ಮಾತ್ರ ಸಾಲ ತಂದಿದ್ದರು ಎಂದು ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದ ಹೇಳಿಕೆ ಇದು. ಹಾಗಾದರೆ ಸರ್ಕಾರ ಬೀಳಿಸಿದ ದುಡ್ಡು ಯಾರದು?. ಈಗ ಗೊತ್ತಾಯ್ತಲ್ಲ, ಆಪರೇಷನ್ ಕಮಲದ್ದು ಎಂದು ಟಾಂಗ್ ‌ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.