ಬೆಂಗಳೂರು: ನಾನು ಪ್ರತಿ ವರ್ಷ ಶಿವರಾತ್ರಿಯಂದು ಮಲೆಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಅದರಂತೆ ಇಂದೂ ಕೂಡ ಬಂದಿದ್ದೇನೆ. ರಾಜ್ಯ ಸುಭಿಕ್ಷವಾಗಿರಲಿ, ಮಳೆ ಬೆಳೆ ಸಮೃದ್ಧವಾಗಿ ಆಗಲಿ, ಜನ ಸುಖ ಶಾಂತಿಯಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರಿನಲ್ಲಿ ಮಹಾಶಿವರಾತ್ರಿಯ ವಿಶೇಷ ಮಖೆ ಜಾತ್ರೆ: ಶಿವನಿಗೆ ಶರಣಾದ ಭಕ್ತಗಣ
ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಹಾಗೂ ಜೋಡಿ ತೆಂಗಿನ ಆರತಿ ಮಾಡಿದ ಸಿದ್ದರಾಮಯ್ಯ, ದೇವರ ದರ್ಶನದ ಬಳಿಕ ಮಾದಪ್ಪನ ಪದ ಹಾಡುವವರ ಜೊತೆಗೆ ಕಂಸಾಳೆ ಬಾರಿಸಿ ಸಂಭ್ರಮಿಸಿದರು. ಈ ವೇಳೆ ಕ್ಷೇತ್ರದ ಶಾಸಕರು, ಮಾಜಿ ಸಚಿವ ಜಮೀರ್ ಅಹಮದ್ ಉಪಸ್ಥಿತರಿದ್ದರು. ಸಿದ್ದರಾಮಯ್ಯ ಭೇಟಿಗೆ ಮುಂಚೆ ಮಾಜಿ ಸಚಿವ ಕೆ. ಕೃಷ್ಣಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿದರು.