ETV Bharat / state

'ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ'.. ಸಿದ್ದರಾಮಯ್ಯ ಹಾಕಿದ ಪ್ರಶ್ನೆಗೆ ತಬ್ಬಿಬ್ಬಾದ ಸಚಿವರು..

author img

By

Published : Feb 3, 2021, 4:11 PM IST

Updated : Feb 3, 2021, 5:03 PM IST

ನನ್ನ ಸರ್ಕಾರವಿದ್ದಾಗ ವಾಲ್ಮೀಕಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲ ನಿಗಮಗಳ ವ್ಯಾಪ್ತಿಯಲ್ಲಿ ಬಡವರು ಮಾಡಿದ್ದ ಸಾಲವನ್ನು ಮನ್ನಾ ಮಾಡಿದ್ದೆ. ಆದರೆ, ಇದುವರೆಗೆ ನೀವು ಪರಿಪೂರ್ಣವಾಗಿ ಮಂತ್ರಿಮಂಡಲ ರಚಿಸಲು ಸಾಧ್ಯವಾಗಿಲ್ಲ ಎಂದು ದೂರಿದರು..

siddaramiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು : 'ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದಾಗ, ಸಚಿವ ಅರವಿಂದ ಲಿಂಬಾವಳಿ ತಬ್ಬಿಬ್ಬಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನಾವು ಶ್ರೀನಿವಾಸ್ ಮನೆಯಲ್ಲಿ ಸೇರಿದ್ವಲ್ಲಪ್ಪ‌. ಅಲ್ಲಿ ನೀನು ಕುಡಿದಿರಲಿಲ್ವೇ ಎಂದು ಕುಟುಕಿದಾಗ, ನಿಮಗೆ ಗೊತ್ತಲ್ಲಾ ಸರ್ ಎಂದು ಅರವಿಂದ ಲಿಂಬಾವಳಿ ನಗುತ್ತಾ ಹೇಳಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಆಗ ಒಮ್ಮೆ ಶ್ರೀನಿವಾಸ್ ಮನೆಯಲ್ಲಿ ಸೇರಿದ್ದೆವು ಅಲ್ವಾ, ಅಲ್ಲಿ ಕುಡಿದಿದ್ದಿಯಾ ಅಲ್ವಾ?. ನನಗೆ ಗೊತ್ತಿಲ್ಲ ಎಂದು ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರೆಸಿದರು.

ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳು ಕಳೆದರೂ ಯಡಿಯೂರಪ್ಪ ಸರ್ಕಾರಕ್ಕೆ ಚೈತನ್ಯವೇ ಇಲ್ಲ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶಕ್ಕೇ ನಂಬರ್ ಟು ಎನ್ನುತ್ತೀರಲ್ಲ? ಇದು ನಿಮ್ಮ ಸಾಧನೆಯೇ? ಎಂದು ಪ್ರಶ್ನಿಸಿದ ಅವರು, ನನ್ನ ಸರ್ಕಾರ ಕೈಗೊಂಡ ಕ್ರಮಗಳಿಂದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಈ ಮಟ್ಟಕ್ಕೇರಿದೆ.

ಇವತ್ತು ಇಡೀ ದೇಶದಲ್ಲಿ ರೈತರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೃಷಿಗೆ ಹೆಚ್ಚು ಪ್ರಾಧಾನ್ಯ ನೀಡುವ ಕೆಲಸ ಸರ್ಕಾರದಿಂದಾಗಬೇಕಿತ್ತು. ಆದರೆ, ಒಂದೂವರೆ ವರ್ಷ ಕಳೆದ್ರೂ ನಿಮಗೆ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಂತ್ರಿಮಂಡಲ ವಿಸ್ತರಣೆ ಮಾಡುತ್ತೀರಿ? ಆದರೆ, ಐದೇ ದಿನಗಳಲ್ಲಿ ನಾಲ್ಕು ಬಾರಿ ಖಾತೆಗಳನ್ನು ಬದಲಾವಣೆ ಮಾಡುತ್ತೀರಿ? ಇತಿಹಾಸದಲ್ಲಿ ಹಿಂದೆಂದಾದ್ರೂ ಈ ರೀತಿ ಆಗಿದೆಯೇ? ಎಂದು ಪ್ರಶ್ನಿಸಿದರು.

ನನ್ನ ಸರ್ಕಾರದ ಅವಧಿಯಲ್ಲಿ ಇಂತಹ ಒಂದು ನಿದರ್ಶನವಿದ್ದರೆ ತೋರಿಸಿ ಎಂದು ಸವಾಲೆಸೆದ ಅವರು, ಡಕೋಟಾ ಎಕ್ಸ್‌ಪ್ರೆಸ್ ಆಗಿರುವ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ?. ಆಡಳಿತದ ಯಾವ ಸ್ತರಗಳಲ್ಲೂ ನೀವು ಸಾಧನೆ ಮಾಡಿಲ್ಲ. ಸರ್ಕಾರದ ಮೇಲೆ ನಿಯಂತ್ರಣವೇ ಇಲ್ಲದವರು ಏನು ಸಾಧನೆ ಮಾಡಲು ಸಾಧ್ಯ? ಎಂದು ವ್ಯಂಗ್ಯವಾಡಿದರು.

ಇದು ಪ್ರಜಾಸತ್ತಾತ್ಮಕವಾಗಿ ಬಂದಿದ್ದ ಸರ್ಕಾರವಾಗಿದ್ದರೆ ಬೇರೆ ಮಾತು. ಆದರೆ, ಇದು ಅನೈತಿಕ ಸರ್ಕಾರ. ಹೀಗಾಗಿ, ಜನರ ಕೆಲಸ ಮಾಡದೇ ಕಾಲ ಹರಣ ಮಾಡುತ್ತಿದೆ. ಇಂತಹ ಸರ್ಕಾರವನ್ನು ಯಾರೂ ರಿಪೇರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಇದನ್ನು ಜನರೇ ಬದಲಾಯಿಸಬೇಕು. ಆ ಕಾಲ ದೂರವಿಲ್ಲ ಎಂದರು.

ನನ್ನ ಸರ್ಕಾರವಿದ್ದಾಗ ವಾಲ್ಮೀಕಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲ ನಿಗಮಗಳ ವ್ಯಾಪ್ತಿಯಲ್ಲಿ ಬಡವರು ಮಾಡಿದ್ದ ಸಾಲವನ್ನು ಮನ್ನಾ ಮಾಡಿದ್ದೆ. ಆದರೆ, ಇದುವರೆಗೆ ನೀವು ಪರಿಪೂರ್ಣವಾಗಿ ಮಂತ್ರಿಮಂಡಲ ರಚಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ಇದು ನಿಮ್ಮ ಸರ್ಕಾರದ ದುಃಸ್ಥಿತಿ. ಅಭಿವೃದ್ಧಿಗೆ ಹಣ ಕೇಳಿದರೆ ನಮ್ಮ ಬಳಿ ಎಲ್ಲಿದೆ ಹಣ?ಎಂದು ಕೇಳುತ್ತೀರಿ. ಕೊರೊನಾ ಹೆಸರಿನಲ್ಲಿ ಏನು ಮಾಡಿದಿರಿ? ಮಾತನಾಡುವ ಹಾಗಿಲ್ಲ. ಕೊರೊನಾ ಎಂದಿರಿ. ಎಲ್ಲ ಹಣವನ್ನು ಕೊರೊನಾಕ್ಕೆ ಖರ್ಚು ಮಾಡಿದೆವು ಎಂಬಂತೆ ನಡೆದುಕೊಂಡಿರಿ.

ಕೊರೊನಾಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೇರಿ ಮಾಡಿದ್ದು 526 ಕೋಟಿ ರೂ. ಅದರಲ್ಲಿ ಸಮಾಜದ ವಿವಿಧ ಸಮುದಾಯಗಳಿಗೆ ನೀಡಿದ ಹಣವೂ ಸೇರಿದೆ. ಅಂದ ಮೇಲೆ ಯಾವಾಗ ನೋಡಿದ್ರೂ ಕೊರೊನಾ ಎನ್ನುತ್ತಲೇ ಕಾಲ ಕಳೆದಿರಿ.

ಯಂತ್ರೋಪಕರಣಕ್ಕೆ ಎಂಟು ನೂರು ಕೋಟಿ ರೂ. ಸೇರಿದಂತೆ ಒಟ್ಟು ನೀವು ಮಾಡಿದ್ದೇ ಒಂದೂವರೆ ಸಾವಿರ ಕೋಟಿ ರೂಪಾಯಿ. ಆದರೆ, ನಿಮ್ಮ ಬಜೆಟ್ ಗಾತ್ರ ಎಷ್ಟು?ಎಂದು ಪ್ರಶ್ನೆ ಮಾಡಿದರು.

ಎರಡು ಲಕ್ಷ ಮೂವತ್ತೊಂದು ಸಾವಿರ ಕೋಟಿ ರೂ.ಗಳ ಬಜೆಟ್ ಇಟ್ಟುಕೊಂಡು ಕೊರೊನಾ ಹೆಸರಲ್ಲಿ ಅದೆಷ್ಟು ನಾಟಕ ಮಾಡಿದಿರಿ? ಎಂದು ಟೀಕಿಸಿದರು. ಪ್ರತಿ ವರ್ಷ ಸಾವಿರ ರೈತರನ್ನು ಅಧ್ಯಯನಕ್ಕಾಗಿ ಚೀನಾಗೆ ಕಳಿಸುತ್ತೇವೆ. ಇಸ್ರೇಲ್​ಗೆ ಕಳಿಸುತ್ತೇವೆ ಎಂದಿದ್ದಿರಲ್ಲ? ಒಬ್ಬೇ ಒಬ್ಬ ರೈತನನ್ನು ಕಳಿಸಿದ್ದೀರಾ? ನೀವು ನೀಡಿದ ಯಾವ ಭರವಸೆಗಳೂ ಈಡೇರುತ್ತಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

ರೈತರ ಸಾಲಮನ್ನಾ ಮಾಡಿ ಎಂದರೆ ಎಲ್ಲಿದೆ ದುಡ್ಡು ಎಂದು ಯಡಿಯೂರಪ್ಪ ಕೇಳುತ್ತಾರೆ. ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎನ್ನುತ್ತಾರೆ. ಆದರೆ, ನಮ್ಮ ಸರ್ಕಾರವಿದ್ದಾಗ ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದಿದ್ದೀರಿ. ಈಗ ನೀವೇ ಸಾಲ ಮನ್ನಾ ಮಾಡಬೇಕು ಎಂದಾಗ ಯಾಕೆ ಈ ವಚನ ಭ್ರಷ್ಟತೆ? ಬಿಜೆಪಿಯಂತಹ ವಚನ ಭ್ರಷ್ಟರು ಯಾರೂ ಇಲ್ಲ ಎನ್ನಲು ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತನಾಡುತ್ತೀರಿ. ಆದರೆ, ಬೆಳಗಾವಿಯ ಸುವರ್ಣಸೌಧದಲ್ಲಿ ಇದುವರೆಗೆ ಒಂದೇ ಒಂದು ಬಾರಿ ವಿಧಾನಮಂಡಲ ಅಧಿವೇಶನ ಮಾಡಿದ್ದೀರಾ? ಎಂದು ಕೇಳಿದರು. ಗೋಹತ್ಯೆ ನಿಷೇಧ ಕಾಯ್ದೆ ಸಂಘ ಪರಿವಾರದ ಅಜೆಂಡಾ.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಮೂರು ಸಾವಿರ ಕೋಟಿ, ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್​ಗಾಗಿ ನೂರಾರು ಕೋಟಿ, ಮಹಿಳೆಯರ ಕಲ್ಯಾಣಕ್ಕಾಗಿ ನೂರಾರು ಕೋಟಿ, ಬಿಪಿಎಲ್ ಕುಟುಂಬದವರಿಗೆ ಬಡ್ಡಿ ರಹಿತ ಸಾಲ, ಬೀದಿ ಬದಿ ವ್ಯಾಪಾರಿಗಳಿಗೆ ದುಡ್ಡು ಹೀಗೆ ಎಲ್ಲರಿಗೂ ದಂಡಿಯಾಗಿ ಭರವಸೆ ನೀಡಿದಿರಿ.

ಆದರೆ, ಯಾವುದೇ ಭರವಸೆ ಈಡೇರಿಸಿದ್ದೀರಾ? ಒಟ್ಟು 223 ಭರವಸೆಗಳನ್ನು ಈ ಸರ್ಕಾರ ನೀಡಿದೆ. ಆದರೆ, ಆದೇಶವಾಗಿರುವುದು 131. ನಲವತ್ತೊಂಭತ್ತು ಕಾರ್ಯಕ್ರಮಗಳನ್ನು ಕೈ ಬಿಟ್ಟಿರಿ. ನಲವತ್ಮೂರು ಕಾರ್ಯಕ್ರಮಗಳ ಆದೇಶವನ್ನೇ ಹೊರಡಿಸಲಿಲ್ಲ.

ಆದರೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗೋಹತ್ಯೆ ನಿಷೇಧ ಮಸೂದೆಗೆ ತಿದ್ದುಪಡಿ, ಅಗತ್ಯ ವಸ್ತುಗಳ ಸೇವಾ ಕಾಯ್ದೆಗೆ ತಿದ್ದುಪಡಿಯಂತಹ ಕೆಲಸ ಮಾಡಿದ್ದೀರಿ. ಈ ಪೈಕಿ ಗೋಹತ್ಯೆ ನಿಷೇಧ ಕಾಯ್ದೆ ಸಂಘ ಪರಿವಾರದ ಅಜೆಂಡಾ. ನಿಮ್ಮ ಸಾಧನೆ ಏನು? ಎಂದು ಪ್ರಶ್ನೆ ಮಾಡಿದರು.

Last Updated : Feb 3, 2021, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.