ಬೆಂಗಳೂರು: 'ಬೊಮ್ಮಾಯಿ ನೀನು ಬಹಳ ಹುಷಾರಾಗಿರಪ್ಪ. ಸರ್ಕಾರ ತಂದ ಯಡಿಯೂರಪ್ಪರನ್ನೇ ಬಿಟ್ಟಿಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ವ್ಯಂಗ್ಯವಾಡಿದರು.
'ಬೆಲೆ ಏರಿಕೆ ವಿಚಾರವಾಗಿ ನಿಮ್ಮನ್ನು ತಯಾರಿ ಮಾಡಿ ಕೊಟ್ಟವರು ನಿಮ್ಮನ್ನು ದೆಹಲಿಗೆ ಕಳಿಸಲು ಯತ್ನಿಸುತ್ತಿದ್ದಾರೆ. ಆದರೆ ನೀವು ಇಲ್ಲೇ ಇರಬೇಕು ಎಂಬುದು ನಮ್ಮ ಆಸೆ' ಎಂದು ಇದೇ ವೇಳೆ ಬೊಮ್ಮಾಯಿ ಅವರು ಸಿದ್ದರಾಮಯ್ಯ ಕಾಲೆಳೆದರು.
ಇದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ, 'ನಿಮ್ಮ ಕಾಲೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ತಂದ ಯಡಿಯೂರಪ್ಪನನ್ನೇ ಮೂಲೆಗೆ ಕೂರಿಸಿದ್ದಾರೆ. ನಿಮ್ಮನ್ನೂ ಹಾಗೆ ಮಾಡಬಹುದು. ನಾನು ಐದು ವರ್ಷ ಸಿಎಂ ಆಗಿ ಮುಗಿಸಿದ್ದೇನೆ. ನನ್ನನ್ನು ಯಾರೂ ಪ್ರೊವೋಕ್ ಮಾಡಿಲ್ಲ. ಬೊಮ್ಮಾಯಿ ಮಗನಾಗಿ ನೀವು ಸಿಎಂ ಆಗಿ ಮುಂದುವರೆಯಬೇಕು' ಎಂದರು.
ಇದಕ್ಕೆ ಉತ್ತರಿಸಿ ಬೊಮ್ಮಾಯಿ, 'ನನಗೆ ಯಾವುದೇ ಚಿಂತೆ ಇಲ್ಲ. ನೀವು ಇಲ್ಲಿ ಇರಬಾರದು ಎಂದು ದೊಡ್ಡ ಹುನ್ನಾರ ನಡೆಯುತ್ತಿದೆ. ಅದು ನಿಮಗೂ ಗೊತ್ತಿದೆ. ನೀವು ಸದನದಲ್ಲಿ ಒಪ್ಪಿಲ್ಲವಾದರೂ ಖಾಸಗಿಯಾಗಿ ಒಪ್ಪುತ್ತೀರಾ' ಎಂದು ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕಕ್ಕೆ ಭರವಸೆ : ಸಚಿವ ಬಿ ಸಿ ನಾಗೇಶ್