ETV Bharat / state

ಇಂದು ಕೈ ಶಾಸಕರೊಂದಿಗೆ ಸಿದ್ದರಾಮಯ್ಯ ಆನ್​ಲೈನ್​ ಸಮಾಲೋಚನೆ

ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

Siddaramaiah
ಶಾಸಕರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆನ್​ಲೈನ್​ ಸಮಾಲೋಚನೆ
author img

By

Published : Sep 7, 2020, 9:56 AM IST

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಪಕ್ಷದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಝೂಮ್ ಆ್ಯಪ್​ ಮೂಲಕ ಮಾತನಾಡಲಿದ್ದಾರೆ.

ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದಿಂದ ಶಾಸಕರೊಂದಿಗೆ ಆನ್​ಲೈನ್ ಸಮಾಲೋಚನೆ ನಡೆಸುವ ಸಿದ್ದರಾಮಯ್ಯ, ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಿದ್ದಾರೆ. ವಿಧಾನಮಂಡಲ ಅಧಿವೇಶನ ಸಂದರ್ಭ ಪಕ್ಷದ ನಿಲುವು ಹಾಗೂ ತೀರ್ಮಾನಗಳಿಗೆ ಬದ್ಧವಾಗಿರಬೇಕು. ಪಕ್ಷಕ್ಕೆ ಮಾಹಿತಿ ನೀಡಿ ಸದನದ ಒಳಗೆ ಹಾಗೂ ಹೊರಗೆ ಮಾತನಾಡಬೇಕು. ಪಕ್ಷ ನೀಡುವ ಮಾರ್ಗದರ್ಶನವನ್ನು ಯಥಾವತ್ ಪಾಲಿಸಬೇಕು. ಪಕ್ಷ ಚರ್ಚಿಸಿ ಇಲ್ಲವೇ ದಿಢೀರ್ ಕೈಗೊಳ್ಳುವ ಯಾವುದೇ ನಿರ್ಧಾರವಿದ್ದರೂ ಅದನ್ನ ಬೆಂಬಲಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ಸೂಚನೆಯನ್ನು ಇದೇ ಸಂದರ್ಭ ನೀಡಲಿದ್ದಾರೆ.

ಅನಗತ್ಯ ಕಲಹ ಬೇಡ: ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಅಧಿವೇಶನ ಹೊರತುಪಡಿಸಿ ಕೈಗೊಂಡ ತೀರ್ಮಾನಗಳು, ಸದನದಲ್ಲಿ ಚರ್ಚಿಸದೆ ಕೈಗೊಂಡ ಭೂಸುಧಾರಣೆ, ಎಪಿಎಂಸಿ ಮತ್ತಿತರ ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆ ವಿಚಾರವಾಗಿ ಅತ್ಯಂತ ಗಂಭೀರ ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

ಈ ಅಧಿವೇಶನ ಸಂದರ್ಭ ಸಮಯ ವ್ಯರ್ಥ ಮಾಡದೆ ಅತ್ಯಂತ ವ್ಯವಸ್ಥಿತವಾಗಿ ರಾಜ್ಯ ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುವ ಕಾರ್ಯ ಮಾಡಬೇಕು. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಅನಗತ್ಯ ಗೊಂದಲಗಳಿಗೆ ಅವಕಾಶ ಮಾಡಿಕೊಡುವುದು ಬೇಡ. ಸಾಧ್ಯವಾದಷ್ಟು ಹೆಚ್ಚು ವಿಚಾರಗಳನ್ನು ಕೈಗೆತ್ತಿಕೊಂಡು ಚರ್ಚಿಸೋಣ. ಸಭಾತ್ಯಾಗ, ಸದನದ ಬಾವಿಗಿಳಿದು ಗಲಾಟೆ ನಡೆಸುವುದನ್ನು ಸಾಧ್ಯವಾದಷ್ಟು ಕೈಬಿಡೋಣ. ಜನಸಾಮಾನ್ಯರ ಸಮಸ್ಯೆಯ ಕುರಿತು ಚರ್ಚಿಸೋಣ. ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳು, ಕೊರೊನಾದಿಂದಾಗಿ ಎದುರಾಗಿರುವ ಸಮಸ್ಯೆ, ಕೇಂದ್ರ ಸರ್ಕಾರದ ಅಸಹಕಾರ, ಜಿಎಸ್​ಟಿ ಪಾಲು ನೀಡದಿರುವುದು, ನೆರೆ ಪರಿಹಾರ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆಯಬೇಕು ಎಂಬ ವಿಚಾರವಾಗಿ ಇಂದು ಸಿದ್ದರಾಮಯ್ಯ ಶಾಸಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.

ಕೊರೊನಾ ಭೀತಿಯಿಂದ ಮುಂದೂಡಿದ್ದ ವಿಧಾನಮಂಡಲದ ಮಳೆಗಾಲದ ಅಧಿವೇಶನ, ಸೆ.21 ರಿಂದ 30 ರವರೆಗೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿ ಮಳೆಗಾಲದ ಅವೇಶನ ನಡೆಸಬೇಕಾಗಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಅಂತಿಮವಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ವಿಧಾನಸೌಧದಲ್ಲೇ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.