ETV Bharat / state

ದೆಹಲಿಯತ್ತ ಸಿದ್ದರಾಮಯ್ಯ ಪ್ರಯಾಣ: ನಿಗದಿಯಾಗದ ಡಿ.ಕೆ.ಶಿವಕುಮಾರ್ ಪ್ರವಾಸ - ಡಿಕೆಶಿ ಪ್ರವಾಸ

ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿರುವ ಡಿಕೆಶಿ ಹಾಗೂ ಹೆಚ್ಚಿನ ಶಾಸಕರ ಬೆಂಬಲ ಹೊಂದಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್​ ಭೇಟಿಗೆ ತಮ್ಮ ನಿವಾಸದಿಂದ ದೆಹಲಿಯತ್ತ ತೆರಳಿದ್ದಾರೆ.

DK Shivakumar, Siddaramaiah
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
author img

By

Published : May 15, 2023, 11:00 AM IST

Updated : May 15, 2023, 1:12 PM IST

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೇರಲು ಪ್ರಯತ್ನ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಯ್ಕೆಯ ಲಾಬಿಯನ್ನು ದೆಹಲಿ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಮೇ 13 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭೂತಪೂರ್ವ 135 ಸ್ಥಾನಗಳನ್ನು ಗಳಿಸಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಅವಕಾಶ ಪಡೆದಿದೆ.

ಯಾವುದೇ ಅತಂತ್ರ ಸ್ಥಿತಿ ಇಲ್ಲದ ಹಿನ್ನೆಲೆಯಲ್ಲಿ ಮುಂದಿನ 5 ವರ್ಷ ಸರಾಗ ಹಾಗೂ ಸುಲಲಿತವಾಗಿ ಸರ್ಕಾರ ನಡೆಸಿಕೊಂಡು ಸಾಗುವ ಅವಕಾಶ ಇರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿರುವ ಡಿಕೆಶಿ ಹಾಗೂ ಹೆಚ್ಚಿನ ಶಾಸಕರ ಬೆಂಬಲ ಹೊಂದಿರುವ ಕಾರಣಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದಲ್ಲಿ 10ಕ್ಕೂ ಹೆಚ್ಚು ಮಂದಿ ಸಿಎಂ ಆಕಾಂಕ್ಷಿಗಳು ತಮ್ಮದೇ ಆದ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್.

ಫಲಿತಾಂಶದ ಬಳಿಕ ನಿನ್ನೆ(ಭಾನುವಾರ) ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ಎಐಸಿಸಿಯಿಂದ ನೇಮಕಗೊಂಡ ಮೂವರು ವೀಕ್ಷಕರು ಹಾಗೂ ರಾಷ್ಟ್ರೀಯ ನಾಯಕರು ರಾಜ್ಯದ 135 ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ನಡೆದಿರುವ ಈ ಗುಪ್ತ ಮತದಾನದ ವಿವರದೊಂದಿಗೆ ವೀಕ್ಷಕರು ದಿಲ್ಲಿಗೆ ತೆರಳಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಸ್ತಾಂತರಿಸಲಿದ್ದಾರೆ.

ಪಕ್ಷ ಸಂಘಟನೆಗೆ ದುಡಿದಿರುವ ಹಿನ್ನೆಲೆಯಲ್ಲಿ ತಮಗೆ ಅವಕಾಶ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಹೆಚ್ಚು ಶಾಸಕರ ಬೆಂಬಲ ತಮಗಿದ್ದು ತಾವು ಸಹ ಸಿಎಂ ಆಗುವ ಅರ್ಹತೆ ಹೊಂದಿರುವುದಾಗಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ. ಇಬ್ಬರೂ ಪ್ರಬಲ ನಾಯಕರು ಪಕ್ಷದ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಸಕರ ಒಲವು ಯಾರ ಕಡೆ ಇದೆ ಎಂಬ ಮಾಹಿತಿ ಇದುವರೆಗೂ ದೃಢಪಟ್ಟಿಲ್ಲ.

ನಿಗದಿಯಾಗದ ಡಿಕೆಶಿ ದೆಹಲಿ ಪ್ರವಾಸ: ಸದ್ಯ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಅವಕಾಶ ಹೈಕಮಾಂಡ್ ಮುಂದೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಪ್ರಯತ್ನವನ್ನು ದೆಹಲಿ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಇಂದು ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ತಮ್ಮ ಪ್ರಯತ್ನವನ್ನು ನಡೆಸುವುದರ ವಿಚಾರವಾಗಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಜೆಯ ವೇಳೆಗೆ ನಿರ್ಧಾರ ಕೈಗೊಂಡು ದೆಹಲಿಯತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ದೆಹಲಿಯತ್ತ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನದ ಸಂಬಂಧ ಹೈಕಮಾಂಡ್​ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅವರು ದೆಹಲಿಗೆ ಪ್ರಯಾಣಿಸಿಸುತ್ತಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿಯಾಗಿ ಶಾಸಕರ ಒಲವು ಹಾಗೂ ತಮ್ಮ ಅಭಿಪ್ರಾಯವನ್ನು ಅವರು ತಿಳಿಸಲಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಈಗಾಗಲೇ ಹೆಣೆದ ಸೂತ್ರದ ಪ್ರಕಾರ ಐದು ವರ್ಷದ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾನವಾಗಿ ಹಂಚಿಕೊಳ್ಳಬೇಕು. ಮೊದಲ ಹಾಗೂ ಎರಡನೇ ಅವಧಿ ಯಾರು ಸಿಎಂ ಆಗಬೇಕು ಎಂಬ ನಿರ್ಧಾರವನ್ನು ಸಹ ಬಹುತೇಕ ಅಂತಿಮಗೊಳಿಸಿದ್ದರು. ಆದರೆ ಪಕ್ಷ ಅಭೂತಪೂರ್ವ ಯಶಸ್ಸಿನೊಂದಿಗೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಪೂರ್ಣಾವಧಿ ಅಧಿಕಾರವನ್ನು ಒಬ್ಬರೇ ನಡೆಸುವ ಪ್ರಯತ್ನಕ್ಕೆ ಈಗ ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಂದಾಗಿದ್ದಾರೆ.

ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಭರವಸೆ ನೀಡಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಡಿಕೆಶಿ ಅಂದೆ ಪಕ್ಷದ ವರಿಷ್ಠರಿಂದ ಭರವಸೆ ಪಡೆದಿದ್ದರು. ಒಂದೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನವನ್ನು ಡಿಕೆಶಿ ಅವರಿಗೆ ನೀಡುವುದಾಗಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭರವಸೆ ನೀಡಿದ್ದರು. ಇದೀಗ ಅದೇ ಪ್ರಕಾರ ತಮಗೆ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ, ತಮ್ಮ ಪ್ರಭಾವದ ಮೂಲಕ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದು ಹೆಚ್ಚಿನ ಶಾಸಕರ ಒಲವು ತಮ್ಮ ಬಳಿ ಇದೆ. ತಾವೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಂತೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ವಿಚಾರದಲ್ಲಿ ಹೈಕಮಾಂಡ್ ತೀವ್ರ ಗೊಂದಲಕ್ಕೆ ಸಿಲುಕಿದ್ದು ಅಂತಿಮ ತೀರ್ಮಾನ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ.

ಪಕ್ಷದ ವರಿಷ್ಠರ ಮೇಲೆ ಇನ್ನಷ್ಟು ಒತ್ತಡ ಹೇರುವ ಉದ್ದೇಶದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಪ್ರಭಾವವನ್ನು ದೆಹಲಿ ಮಟ್ಟದಲ್ಲಿ ತೋರಿಸಲು ಮುಂದಾಗಿದ್ದು, ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಇಂದು ಮಧ್ಯಾಹ್ನವೇ ತೆರಳಲ್ಲಿದ್ದು, ಡಿಕೆಶಿ ಯಾವಾಗ ತೆರಳುತ್ತಾರೆ ಎಂಬ ಮಾಹಿತಿ ಇಲ್ಲ. ಕಾಂಗ್ರೆಸ್​ಗೆ ಜನ ನಿಚ್ಚಳ ಬಹುಮತ ನೀಡಿ ಎರಡು ದಿನ ಕಳೆದಿದ್ದು ಇನ್ನೊಂದೆರೆಡು ದಿನಗಳ ಒಳಗೆ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಹೈಕಮಾಂಡ್ ಮಾಡಬೇಕಿದೆ.

ಇದನ್ನೂ ಓದಿ: ಸಿಎಂ ಹುದ್ದೆಗೆ ಪೈಪೋಟಿ: ಇಂದು ದೆಹಲಿಗೆ ಡಿಕೆಶಿ, ಸಿದ್ದರಾಮಯ್ಯ ಪ್ರಯಾಣ ಸಾಧ್ಯತೆ

Last Updated : May 15, 2023, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.