ETV Bharat / state

ಪೌರತ್ವ ಕಾಯ್ದೆ ಸಂವಿಧಾನ ಅಷ್ಟೇ ಅಲ್ಲ; ಮಾನವೀಯತೆ ವಿರೋಧಿ ಕೂಡ: ಸಿದ್ದರಾಮಯ್ಯ

author img

By

Published : Jan 16, 2020, 5:19 PM IST

ಪೌರತ್ವ ತಿದ್ದುಪಡಿ ಕಾಯ್ದೆ ಮನುಷತ್ವದ ವಿರೋಧಿಯಾಗಿದೆ. ಈ ಕಾಯ್ದೆಯಿಂದ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ಅನ್ಯಾಯ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Siddaramaiah
ಸಿದ್ದರಾಮಯ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಮಾತ್ರವಲ್ಲ, ಮಾನವೀಯತೆಯ ವಿರೋಧಿ ಆಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ತಿಪಕ್ಷ ನಾಯಕ ಸಿದ್ದರಾಮಯ್ಯ

ಪೌರತ್ವ ಕಾಯ್ದೆ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಮನುಷತ್ವದ ವಿರೋಧಿಯಾಗಿದೆ. ಈ ಕಾಯ್ದೆಯಿಂದ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ಅನ್ಯಾಯ ಆಗುತ್ತದೆ. ಬಹುಮತ ಇದ್ದರೂ ಜನವಿರೋಧಿ ಕಾನೂನು ತರಬಾರದು. ಅದು ಪ್ರಜಾಪ್ರಭುತ್ವ. ಈ ಕಾಯ್ದೆಯನ್ನು ನಾವು ವಿರೋಧ ಮಾಡಲೇ ಬೇಕು ಎಂದು ಕರೆ ನೀಡಿದರು.

ಪೌರತ್ವ ಕಾಯ್ದೆ, ಎನ್ ಪಿಆರ್, ಎನ್ ಸಿಆರ್ ಎಲ್ಲವೂ ಒಂದೇ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೋದಿ, ಅಮಿತ್ ಶಾ ಈ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎನ್‌ಪಿಆರ್ ಹಿಂದೆ ರಾಕ್ಷಸಿ ಉದ್ದೇಶ ಇದೆ. ಸಂವಿಧಾನ ವಿರೋಧಿ ಕಾಯ್ದೆ ಇದಾಗಿದೆ. ಅಕ್ರಮ ವಲಸಿಗರನ್ನು ಸಕ್ರಮ ಗೊಳಿಸಲು ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಂರನ್ನು ಏಕೆ ಹೊರಗಿಟ್ಟಿದ್ದೀರಿ? ಮುಸ್ಲಿಂರೂ ನಮ್ಮ ದೇಶಕ್ಕೆ ಬಂದಿದ್ದಾರೆ. ಬಾಂಗ್ಲಾ, ಪಾಕಿಸ್ತಾನ, ಆಪ್ಘನ್ ಬಿಟ್ಟು ಇತರ ನೆರೆ ರಾಜ್ಯಗಳಿಂದಲೂ ಹಲವರು ವಲಸೆ ಬಂದಿದ್ದಾರೆ. ಅವರನ್ನು ಏಕೆ ಕಾಯ್ದೆಯಿಂದ ಹೊರಗಿಟ್ಟಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಹಿಡನ್ ಅಜೆಂಡಾ ಇದೆ: ನಿಮ್ಮ ಉದ್ದೇಶ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಅಷ್ಟೇ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಜಾತ್ಯಾತೀತತೆ ಸಂವಿಧಾನದ ಮೂಲ ಆಶಯ.‌ ಅದನ್ನು ಉಲ್ಲಂಘಿಸಲಾಗುತ್ತಿದೆ. ಬಹುಮತ ಇರುವ ಪಕ್ಷ ಕಾನೂನು ಮಾಡಲಿ, ಆದರೆ ಅದು ನ್ಯಾಯಬದ್ಧ ಇಲ್ಲವಾದರೆ ಅದನ್ನು ವಿರೋಧಿಸಿ ಎಂದು ಗಾಂಧಿಜಿ ಹೇಳಿದ್ದರು. ಈ ಕಾಯ್ದೆ ನಮಗೆ ಬೇಕಾಗಿದೆಯಾ?. ದೇಶದಲ್ಲಿ ಸಮಾಜ ಕಿತ್ತು ತಿನ್ನುವ ಸಮಸ್ಯೆಗಳಿವೆ. ಈ ಬಗ್ಗೆ ನೀವು ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲೇ ನೀವು ಎನ್ ಆರ್ ಸಿ ತರುತ್ತೇವೆ ಎಂದು ಹೇಳಿದ್ದೀರ. ಅದಕ್ಕೆ ತಂದಿದ್ದೀರ. ಜನಪರವಾದ ಇತರ ವಿಚಾರಗಳ ಬಗ್ಗೆನೂ ಪ್ರಣಾಳಿಕೆಯನ್ನು ಹೇಳಿದ್ದೀರ. ಅದನ್ನು ಏಕೆ ಜಾರಿ ಮಾಡುತ್ತಿಲ್ಲ?. ನಾವು ದೇಶವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಪ್ರಶ್ನಿಸಿದರು.

ನನ್ನದೇ ಡೇಟ್ ಆಫ್ ಬರ್ತ್ ಇಲ್ಲ.‌ ಇನ್ನು ನನ್ನ ಅಪ್ಪ ಅಮ್ಮಂದಿರ ಡೇಟ್ ಆಪ್ ಬರ್ಥ್ ಎಲ್ಲಿಂದ ತರುವುದು?. ಡಿಟೆಂಷನ್ ಸೆಂಟರ್‌ ತೆರೆಯಲು ಹೇಳಿದ್ದಾರೆ. ಇದಕ್ಕೆ ಖರ್ಚು ಎಷ್ಟಾಗುತ್ತದೆ?. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ಅದರ ಬಗ್ಗೆ ನೋಡಿ ಎಂದರು.

ಕದ್ದುಮುಚ್ಚಿ ಕಾಯ್ದೆ ವಿರೋಧಿಸಿದರೆ ಏನು ಪ್ರಯೋಜನ ಇಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಮುಂದಾಳತ್ವ ವಹಿಸಿ ಹೋರಾಟ ಮಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.

Intro:Body:KN_BNG_02_KPCC_LIVE_SCRIPT_7201951

ಪೌರತ್ವ ಕಾಯ್ದೆ ಸಂವಿಧಾನ ವಿರೋಧಿ ಮಾತ್ರವಲ್ಲ; ಮಾನವೀಯತೆ ವಿರೋಧಿ ಕೂಡ: ಸಿದ್ದರಾಮಯ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕೇವಲ ಸಂವಿಧಾನ ವಿರೋಧಿ ಮಾತ್ರವಲ್ಲ, ಮಾನವೀಯತೆಯ ವಿರೋಧಿ ಆಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.

ಪೌರತ್ವ ಕಾಯ್ದೆ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಮನುಷತ್ವದ ವಿರೋಧಿಯಾಗಿದೆ. ಈ ಕಾಯ್ದೆಯಿಂದ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ಅನ್ಯಾಯ ಆಗುತ್ತದೆ. ಬಹುಮತ ಇದ್ದರೂ ಜನವಿರೋಧಿ ಕಾನೂನು ತರಬಾರದು. ಅದು ಪ್ರಜಾಪ್ರಭುತ್ವ. ಈ ಕಾಯ್ದೆಯನ್ನು ನಾವು ವಿರೋಧ ಮಾಡಲೇ ಬೇಕು ಎಂದು ಕರೆ ನೀಡಿದರು.

ಪೌರತ್ವ ಕಾಯ್ದೆ, ಎನ್ ಪಿಆರ್, ಎನ್ ಸಿಆರ್ ಎಲ್ಲವೂ ಒಂದೇ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೋದಿ, ಅಮಿತ್ ಶಾ ಈ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎನ್‌ಪಿಆರ್ ಹಿಂದೆ ರಾಕ್ಷಸಿ ಉದ್ದೇಶ ಇದೆ. ಸಂವಿಧಾನ ವಿರೋಧಿ ಕಾಯ್ದೆ ಇದಾಗಿದೆ. ಅಕ್ರಮ ವಲಸಿಗರನ್ನು ಸಕ್ರಮ ಗೊಳಿಸಲು ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಂರನ್ನು ಏಕೆ ಹೊರಗಿಟ್ಟಿದ್ದೀರಿ? ಮುಸ್ಲಿಂರೂ ನಮ್ಮ ದೇಶಕ್ಕೆ ಬಂದಿದ್ದಾರೆ. ಭಾಂಗ್ಲಾ, ಪಾಕಿಸ್ತಾನ್, ಅಪ್ಘನ್ ಬಿಟ್ಟು ಇತರ ನೆರೆ ರಾಜ್ಯಗಳಿಂದಲೂ ಹಲವರು ವಲಸೆ ಬಂದಿದ್ದಾರೆ. ಅವರನ್ನು ಏಕೆ ಕಾಯ್ದೆಯಿಂದ ಹೊರಗಿಟ್ಟಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಹಿಡನ್ ಅಜೆಂಡಾ ಇದೆ:

ನಿಮ್ಮ ಉದ್ದೇಶ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಅಷ್ಟೇ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಜಾತ್ಯಾತೀತತೆ ಸಂವಿಧಾನದ ಮೂಲ ಆಶಯ.‌ ಅದನ್ನು ಉಲ್ಲಂಘಿಸಲಾಗುತ್ತಿದೆ. ಬಹುಮತ ಇರುವ ಪಕ್ಷ ಕಾನೂನು ಮಾಡಲಿ, ಆದರೆ ಅದು ನ್ಯಾಯಬದ್ಧ ಇಲ್ಲವಾದರೆ ಅದನ್ನು ವಿರೋಧಿಸಿ ಎಂದು ಗಾಂಧಿಜಿ ಹೇಳಿದ್ದರು. ಈ ಕಾಯ್ದೆ ನಮಗೆ ಬೇಕಾಗಿದೆಯಾ?. ದೇಶದಲ್ಲಿ ಸಮಾಜ ಕಿತ್ತು ತಿನ್ನುವ ಸಮಸ್ಯೆಗಳಿವೆ. ಈ ಬಗ್ಗೆ ನೀವು ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲೇ ನೀವು ಎನ್ ಆರ್ ಸಿ ತರುತ್ತೇವೆ ಎಂದು ಹೇಳಿದ್ದೀರ. ಅದಕ್ಕೆ ತಂದಿದ್ದೀರ. ಜನಪರವಾದ ಇತರ ವಿಚಾರಗಳ ಬಗ್ಗೆನೂ ಪ್ರಣಾಳಿಕೆಯನ್ನು ಹೇಳಿದ್ದೀರ. ಅದನ್ನು ಏಕೆ ಜಾರಿ ಮಾಡುತ್ತಿಲ್ಲ?. ನಾವು ದೇಶವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಪ್ರಶ್ನಿಸಿದರು.

ನನ್ನದೇ ಡೇಟ್ ಆಫ್ ಬರ್ಥ್ ಇಲ್ಲ.‌ ಇನ್ನು ನನ್ನ ಅಪ್ಪ ಅಮ್ಮಂದಿರ ಡೇಟ್ ಆಪ್ ಬರ್ಥ್ ಎಲ್ಲಿಂದ ತರುವುದು?. ಡಿಟೆಂಷನ್ ಸೆಂಟರ್‌ ತೆರೆಯಲು ಹೇಳಿದ್ದಾರೆ. ಇದಕ್ಕೆ ಖರ್ಚು ಎಷ್ಟಾಗುತ್ತದೆ?. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ಅದರ ಬಗ್ಗೆ ನೋಡಿ ಎಂದರು.

ಕದ್ದುಮುಚ್ಚಿ ಕಾಯ್ದೆ ವಿರೋಧಿಸಿದರೆ ಏನು ಪ್ರಯೋಜನ ಇಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಮುಂದಾಳತ್ವ ವಹಿಸಿ ಹೋರಾಟ ಮಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.