ETV Bharat / state

ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ - ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಎಲ್ಲಿ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಶೋಷಣೆ‌ ಇರುತ್ತದೆ. ಇದು ಮುಂದುವರಿಯಬೇಕೆಂದು ಸಂಘ ಪರಿವಾರದವರು ಬಯಸುತ್ತಾರೆ. ಇದರಿಂದ ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ- ವಿಪಕ್ಷ ನಾಯಕ ಸಿದ್ದರಾಮಯ್ಯ

Constitution Day Celebration
ಕೆಪಿಸಿಸಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ
author img

By

Published : Nov 26, 2022, 2:27 PM IST

ಬೆಂಗಳೂರು: ಸಂವಿಧಾನದ ಬಗ್ಗೆ ಸಂಘ ಪರಿವಾರದವರಿಗೆ ಒಪ್ಪಿಗೆ ಇಲ್ಲ. ಇವರು ಜಾತಿ ವ್ಯವಸ್ಥೆ, ಚತುರ್ವರ್ಣ ಹಾಗೂ ಮನು ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಿ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಶೋಷಣೆ‌ ಇರುತ್ತದೆ. ಇದು ಮುಂದುವರಿಯಬೇಕೆಂದು ಸಂಘ ಪರಿವಾರದವರು ಬಯಸುತ್ತಾರೆ. ಇದರಿಂದ ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇವರ ನಿಲುವಿಗೆ ವಿರುದ್ಧವಾಗಿ ಸಂವಿಧಾನ ಇರುವ ಹಿನ್ನೆಲೆ ವಿರೋಧಿಸುತ್ತಿದ್ದಾರೆ ಎಂದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ, ನ್ಯಾ.ಎಂ.ಎನ್.ವೆಂಕಟಾಚಲ ನೇತೃತ್ವದಲ್ಲಿ ಸಂವಿಧಾನ ಪರಾಮರ್ಶನ ಸಮಿತಿ ರಚಿಸಿದ್ದರು. ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಈ ಸಂವಿಧಾನದ ಪರಾಮರ್ಷೆ ಅಥವಾ ಬದಲಿಸುವ ಯತ್ನ ನಿಂತಿತು. ಕೇಂದ್ರದಲ್ಲಿ ಮೋದಿ ಸಂಪುಟ ಸಚಿವರಾಗಿದ್ದ ಅನಂತ್​​ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದರು.

ಗಾಂಧಿ, ನೆಹರು ವಿರೋಧಿಸಬೇಕೆಂದು ಸಂಘ ಪರಿವಾರದ ಗಿರಾಕಿಗಳು ಅಂಬೇಡ್ಕರ್, ವಲ್ಲಭಭಾಯ್ ಪಟೇಲ್​​ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಅಮಿಶ್ ಶಾ ಸಹ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ. ಸಂವಿಧಾನ ಕರಡು ರಚನಾ ಸಮಿತಿ ರಚಿಸಿದ್ದು‌ ಕಾಂಗ್ರೆಸ್. ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಹಿಂದೆ ಅವರ ಕಾನೂನು ಜ್ಞಾನ ಅಪಾರವಾಗಿದ್ದು ಕಾರಣ ಎಂದರು.

ಅಂಬೇಡ್ಕರ್ ವಿಚಾರವಾಗಿ‌ ಮೊಸಳೆ‌ ಕಣ್ಣೀರು: ಅಸಮಾನತೆ ತೊಡೆದುಹಾಕುವ ಬದ್ಧತೆ ಇದ್ದದ್ದು ಕಾಂಗ್ರೆಸ್​ಗೆ. ಅವರು ಒಂದು ದೇಶ, ನಾಯಕ, ಭಾಷೆ, ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು. ಆದರೆ ಬಿಜೆಪಿಯವರು ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟವರು. ಇವರಿಂದ ದೇಶ ಉಳಿಯಲು ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ದೇಶವನ್ನು ಅವನತಿಯಿಂದ ಕಾಪಾಡಬೇಕು.

ಬಿಜೆಪಿಯವರಿಗೆ ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅನಗತ್ಯವಾಗಿ ಸಿಎಂ ಬಸವರಾಜ ಬೊಮ್ಮಾಯಿ ಧಮ್ಮು, ತಾಕತ್ತಿನ ಮಾತು ಆಡುತ್ತಿದ್ದಾರೆ. ಬಿಜೆಪಿ ಸಾಮಾಜಿಕ ನ್ಯಾಯ, ಮೀಸಲಾತಿ ವಿರೋಧಿಗಳು. ಇವರು ಸಾಮಾಜಿಕ ನ್ಯಾಯದ ಪರವಾಗಿ ಇಲ್ಲದವರು. ಕೆಲವರು ಈ ಬಗ್ಗೆ ಗೊತ್ತಿಲ್ಲದೆ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯವರು ಅಂಬೇಡ್ಕರ್ ವಿಚಾರವಾಗಿ‌ ಮೊಸಳೆ‌ ಕಣ್ಣೀರು ಸುರಿಸುತ್ತಿದ್ದಾರೆ. ಸಂವಿಧಾನ ದೇಶದ ಆಸ್ತಿ. ಇದನ್ನು ಸಂಘ ಪರಿವಾರದವರು ತಮ್ಮ ಪ್ರಾಬಲ್ಯ ಹೊಂದಲು ಯತ್ನಿಸುತ್ತಿದ್ದಾರೆ. ಇದನ್ನು ನಾವು ತಡೆಯಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು.

ಸಂವಿಧಾನ ನಮಗೆ ದೊಡ್ಡ ಶಕ್ತಿ ನೀಡಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಸಂವಿಧಾನ ದಿನವನ್ನು ಹಬ್ಬದ ರೀತಿ ಆಚರಿಸಲು ಮುಂದಾಗಿದ್ದೇವೆ. ನಾನು ಅಧ್ಯಕ್ಷನಾಗಿ ಪದಗ್ರಹಣ ಮಾಡುವ ಮುನ್ನ ಸಂವಿಧಾನದ ಪೀಠಿಕೆಯನ್ನು ರೆಹಮಾನ್ ಖಾನ್ ಅವರ ಮೂಲಕ ಬೋಧಿಸಿದ್ದೆ. ಸಂವಿಧಾನ ನಮಗೆ ನೀಡಿದ ರಕ್ಷಣೆ ದೊಡ್ಡದು ಎಂದರು.

ದೇಶದಲ್ಲಿ ಎಷ್ಟೋ ಜಾತಿ, ಧರ್ಮ ಇದೆ. ಆಚರಣೆ ವಿಭಿನ್ನವಾಗಿದೆ. ನೂರಾರು ಭಾಷೆ ಇಲ್ಲಿದೆ. ರಾಜ್ಯದಲ್ಲೂ ಸಾಕಷ್ಟು ಭಾಷೆ ಇವೆ. ಧರ್ಮ, ಆಹಾರ ಪದ್ಧತಿ, ಜೀವನ ಶೈಲಿ ಭಿನ್ನವಾಗಿದೆ. ಸಂವಿಧಾನ ನಮಗೆ ದೊಡ್ಡ ಶಕ್ತಿ ನೀಡಿದೆ. ನಮ್ಮ ಭಾಷೆಯನ್ನು ಬಳಸುವ ಹಕ್ಕು ನೀಡಿದ್ದು ಸಂವಿಧಾನ. ಇದರಲ್ಲಿ ಆಚಾರ ವಿಚಾರ, ಧರ್ಮ, ಭಾಷೆ ಬಿಡಿ ಎಂದು ಹೇಳಿಲ್ಲ. ಆಯಾ ಧರ್ಮಕ್ಕೆ ಅವರದ್ದೇ ಗ್ರಂಥವಿದೆ. ಸಂವಿಧಾನ ಇಡೀ ದೇಶದ ಪ್ರತಿಯೊಬ್ಬ ನಾಗರಿಕನ ಗ್ರಂಥ. ಬಿಜೆಪಿ ನಾಯಕರು ಅಧಿಕಾರದ ಪ್ರಮಾಣ ವಚನವನ್ನು ಸಂವಿಧಾನದ ಮೇಲೆ‌ ಪ್ರಮಾಣ ತೆಗೆದುಕೊಂಡಿದ್ದಾರೆ. ಇದನ್ನೇ ಇಂದು ಬದಲಿಸಲು ಹೊರಟಿದ್ದಾರೆ. ಬಿಜೆಪಿ ಯವರು ಜನರ ಭಾವನೆ‌ಕೆರಳಿಸಲು ಹೊರಟಿದ್ದಾರೆ. ಬಿಜೆಪಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಜನ ದೂರವಾಗುತ್ತಿದ್ದಾರೆ. ಅದರಿಂದ ಸಂವಿಧಾನ ಬದಲಿಸುತ್ತೇವೆ ಎನ್ನುತ್ತಿದ್ದಾರೆ.

ದೇಶದ ವೈವಿಧ್ಯತೆ, ಭಾಷೆ, ಸಂಸ್ಕೃತಿಗೆ ಬೆಲೆ ಕೊಡಿ. ಉತ್ತರ ಭಾರತದಲ್ಲಿ ಕೆಲ ದೇವಾಲಯದಲ್ಲಿ ಮಾಂಸವನ್ನು ನೈವೇದ್ಯವಾಗಿ ನೀಡುತ್ತಾರೆ. ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲೇ ಇಂತಹ ಪದ್ಧತಿ ಇದೆ. ಯಾಕೆ ಬದಲಿಸಿಲ್ಲ. ಪ್ರತಿಯೊಬ್ಬರಿಗೂ‌ ಅವರದ್ದೇ ಆಚರಣೆಗೆ ಅವಕಾಶ ಇದೆ. ಬದಲಿಸಲು ಹೋಗಬೇಡಿ ಎಂದು ಡಿಕೆಶಿ ಸಲಹೆ ನೀಡಿದರು.

ಸಂವಿಧಾನ ಉಳಿಸಿ ಬೆಳೆಸಬೇಕು: ದೇಶದಲ್ಲಿ ಅತಿ ಹೆಚ್ವು ವಿಗ್ರಹ, ಪ್ರತಿಮೆ ಇದ್ದರೆ ಅದು ಅಂಬೇಡ್ಕರ್ ಅವರದ್ದು. ಅಷ್ಟು ಗೌರವ ಅವರ ಮೇಲಿದೆ. ನಮಗೆ, ಈ ದೇಶಕ್ಕೆ ಬೇಕಿರುವುದು ಶಾಂತಿ, ಸುವ್ಯವಸ್ಥೆ. ಸಮಾನತೆಯ ವಿಚಾರವಾಗಿ ದೇವರು ಕೂಡ ಬದಲಾವಣೆ ಮಾಡಿಕೊಂಡಿದ್ದ ಎಂದು ಇತಿಹಾಸ ಪುಟದಲ್ಲಿ ನೋಡಿದ್ದೇವೆ. ಸಂಪೂರ್ಣ ದೇಶದಲ್ಲಿ ತುಂಬಾ ವೈವಿಧ್ಯತೆ ಇದೆ. ಎಲ್ಲರ ಭಾಷೆಗೆ ಗೌರವ ನೀಡಿದ್ದೇವೆ. ಇದಕ್ಕೆ ಶಕ್ತಿ ನೀಡಿದ್ದು ಸಂವಿಧಾನ. ಅಮೆರಿಕ, ಇಂಗ್ಲೆಂಡ್ ನಂತಹ ರಾಷ್ಟ್ರಗಳು ನಮ್ಮ ಸಂವಿಧಾನ ಒಪ್ಪಿವೆ. ನಮ್ಮವರ ಪ್ರತಿಮೆಗಳನ್ನು ಅವರು ಸ್ಥಾಪಿಸಿದ್ದಾರೆ. ಸಮಾನತೆಯಿಂದ ನಾವು ಹೋಗಬೇಕು. ನಮ್ಮ‌ ಬಣ್ಣ ಬೇರೆ ಇದ್ದರೂ ರಕ್ತ, ಕಣ್ಣೀರು ಬದಲಾಗುತ್ತದೆಯಾ?, ನಾಲಿಗೆ ರುಚಿ ಬದಲಾಗುತ್ತದೆಯಾ? ಸಂವಿಧಾನ ಉಳಿಸಿ ಬೆಳೆಸಬೇಕು ಎಂದರು.

ನಿಮ್ಮ ಬ್ಲಾಕ್ ಮಟ್ಟದಲ್ಲಿ‌ಕಾರ್ಯಕರ್ತರ ಜತೆ ಚರ್ಚಿಸಿ. ಈಗ ಬಿಜೆಪಿಯವರು ವೋಟು ಕದಿಯುತ್ತಿದ್ದಾರೆ. ನೋಟು ಮುದ್ರಿಸಿದಂತೆ ಬಿಬಿಎಂಪಿ ಅಧಿಕಾರಿ ಗುರುತಿನ ಚೀಟಿ ಮುದ್ರಿಸಿ ಕೊಡುತ್ತಾರೆ. ಚುನಾವಣಾ ಆಯೋಗ ನೀಡಿದ ಅಧಿಕಾರವನ್ನೇ ದುರುಪಯೋಗ ಪಡಿಸಿಕೊಳ್ಳುವ ದುಷ್ಠರು ಅಧಿಕಾರದಲ್ಲಿದ್ದಾರೆ. ಎಚ್ಚರವಾಗಿರಿ ಎಂದು ಡಿ.ಕೆ ಶಿವಕುಮಾರ್​​ ಕಿವಿಮಾತು ಹೇಳಿದರು.

ಸಂವಿಧಾನದ ಉಳಿವಿಗಾಗಿ ಪಾದಯಾತ್ರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾತನಾಡಿ, ಬಿಜೆಪಿ ಆಡಳಿತದಿಂದ ದೇಶದಲ್ಲಿ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಹಾಗಾಗಿ ರಾಹುಲ್ ಗಾಂಧಿ ಸಂವಿಧಾನದ ಉಳಿವಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.

ವೈದಿಕತೆಯಲ್ಲಿ ಸಮಾನತೆ ಇಲ್ಲ: ಪ್ರಗತಿಪರ ಚಿಂತಕ ಸಿ.ಎಸ್ ದ್ವಾರಕಾನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಪಾಯಕಾರಿ ಘೋಷಣೆ ಮಾಡಿದ್ದಾರೆ. ಸಂವಿಧಾನ ದಿನವನ್ನು 'ಲೋಕತಂತ್ರ ಜನನಿ' ಅಂತಾ ಘೋಷಣೆ ಮಾಡಿದ್ದಾರೆ. ಸಂವಿಧಾನ ಬಂದ ದಿನದಿಂದಲೂ ಸಂಘ ಪರಿವಾರ ವಿರೋಧಿಸಿಕೊಂಡೇ ಬಂದಿದೆ. ಸಮಾನತೆ ಸಹೋದರತೆ ಬಗ್ಗೆ ಅವರಿಗೆ ಯಾವತ್ತೂ ನಂಬಿಕೆ ಇಲ್ಲ. ಸಂವಿಧಾನ ವಿರೋಧಿಗಳಿಗೆ ಇದರಿಂದ ಭಯ ಆಗುತ್ತದೆ. ಅಂಬೇಡ್ಕರ್ ಪರಿನಿರ್ವಾಣ ಆದ ದಿನವೇ ಬಾಬ್ರಿ ಮಸೀದಿಯನ್ನು ನೆಲಸಮ ಮಾಡುತ್ತಾರೆ. ಸಂಘ ಪರಿವಾರದವರು ಅದನ್ನು ದೊಡ್ಡ ಮಟ್ಟದಲ್ಲಿ ವೈಭವೀಕರಿಸುತ್ತಾರೆ. ವೇದಗಳಲ್ಲಿ ಎಲ್ಲವೂ ಇದ್ದಿದ್ದರೆ ಬಸವ, ಬುದ್ದ, ನಾರಾಯಣ ಗುರುಗಳು ಯಾಕೆ ಹುಟ್ಟಬೇಕಿತ್ತು. ವೈದಿಕತೆಯಲ್ಲಿ ಸಮಾನತೆ ಇಲ್ಲ ಅಂತಲೇ ಇವರೆಲ್ಲ ಹುಟ್ಟಿದ್ದು. ಸಂವಿಧಾನ ಸಾಧಾರಣವಾಗಿದ್ದಲ್ಲ ಎಂದರು.

ಸಂವಿಧಾನ ದಿನದ ಪೀಠಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಬೋಧನೆ ಮಾಡಿದರು. ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಸಂಘ ಪರಿವಾರ ಯಾವತ್ತೂ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.