ETV Bharat / state

ಸಾಹಿತಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ

author img

By

Published : Feb 5, 2021, 2:57 PM IST

Updated : Feb 5, 2021, 4:59 PM IST

ವಿಚಾರವಾದಿ ಭಗವಾನ್​ಗೆ ಮಸಿ ಬಳಿದ ವಿಚಾರ ಪ್ರಸ್ತಾಪ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಾಹಿತಿಗಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಚಾರವಾದಿ ಭಗವಾನ್​ಗೆ ಮಸಿ ಬಳಿದ ವಿಚಾರ ಪ್ರಸ್ತಾಪ ಮಾಡಿ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ. ಹಂಪನಾ ಅವರನ್ನು ಠಾಣೆಗೆ ಕರೆದು ವಿಚಾರಿಸಿದ್ದಾರೆ. ಅವರೇನು ಕಾನೂನಿಗೆ ವಿರುದ್ಧ ಮಾತನಾಡಿರಲಿಲ್ಲ. ಈಗ ಭಗವಾನ್ ಅವರಿಗೆ ಮಸಿ ಬಳಿಯಲಾಗಿದೆ. ಮೀರಾ ರಾಘವೇಂದ್ರ ಎಂಬುವರು ಭಗವಾನ್ ಅವರ ಮೇಲೆ ಕೇಸ್ ಹಾಕಿದ್ದಾರೆ. ರಾಮನ ಬಗ್ಗೆ ಮಾತನಾಡಿದ್ದಾರೆಂದು ಕೇಸ್​​ ಹಾಕಿದ್ದಾರೆ. ಅದಕ್ಕೆ ಜಾಮೀನು ಕೂಡ ಸಿಕ್ಕಿದೆ. ಹೊರಗಡೆ ಬಂದ ಮೇಲೆ ಮಸಿ ಬಳಿದಿದ್ದಾರೆ. ಮಸಿ ಬಳಿದಿದ್ದು ತೀವ್ರ ಖಂಡನೀಯ ಎಂದಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಹಿರಿಯ ಸಾಹಿತಿಗೆ ಕೋರ್ಟ್ ಆವರಣದಲ್ಲೇ ಮಸಿ ಬಳಿಯುತ್ತಾರೆ. ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ. ಮೀರಾ ರಾಘವೇಂದ್ರ ಮೇಲೆ ಕೂಡಲೇ ಪೊಲೀಸರು ಕ್ರಮ ಜರುಗಿಸಬೇಕು. ಹೆಣ್ಣುಮಗಳೇ ಆಗಿದ್ದರೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Last Updated : Feb 5, 2021, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.