ETV Bharat / state

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ಚಾಂಪಿಯನ್​: ನಳಿನ್ ಕುಮಾರ್ ಕಟೀಲ್ ಟೀಕೆ - ದುರ್ಬಲ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದುರ್ಬಲ ವರ್ಗದ ಹುಸಿ ನಾಯಕ ಎಂಬುದು ಬಹಿರಂಗವಾಗಿದೆ. ಇಲ್ಲಿಯವರೆಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ನಿವಾಸಕ್ಕೆ ಭೇಟಿ ನೀಡಿಲ್ಲ, ಇದು ದಲಿತರ ಬಗ್ಗೆ ಅವರಿಗಿರುವ ಕಾಳಜಿ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಕುಟುಕಿದರು.

Siddaramaiah is a fake champion: Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​
author img

By

Published : Aug 20, 2020, 11:34 PM IST

ಬೆಂಗಳೂರು: ಬಿಜೆಪಿ ವಿರುದ್ಧದ ತಮ್ಮ ಬೂಟಾಟಿಕೆ ಧೋರಣೆಯನ್ನು ಮುಂದುವರಿಸುವುದರೊಂದಿಗೆ ದಲಿತರು ಮತ್ತು ಹಿಂದುಳಿದ ವರ್ಗಗಳ ನಕಲಿ ಚಾಂಪಿಯನ್​ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಟೀಕಿಸಿದ್ದಾರೆ.

2013 ಮತ್ತು 2018ರ ನಡುವೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಕರಾವಳಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ 23 ಹಿಂದೂ ಯುವಕರ ಹತ್ಯೆಯಾಗಿತ್ತು. ಮೈಸೂರಲ್ಲಿ ಮೂರು ಕೊಲೆಗಳು, ಬೆಂಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ತಲಾ ಒಂದು ಹತ್ಯೆ ನಡೆದಿತ್ತು. ಈ ಕೊಲೆಯ ದಾಳಿಯನ್ನು ಕಾರ್ಯಗತಗೊಳಿಸಿದವರು ಪಿಎಫ್​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತರು. ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್​ಗಳೇ ಇದನ್ನು ಖಚಿತಪಡಿಸುತ್ತದೆ ಎಂದು ಹಳೆಯ ವಿಷಯಗಳನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಯಾವುದೇ ವ್ಯಕ್ತಿಯ ಜಾತಿಯನ್ನು ಎತ್ತಿ ತೋರಿಸುವುದರಲ್ಲಿ ಬಿಜೆಪಿ ನಂಬಿಕೆ ಇಟ್ಟಿಲ್ಲ. ಆದರೆ, ಸಿದ್ದರಾಮಯ್ಯನವರ ಬೂಟಾಟಿಕೆಗಳನ್ನು ಬಹಿರಂಗಪಡಿಸುವ ಸಲುವಾಗಿ ಜಾತಿ ಕೋನವನ್ನು ಪ್ರಸ್ತಾಪಿಸಲಾಗಿದೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳು, ದಲಿತರ ನಕಲಿ ಚಾಂಪಿಯನ್ ಮತ್ತು ಸಮಾಜದ ದುರ್ಬಲ ವರ್ಗದ ಹುಸಿ ನಾಯಕ ಎಂಬುದು ಬಹಿರಂಗವಾಗಿದೆ ಎಂದರು.

ಕರಾವಳಿಯ ಕರ್ನಾಟಕದಲ್ಲಿ ಕೊಲೆಯಾದವರ ನಿವಾಸಕ್ಕೆ ಭೇಟಿ ನೀಡಲು ಮತ್ತು ಅವರ ಕುಟುಂಬ ಸದಸ್ಯರನ್ನು ಸಮಾಧಾನಪಡಿಸುವ ಕೆಲಸವನ್ನು ಮಾಡಲಿಲ್ಲ. ಆಗ ಕೊಲೆಯಾದ ಎಲ್ಲಾ 28 ವ್ಯಕ್ತಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು. ಹೀಗಾಗಿ, ಅವರು ತಾರತಮ್ಯ ಮಾಡಿದ ವಿಷಯಗಳ ಕಾರಣ ಸ್ಪಷ್ಟವಾಗಿದೆ. ಇಲ್ಲಿಯವರೆಗೆ, ಸಿದ್ದರಾಮಯ್ಯನವರು ಸ್ಥಳೀಯ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ನಿವಾಸಕ್ಕೆ ಭೇಟಿ ನೀಡಿಲ್ಲ, ಇದು ದಲಿತರ ಬಗ್ಗೆ ಅವರಿಗೆ ಇರುವ ಕಾಳಜಿ ಎಂದು ಪತ್ರಿಕಾ ಹೇಳಿಕೆ ಮೂಲಕ ಕುಟುಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.