ETV Bharat / state

ಸೆಪ್ಟೆಂಬರ್ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

ರಾಜ್ಯ ಸರ್ಕಾರ ಕೋವಿಡ್ ವಿಚಾರದಲ್ಲಿ ತೋರಿದ ವೈಫಲ್ಯ, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳು ಸಾವನ್ನಪ್ಪಿರುವುದು, ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು ನಡೆಸಿದ್ದಾರೆ ಎನ್ನಲಾದ ಅವ್ಯವಹಾರಗಳ ವಿಚಾರಣೆಗೆ ಒತ್ತಾಯ, ಜಾತಿ ಜನಗಣತಿಯನ್ನು ಜಾರಿಗೆ ತರುವಂತೆ ಒತ್ತಡ ಸೇರಿಂದರೆ ಇನ್ನಿತರ ಪ್ರಮುಖ ಮಾಹಿತಿಯನ್ನು ಈ ಸಭೆಯಲ್ಲಿ ಚರ್ಚಿಸಲಿದ್ದಾರೆ.

author img

By

Published : Sep 1, 2021, 9:31 PM IST

ಸೆಪ್ಟೆಂಬರ್ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಸೆಪ್ಟೆಂಬರ್ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ಸೆ.13ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಸೆಪ್ಟೆಂಬರ್ 7 ರಂದು ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಸಭೆ ನಡೆಯಲಿದೆ. ಪಕ್ಷದ ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಕಡ್ಡಾಯವಾಗಿ ಹಾಜರಿರುವಂತೆ ತಿಳಿಸಲಾಗಿದೆ. ಸದನದಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳ ಬಗ್ಗೆ ಸಲಹೆ ನೀಡಲು ಆಗಮಿಸುವಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ಸದನದ ಹೊರಗೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಸದನದೊಳಗೆ ಸಮರ್ಥವಾಗಿ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ನಡೆಸುತ್ತಿದೆ. ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ ರೀತಿ ವಿವಿಧ ವಿಚಾರಗಳ ಮೂಲಕ ಕಟ್ಟಿಹಾಕಲು ಅಗತ್ಯ ವಿಚಾರಗಳ ವಿಮರ್ಶೆಗೆ ಅಂದಿನ ಶಾಸಕಾಂಗ ಸಭೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಪ್ರತಿಯೊಬ್ಬ ಶಾಸಕರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಯನ್ನು ನೀಡಲು ತಿಳಿಸಲಾಗಿದೆ. ಉತ್ತಮ ಸಲಹೆ ಸೂಚನೆಯನ್ನು ಪಕ್ಷದ ರಾಜ್ಯ ನಾಯಕರು ಪರಿಗಣಿಸಿ ಅದನ್ನು ಸ್ಥಾಪಿಸಲು ಅವಕಾಶ ನೀಡಲಿದ್ದಾರೆ. ಅಲ್ಲದೆ ಅಂದಿನ ಸಭೆಯಲ್ಲಿ ಸದನದಲ್ಲಿ ಯಾವ್ಯಾವ ವಿಚಾರಗಳ ಮೇಲೆ ಯಾವ ಸದಸ್ಯರು ಮಾತನಾಡಬೇಕು ಎಂಬ ವಿಚಾರ ಅಂತಿಮಗೊಳ್ಳಲಿದೆ. ರಾಜ್ಯ ಸರ್ಕಾರ ಕೋವಿಡ್ ವಿಚಾರದಲ್ಲಿ ತೋರಿದ ವೈಫಲ್ಯ, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳು ಸಾವನ್ನಪ್ಪಿರುವುದು, ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು ನಡೆಸಿದ್ದಾರೆ ಎನ್ನಲಾದ ಅವ್ಯವಹಾರಗಳ ವಿಚಾರಣೆಗೆ ಒತ್ತಾಯ, ಜಾತಿ ಜನಗಣತಿಯನ್ನು ಜಾರಿಗೆ ತರುವಂತೆ ಒತ್ತಡ, ನೆರೆ ಮತ್ತು ಬರ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವಂತೆ ಆಗ್ರಹ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್​ಟಿ ಪಾಲು ಸೇರಿದಂತೆ ವಿವಿಧ ಮೂಲಗಳ ಅನುದಾನವನ್ನು ತರುವಂತೆ ಒತ್ತಾಯ ಹೇರುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆಯಲು ಕಾಂಗ್ರೆಸ್ ತೀರ್ಮಾನಿಸಿದೆ.

ಇದೇ ವಿಚಾರವನ್ನು ಅಂದಿನ ಶಾಸಕಾಂಗ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.