ETV Bharat / state

ಹೆಚ್‌ ಎಸ್‌ ದೊರೆಸ್ವಾಮಿ ಅವರು ಎಂದೂ ಸ್ವಾರ್ಥಕ್ಕಾಗಿ ಹೋರಾಡಲಿಲ್ಲ : ವಿಪಕ್ಷ ನಾಯಕ ಸಿದ್ದರಾಮಯ್ಯ - ದೊರೆಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

ದೊರೆಸ್ವಾಮಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಸ್ವಾತಂತ್ರ್ಯ ಬಂದ ಮೇಲೆ ನಮ್ಮವರೇ ಅಧಿಕಾರದಲ್ಲಿದ್ದಾಗ ಸರ್ಕಾರಗಳು ಅನ್ಯಾಯ ಮಾಡಿದಾಗ, ಭ್ರಷ್ಟಾಚಾರ ಮಾಡಿದಾಗ ಹೋರಾಟ ಮಾಡುತ್ತಾ ಬಂದಿದ್ದರು. ಜನರಿಗೆ ನ್ಯಾಯ ಒದಗಿಸಲು ಅವರ ಪರವಾಗಿ ಧ್ವನಿ ಎತ್ತುವ ಕೆಲಸ‌ ಮಾಡಿದ್ದಾರೆ..

Siddaramaiah
ಸಿದ್ದರಾಮಯ್ಯ
author img

By

Published : Aug 8, 2021, 5:14 PM IST

ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹೆಚ್ ಎಸ್ ದೊರೆಸ್ವಾಮಿ ಅವರು ಸ್ವಾರ್ಥಕ್ಕಾಗಿ ಹೋರಾಟ ಮಾಡಿಲ್ಲ, ಜನರು ಅನ್ಯಾಯಕ್ಕೆ ಒಳಗಾದಾಗ ಧ್ವನಿಯಾಗಿ ನಿಂತವರು. ಚುನಾವಣೆಗೆ ನಿಂತು ರಾಜಕಾರಣ ಎಂದೂ ಮಾಡಿಲ್ಲ, ದೊರೆಸ್ವಾಮಿ ಅಪ್ಪಟ ಗಾಂಧಿವಾದಿಯಾಗಿದ್ದರು. ಜನರ ಮನಸ್ಸಿನಲ್ಲಿ ಉಳಿದ ಮಹಾನ್ ವ್ಯಕ್ತಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.

ಇಂದು ಗಾಂಧಿ ಭವನದಲ್ಲಿ ದಿವಂಗತ ಹೆಚ್ ಎಸ್ ದೊರೆಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ನಾವೆಲ್ಲ ಅಧಿಕಾರದಲ್ಲಿ ಇದ್ದವರು, ಮತ್ತೆ ಮುಂದೆ ಅಧಿಕಾರ ಬೇಕೆನ್ನುವವರು. ಆದರೆ, ದೊರೆಸ್ವಾಮಿ ತ್ಯಾಗ, ಸ್ವಾವಲಂಬನಾ ಜೀವಿ, ನಾನು ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಬಂದು ಭೇಟಿ ಮಾಡಿದ್ದಾರೆ.

ಅವರು ಸ್ವಾರ್ಥಕ್ಕಾಗಿ ಯಾವತ್ತೂ ಬಂದಿಲ್ಲ. ಜನರ ಸಮಸ್ಯೆ ಇದ್ದಾಗ ಮಾತ್ರ ಬಂದು ಮಾತನಾಡುತ್ತಿದ್ದರು. ಸಾಕಷ್ಟು ನಕ್ಸಲ್ ಹೋರಾಟಗಾರರ ಮನಸ್ಸು ಬದಲಾವಣೆ ಮಾಡಿದ್ದಾರೆ. ಅವರೆಲ್ಲರೂ ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದು ದೊರೆಸ್ವಾಮಿ ಎಂದು ಹೇಳಿದರು.

ನ್ಯಾಯಕ್ಕಾಗಿ ಧ್ವನಿ ಎತ್ತಿದ ನಾಯಕ : ದೊರೆಸ್ವಾಮಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಸ್ವಾತಂತ್ರ್ಯ ಬಂದ ಮೇಲೆ ನಮ್ಮವರೇ ಅಧಿಕಾರದಲ್ಲಿದ್ದಾಗ ಸರ್ಕಾರಗಳು ಅನ್ಯಾಯ ಮಾಡಿದಾಗ, ಭ್ರಷ್ಟಾಚಾರ ಮಾಡಿದಾಗ ಹೋರಾಟ ಮಾಡುತ್ತಾ ಬಂದಿದ್ದರು. ಜನರಿಗೆ ನ್ಯಾಯ ಒದಗಿಸಲು ಅವರ ಪರವಾಗಿ ಧ್ವನಿ ಎತ್ತುವ ಕೆಲಸ‌ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಜನರ ಮನಸ್ಸಿನಲ್ಲಿ ಅಜರಾಮರ : ಅಧಿಕಾರಕ್ಕಾಗಿ ಎಂದೂ ಆಸೆ ಪಟ್ಟವರಲ್ಲ, ಎಂಎಲ್ಎ ಆಗಿ ಅಧಿಕಾರ ಮಾಡಬಹುದಿತ್ತು. ಎಷ್ಟು ಜನ ಅಧಿಕಾರಕ್ಕೆ ಬಂದು ಹೋಗಿದ್ದಾರೆ. ಅವರು ಜನರ ಮನಸ್ಸಿನಲ್ಲಿ ಇರೋದೆ ಇಲ್ಲ. ಆದರೆ, ದೊರೆಸ್ವಾಮಿ ಅಧಿಕಾರದಲ್ಲಿ ಇಲ್ಲದೆ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಗಾಂಧಿವಾದವನ್ನು ಸುಲಭವಾಗಿ ಹೇಳಬಹುದು. ಬದುಕುವುದು ಅಷ್ಟು ಸುಲಭವಲ್ಲ. ದೊರೆಸ್ವಾಮಿ ಗಾಂಧಿವಾದಿ. ಅದರಂತೆ ಬದುಕಿದವರು. ನಮ್ಮ ಸರ್ಕಾರದ ಇದ್ದಾಗ ಸಾಕಷ್ಟು ಭಾರಿ ಟೀಕಿಸಿದ್ದಾರೆ. ಹಾಗೆಯೇ, ಶಬ್ಬಾಶ್ ಗಿರಿ ಕೂಡ ಕೊಟ್ಟಿದ್ದಾರೆ ಎಂದರು.

ಹಲವರಿಗೆ ಜೀವನ ನೀಡಿದ ದೊರೆಸ್ವಾಮಿ : ನಕ್ಸಲಿಸಂ ಮೇಲೆ ನಂಬಿಕೆ ಇದ್ದ ತುಂಬಾ ಜನರ ಮನಸ್ಸನ್ನು ಪರಿವರ್ತನೆ ಮಾಡಿದ್ದರು. ದೊರೆಸ್ವಾಮಿ ಮತ್ತು ಗೌರಿ ಲಂಕೇಶ್ ಅವರು ಸಾಕಷ್ಟು ಜನರನ್ನು ಕರೆದುಕೊಂಡು ಬಂದಿದ್ದರು. ಅವರಿಗೆ ನಾಗರಿಕ ಜೀವನ ಸಡೆಸುವಂತೆ ಬುದ್ಧಿವಾದ ಹೇಳಿದ್ದರು. ಸರ್ಕಾರದದಿಂದ ಸೌಲಭ್ಯ ಮಾಡಿಕೊಡಬೇಕು ಎಂದು ಹೇಳಿದ್ದರು‌. ಅದಕ್ಕೆ ನಾನು ಒಪ್ಪಿಕೊಂಡಿದ್ದೆ‌. ಈ ಸಮಯದಲ್ಲಿ ಬಹಳ ಜನ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದರು.

ಓದಿ: ದ್ವೇಷದ ದಳ್ಳುರಿಗೆ 400 ಬಾಳೆ ಗಿಡಗಳ ನಾಶ; ಕಿಡಿಗೇಡಿಗಳ ಕೃತ್ಯಕ್ಕೆ ರೈತ ಕುಟುಂಬ ಕಣ್ಣೀರು

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಮಾಜಿ ಶಾಸಕ ವೈಎಸ್‌ವಿ ದತ್ತಾ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಡಾ.ವಸುಂಧರಾ ಭೂಪತಿ, ಜನತಾ ಪಕ್ಷದ ಅಧ್ಯಕ್ಷ ಎಂ ಪಿ ನಾಡಗೌಡ, ದಿವಂಗತ ದೊರೆಸ್ವಾಮಿ ಮಗ ರಾಜು ದೊರೆಸ್ವಾಮಿ, ಹಲವು ಪ್ರಗತಿಪರ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.