ಬೆಂಗಳೂರು: ಸದನಕ್ಕೆ ಗೈರಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿರುವ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ಸ್ಪೀಕರ್ಗೆ ಪತ್ರ ಬರೆದಿದ್ದು, ತಾವು ಗೈರು ಹಾಜರಾಗಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಾಯಕರು ಪಾಟೀಲ್ ಅವರನ್ನು ಅಪಹರಣ ಮಾಡಿದ್ದರು. ಇದರ ಮಧ್ಯೆಯೇ ಅವರು ಸ್ಪೀಕರ್ಗೆ ಪತ್ರ ಬರೆದಿದ್ದು, ತಾವು ಅನಾರೋಗ್ಯದಿಂದಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದ್ದಾರೆ.
ಕಲಾಪ ನಡೆಯುವ ಮುನ್ನಾ ದಿನ ನಾನು ಕುಟುಂಬದ ಕೆಲಸದ ಮೇಲೆ ಚೆನ್ನೈಗೆ ತೆರಳುತ್ತಿದ್ದೆ. ಆಗ ತೀವ್ರವಾದ ಎದೆ ನೋವು ಕಾಣಿಸಿಕೊಂಡು ಮೈ ಜುಮ್ಮೆನುವ ಅನುಭವವಾಯ್ತು. ಕೂಡಲೇ ನಮ್ಮ ಕುಟಂಬದ ವೈದ್ಯರನ್ನು ಸಂಪರ್ಕಿಸಿದಾಗ ಮುಂಬೈ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದರು ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.