ಬೆಂಗಳೂರು: ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪುಣ್ಯಭೂಮಿ ಫೌಂಡೇಷನ್ ವತಿಯಿಂದ ಎನ್ಆರ್ಐ ಲೇಔಟ್ನ ಸುತ್ತಮುತ್ತಲಿನ ನೂರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ವೇಳೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವ ಪ್ರತಿಜ್ಞೆ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಷನ್ನ ಅಧ್ಯಕ್ಷೆ ಶಾಂತಕೃಷ್ಣ ಮೂರ್ತಿ, ಚೀನಾದ ಹೆಚ್ಚು ವಸ್ತುಗಳು ನಮ್ಮ ದೇಶದಲ್ಲಿ ಮಾರಾಟವಾಗುತ್ತಿದ್ದು, ಅದಕ್ಕೆಲ್ಲಾ ಬಹಿಷ್ಕಾರ ಹಾಕುವ ಮೂಲಕ ಸೈನಿಕರಿಗೆ ಗೌರವ ಸೂಚಿಸೋಣ ಎಂದು ಕರೆ ಕೊಟ್ಟರು.
ಅಲ್ಲಿನ ಮೊಬೈಲ್ ಆ್ಯಪ್ಗಳಾದ ಪೇಟಿಎಂ, ಟಿಕ್ಟಾಕ್, ಯುಸಿ ಬ್ರೌಜರ್, ಶೇರ್ ಇಟ್, ವಿ ಚಾಟ್ ಸೇರಿದಂತೆ ಹಲವಾರು ಆ್ಯಪ್ಗಳ ಮೂಲಕ ಹೆಚ್ಚಿನ ಹಣ ಸಂದಾಯವಾಗುತ್ತಿದ್ದು ಕೂಡಲೇ ಅನ್ ಇನ್ಸ್‌ಟ್ಸಾಲ್ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.