ಬೆಂಗಳೂರು: ಕಾಸರಗೋಡು ಯುವತಿ ಅತ್ಯಾಚಾರ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಎನ್.ನೀಲಮಣಿರಾಜು ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದರು.
ಬಳಿಕ ಮಾಧ್ಯಮದವರ ಮಾತನಾಡಿದ ಅವರು, ಕಾಸರಗೋಡು ಯುವತಿ ಮೇಲೆ ಬೆಂಗಳೂರು, ಮಂಗಳೂರು, ಕಾಸರಗೋಡಿನಲ್ಲಿ ಆರೋಪಿಗಳು ದೌರ್ಜನ್ಯ ಎಸಗಿದ್ದಾರೆ. ಕಳೆದ ವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಮನವಿ ಸಲ್ಲಿಸಿದ್ದೆ. ಇದು ಬೆಂಗಳೂರು ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಿಲ್ಲ. ಬೆಂಗಳೂರು ಮೀರಿ ಹೊರ ವ್ಯಾಪ್ತಿಯಲ್ಲಿ ಕೃತ್ಯ ಎಸಗಿರುವ ಕಾರಣ ಸಿಐಡಿಗೆ ವಹಿಸುವಂತೆ ಮನವಿ ಮಾಡಿದರು.
ಯುವತಿ ಕುಟುಂಬವನ್ನ ಮತಾಂತರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನವಾಗುತ್ತಿದೆ. ಅದರಿಂದ ಇವರ ಕೃತ್ಯ ಹಾಗೂ ಮತಾಂತರದ ಹಿಂದೆ ದೊಡ್ಡ ಸಂಚಿರುವ ಬಗ್ಗೆ ಅನುಮಾನ ಇದೆ. ಈ ಮತಾಂತರ ಮತ್ತು ದೌರ್ಜನ್ಯದ ಬಗ್ಗೆ ವಿಸ್ತೃತ ತನಿಖೆ ಆಗಬೇಕು. ಸದ್ಯ ಸಿಐಡಿ ಡಿಜಿ ಪ್ರವೀಣ್ ಸೂದ್ ಮತ್ತು ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ಮನಿ ಮಾಡಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.