ಬೆಂಗಳೂರು: ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಯಾವ ಖಾತೆ ಕೊಡುತ್ತಾರೆ ಅನ್ನೋದು ಗೊತ್ತಿಲ್ಲ ಎಂದರು.
ಇನ್ನು ಬಿಜೆಪಿ ಮೇಲಿದ್ದ ಜನರ ನಂಬಿಕೆ, ನಾನು ಮಾಡಿದ್ದ ಅಭಿವೃದ್ಧಿ ಕೆಲಸಗಳು ಉಪಚುನಾವಣೆಯಲ್ಲಿ ನನ್ನ ಕೈಹಿಡಿದಿವೆ. ನಾವು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇವೆ. ಉತ್ತಮ ಮತಗಳ ಅಂತರದಿಂದ ಗೆದ್ದಿದ್ದೇವೆ. ಬೇರೆ ಯಾವುದರ ಬಗ್ಗೆಯೂ ಈಗ ಮಾತನಾಡಲ್ಲ. ದೇಶಪಾಂಡೆಯವರು ಸೋಲಿಸೋ ಪ್ರಯತ್ನ ಮಾಡಿದ್ದು ಗೊತ್ತಿಲ್ಲ. ಪಾರ್ಟಿ ಬಿಟ್ಟ ಮೇಲೆ ಈ ವಿಚಾರ ಈಗೇಕೆ? ಈಗ ಎಲ್ಲವೂ ಮುಗಿದ ಕಥೆ ಎಂದು ಹೆಬ್ಬಾರ್ ಹೇಳಿದ್ರು.
ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಗೊತ್ತಿಲ್ಲ. ನೀವು ಸಿಎಂ ಅವರನ್ನೇ ಕೇಳಿ ಎಂದು ಇದೇ ವೇಳೆ ಹೆಬ್ಬಾರ್ ತಿಳಿಸಿದರು.