ETV Bharat / state

ತೆಂಗಿನಕಾಯಿಯಲ್ಲಿ ಮೂಡಿದ ಶಿವಲಿಂಗ: ಶಿವರಾತ್ರಿಗೆ ಸಜ್ಜಾದ ಸಾಂಸ್ಕೃತಿಕ ನಗರಿ - ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಾಣ

ಮೈಸೂರಿನಲ್ಲಿ ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಿಸಲಾಗಿದ್ದು, ಭಕ್ತಾದಿಗಳ ಮನ ಸೆಳೆಯುತ್ತಿದೆ. ಮಾರ್ಚ್​ 11 ರಂದು ಶಿವರಾತ್ರಿ ಹಬ್ಬ ಇರುವುದರಿಂದ ತೆಂಗಿನಕಾಯಿಗಳಿಂದ ನಿರ್ಮಾಣವಾಗಿರುವ ಶಿವಲಿಂಗ ದರ್ಶನ ಪಡೆಯಲು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಾಣ
ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಾಣ
author img

By

Published : Mar 9, 2021, 1:13 PM IST

ಮೈಸೂರು: ಶಿವರಾತ್ರಿಗೆ ಇನ್ನೆರಡು ದಿನ ಬಾಕಿಯಿದೆ. ಶಿವನ ಆರಾಧಾನೆ ಮಾಡಲು ದೇವಾಲಯಗಳು ಸಜ್ಜಾಗಿವೆ. ಭಕ್ತಾದಿಗಳು ಸೆಳೆಯಲು ಮೈಸೂರಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವು ತೆಂಗಿನ ಕಾಯಿಗಳಿಂದ ಶಿವಲಿಂಗ ನಿರ್ಮಿಸಿದ್ದಾರೆ.

ಪ್ರತಿವರ್ಷ ಶಿವರಾತ್ರಿಗೆ ವಿಭಿನ್ನ ಮಾದರಿಗಳ ಮೂಲಕ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ, ಭಕ್ತರನ್ನು ಈ ತಂಡ ಆಕರ್ಷಿಸುತ್ತದೆ. ಈ ಬಾರಿ ತಿ. ನರಸಿಪುರ ರಸ್ತೆಯಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ತೆಂಗಿನಕಾಯಿಗಳಿಂದ 21 ಅಡಿ ಎತ್ತರದ ಶಿವಲಿಂಗವನ್ನು ನಿರ್ಮಿಸಲಾಗಿದೆ.

ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಾಣ ಮಾಡಿರುವುದರಿಂದ ವಿಭಿನ್ನ ಕಾನ್ಸೆಪ್ಟ್​ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ತಬ್ಧಚಿತ್ರ ಕಲಾವಿದರಾದ ಕುಮಾರ್ ಗೌರವ್ ಹಾಗೂ ಯೋಗೇಶ್ ತಂಡ 5 ಲಕ್ಷ ರೂ‌. ವೆಚ್ಚದಲ್ಲಿ 8 ಸಾವಿರ ತೆಂಗಿನಕಾಯಿಗಳನ್ನು ಬಳಸಿಕೊಂಡು ಶಿವಲಿಂಗ ನಿರ್ಮಾಣ ಮಾಡಿದ್ದಾರೆ.

ತೆಂಗಿನಕಾಯಿಗಳಿಂದ ಸುಂದರವಾಗಿ ನಿರ್ಮಾಣವಾಗಿರುವ ಶಿವಲಿಂಗ ನೋಡಲು ಭಕ್ತಾದಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ‌. ಮಾರ್ಚ್​ 11 ರಂದು ಶಿವರಾತ್ರಿ ಹಬ್ಬ ಇರುವುದರಿಂದ ತೆಂಗಿನಕಾಯಿಗಳಿಂದ ನಿರ್ಮಾಣವಾಗಿರುವ ಶಿವಲಿಂಗ ದರ್ಶನ ಪಡೆಯಲು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ತೆಂಗಿನಕಾಯಿಗಳಿಂದ ನಿರ್ಮಾಣವಾಗಿರುವ ಶಿವಲಿಂಗ ದರ್ಶನಕ್ಕೆ ಮಾರ್ಚ್​ 13 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.