ETV Bharat / state

ಶಿವಕುಮಾರ್ ಬಂಧನದಿಂದ ತುಂಬಾ ನೋವಾಗಿದೆ: ಹೆಚ್ ಡಿ ದೇವೇಗೌಡ - ಬೆಂಗಳೂರು

ಡಿಕೆಶಿ ಬಂಧನ ತುಂಬಾ ಬೇಸರದ ಸಂಗತಿ, ಇದರಿಂದ ತುಂಬಾ ನೋವಾಗಿದೆ. ಶಿವಕುಮಾರ್​ ಅವರು ಎಲ್ಲಾ ರೀತಿಯ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಆದರೆ ಅವರ ತಂದೆ ಕಾರ್ಯಕ್ಕೂ ಅವಕಾಶ ನೀಡದೆ ಇಡಿ ಅಧಿಕಾರಿಗಳು ಅಮಾನುಷವಾಗಿ ನಡೆದುಕೊಂಡಿದ್ದಾರೆ ದೊಡ್ಡಗೌಡರು ಕಿಡಿಕಾರಿದ್ದಾರೆ.

ದೇವೇಗೌಡ
author img

By

Published : Sep 4, 2019, 4:57 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದನ್ನು ಖಂಡಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇಡಿ ಅವ್ರು ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿದ್ದಾರೆ. ಆಸ್ಪತ್ರೆಗೆ ಮೆಡಿಕಲ್ ಚೆಕಪ್ ಮಾಡಿಸಲು ಹೋಗಿದ್ದರು. ಶಿವಕುಮಾರ್ ಅವರನ್ನು ಬಂಧಿಸಿರುವುದು ನನಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಡಿ ಕ್ರಮಕ್ಕೆ ಮಾಜಿ ಪ್ರಧಾನಿ ಬೇಸರ

ಡಿಕೆಶಿಗೆ ಅರ್ಜಿ ಹೈಕೋರ್ಟ್​ನಲ್ಲಿ ತಿರಸ್ಕೃತಗೊಂಡ ಬಳಿಕ ಇಡಿ ನೋಟಿಸ್ ನೀಡಿತ್ತು. ಡಿಕೆಶಿ ನೊಟೀಸ್​ಗೆ ಬೆಲೆ ಕೊಟ್ಟು ದೆಹಲಿಗೆ ಹೋದ್ರು. ಸತತ ನಾಲ್ಕು ದಿನಗಳ ಕಾಲ ಇಡಿ ವಿಚಾರಣೆಗೆ ಅವರು ಸಹಕಾರ ನೀಡಿದ್ದಾರೆ. ಇಡಿ ಅವರು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಎಂದರು.

ಶಿವಕುಮಾರ್ ತಂದೆ ಕಾರ್ಯಕ್ಕೆ ಅವಕಾಶ ಕೊಡದೇ ಇರೋದು ಅಮಾನುಷ ನಡೆ. ಪಿತೃ ಪಕ್ಷ ಮಾಡಲು‌ ಸಹ ಬಿಟ್ಟಿಲ್ಲ. ತಂದೆ ಕಾರ್ಯ ಮಾಡಲು ಅವಕಾಶ ಕೇಳಿದ್ರೂ ಇಡಿ ಅವಕಾಶ ಕೊಟ್ಟಿಲ್ಲ. ವಿಚಾರಣೆಗೆ ಸಹಕರಿಸಿಲ್ಲವೆಂದು ಬಂಧಿಸಿರೋದು ಎಷ್ಟು ಸಮಂಜಸ ಎಂದು ಹೆಚ್​ಡಿಡಿ ಪ್ರಶ್ನಿಸಿದ್ದಾರೆ.

ನಮ್ಮ ಮೈತ್ರಿ ಪಕ್ಷದ ಶಾಸಕರನ್ನು ಬಿಜೆಪಿ ಅವರು ಕರೆದುಕೊಂಡು ಹೋದಾಗ ವಿಧಾನಸಭೆಯಲ್ಲಿ ಬಿಜೆಪಿಯ ವಿರುದ್ಧ ಮುಕ್ತವಾಗಿ ಡಿಕೆಶಿ ಮಾತನಾಡಿದ್ರು‌. ಆ ಮಾತುಗಳು ಇಂದು ಡಿ.ಕೆ.ಗೆ ಮುಳವಾಗಿರಬಹುದು. ಕೋರ್ಟ್​ನಲ್ಲಿ ನ್ಯಾಯ ಸಿಗುವ ಸಾಧ್ಯತೆಯಿದೆ. ಶಿವಕುಮಾರ್ ಕೋರ್ಟ್​ನಲ್ಲಿ ಹೋರಾಟ ಮಾಡುತ್ತಾರೆ. ಅಲ್ಲದೆ ಅವರು ಕಾನೂನು ಹೋರಾಟದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ದೇವೇಗೌಡರು ವ್ಯಕ್ತಪಡಿಸಿದ್ರು.

ಸಮ್ಮಿಶ್ರ ಸರ್ಕಾರ ಇದ್ದಾಗಲೂ ಅನೇಕ ಬಾರಿ ಡಿಕೆಶಿ ಮೇಲೆ ಐಟಿ ದಾಳಿ ನಡೆದಿತ್ತು. ಆಪರೇಷನ್ ಬಗ್ಗೆ ಬಹಿರಂಗವಾಗಿ ಡಿಕೆಶಿ‌ ಮಾತಾಡಿದ್ರು, ಹೀಗೆ ಮಾತಾಡಿದ್ದು ದೇಶ ಆಳೋರಿಗೆ ಇರಿಟೇಷನ್ ಆಗಿರಬಹುದು. ಅದಕ್ಕೆ ಎರಡು ವರ್ಷ ಆದ ಮೇಲೆ ಈಗ ಬಂಧಿಸಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಪರೋಕ್ಷವಾಗಿ ದೇವೇಗೌಡರು ಗುಡುಗಿದ್ರು.

ಅಲ್ಲದೆ ಡಿಕೆಶಿಯನ್ನು ಇಡಿ‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಉಪ್ಪು-ತಿಂದವರು ನೀರು ಕುಡಿಯಬೇಕು ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ್ರು ಬಿಜೆಪಿ ನಾಯಕರ ಹೇಳಿಕೆಗೆ ನಾನು ಉತ್ತರ ಕೊಡೊಲ್ಲ ಎಂದರು.

Intro:ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳುಬ ಬಂದಿಸಿದನ್ನು ಖಂಡಿಸಿ ,ಮಾಜಿ ಪ್ರಧಾನಿ ದೇವೆಗೌಡರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು‌.ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊಡ್ಡ ಗೌಡರು
ಇಡಿ ಅವ್ರು ಡಿಕೆಶಿವಕುಮಾರ್ ಅವರನ್ನ ಅರೆಸ್ಟ್ ಮಾಡಿದ್ದಾರೆ. ಆಸ್ಪತ್ರೆಗೆ ಮೆಡಿಕಲ್ ಚೆಕಪ್ ಮಾಡಿಸಲು ಹೋಗಿದ್ದಾರೆ. ಇಂದು ಮಾತಾಡುವ ಸಲುವಾಗಿ ನಾನು ನಿನ್ನೆ ಟ್ವೀಟ್ ಮಾಡಿಲ್ಲ.ಶಿವಕುಮಾರ್ ಅವರನ್ನು ಬಂದಿಸಿರುವುದು ನನಗೆ ತುಂಬಾ ನೋವಾಗಿದೆ. ಡಿಕೆಶಿಗೆ ಹೈಕೋರ್ಟ್ ನಲ್ಲಿ ಪರಿಹಾರ ಸಿಕ್ಕದೆ ಹೋದ ಮೇಲೆ ಇಡಿ ನೊಟೀಸ್ ನೀಡಿತ್ತು.ಡಿಕೆಶಿ ನೊಟೀಸ್ ಗೆ ಬೆಲೆ ಕೊಟ್ಟು ದೆಹಲಿಗೆ ಹೋದ್ರು. ಸತತ ನಾಲ್ಲು ದಿನಗಳ ಇಡಿ ವಿಚಾರಣೆಗೆ ಅವ್ರು ಸಹಕಾರ ನೀಡಿದ್ದಾರೆ. ಇಡಿ ಅವ್ರು ಕೇಳಿದ ಎಲ್ಲಾ ಪ್ರಶ್ನೆ ಗೆ ಡಿಕೆಶಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಇಡಿ ಅವ್ರದ್ದು ನಡವಳಿಕೆಅನುಮಾನಕರವಾಗಿದೆ.
ಶಿವಕುಮಾರ್ ತಂದೆ ಕಾರ್ಯಕ್ಕೆ ಅವಕಾಶ ಕೊಡದೇ ಇರೋದು ಅಮಾನುಷ ನಡೆ. ಪಿತೃ ಪಕ್ಷ ಮಾಡಲು‌ ಇಡಿ ಬಿಟ್ಟಿಲ್ಲ. ತಂದೆ ಕಾರ್ಯ ಮಾಡಲು ಅವಕಾಶ ಕೇಳಿದ್ರು ಇಡಿ ಅವಕಾಶ ಕೊಟ್ಟಿಲ್ಲ.ಇಡಿಗೆ ಡಿಕೆಶಿ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದಾರೆ.ಅವ್ರು ವಿಚಾರಣೆಗೆ ಅಸಹಕಾರ ಕೊಟ್ಟಿಲ್ಲ. ಎಂದು ಬಂಧಿಸಿರೋದು ಎಷ್ಟು ಸಮಂಜಸ
ಗೌರಿ ಹಬ್ಬದ ದಿನ ಅವ್ರು ಪೂಜೆ ಮಾಡೋದು ಸಂಪ್ರದಾಯ ‌ನಿಷ್ಕರುಣೆಯಿಂದ ಇಡಿನಡೆದುಕೊಂಡಿದ್ದೆ.
ಶಿವಕುಮಾರ್ ಬಂದಿಸಿರುವ ಘಟನೆ ನನಗೆ ತುಂಬಾ ನೋವಾಗಿದೆ ಎಂದು ದೇವೆಗೌಡರರು ಹೇಳಿದರು.
ಅಲ್ಲದೆ ‌ಕೇಂದ್ರ ಸರ್ಕಾರ ಇಡಿ ಮೂಲಕ ತನಗೆ ಮುಂದೆ ತೊಂದರೆ ಕೊಡಬಹುದು ಎಂಬುವುದು ಗೊತ್ತಿದ್ರುBody:.ಡಿಕೆಶಿ
ನಮ್ಮ ಮೈತ್ರಿ ಪಕ್ಷದ ಶಾಸಕರನ್ನು ಬಿಜೆಪಿ ಅವರು ಕರೆದುಕೊಂಡು ಹೊದಾಗ ವಿಧಾನಸಭೆ ಯಲ್ಲಿ ಬಿಜೆಪಿಯ ವಿರುದ್ಧ ಮುಕ್ತವಾಗಿ ಮಾತನಾಡಿದ್ರು‌. ಆ ಮಾತುಗಳು ಇಂದು ಡಿ.ಕೆ.ಗೆ ಮುಳವಾಗಿರಬಹುದು
ಇಂದು ನಡೆದ ಕೇಸ್ ಗೆ ನಾಳೆ ಕೊರ್ಟ್ ನಲ್ಲಿ ನ್ಯಾಯ ಸಿಗುವ ಸಾಧ್ಯತೆ ಇದೆ. ಶಿವಕುಮಾರ್ ಕೊರ್ಟ್ ನಲ್ಲಿ ಹೊರಾಟ ಮಾಡುತ್ತಾರೆ.ಅಲ್ಲದೆ ಅವರು ಕಾನೂನು ಹೋರಾಟದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ದೇವೆಗೌಡರು ವ್ಯಕ್ತಪಡಿಸಿದ್ರು. ಅಲ್ಲದೆ ಸಮ್ಮಿಸ್ರ ಸರ್ಕಾರ ಇದ್ದಾಗಲೂ ಅನೇಕ ಬಾರಿ ಡಿಕೆಶಿ ಮೇಲೆ ಐಟಿ ದಾಳಿ ಮಾಡಿದ್ರು.ಅವ್ರಿಗೆ ಕಷ್ಡ ಇದ್ದರು ಸಹ ಸಮ್ಮಿಶ್ರ ಸರ್ಕಾರದ ಪರವಾಗಿ ಇದ್ದರು. ಆಪರೇಷನ್ ಬಗ್ಗೆ ಬಹಿರಂಗವಾಗಿ ಮಾತಾಡಿದ್ರು ಡಿಕೆ ಶಿ‌ ಹೀಗೆಮಾತಾಡಿದ್ದು
ದೇಶ ಆಳೋರಿಗೆಹಿರಿಟೇಷನ್ಆಗಿರಬಹುದು.ಅದಕ್ಕೆ ಎರಡು ವರ್ಷ ಆದ ಮೇಲೆ ಈಗ ಬಂಧನ ಮಾಡಿದ್ದಾರೆ.
ಹೀಗ ಡಿಕೆಶಿ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮಾಡೋರು ಮುಂದಾಗಿದ್ದಾರೆ. ಎಂದು ಹೆಸರು ಹೇಳದೆ ಮೋದಿ,ಹಾಗೂ ಅಮಿತ್ ಷಾ ವಿರುದ್ದ ಪರೋಕ್ಷವಾಗಿ
ಎಚ್ಡಿಡಿ ವಾಗ್ದಾಳಿ ನಡೆಸಿದರು.ಅಲ್ಲದೆ ಡಿಕೆಶಿ ಯನ್ನು ಇಡಿ‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ಬಗ್ಗೆ ಉಪ್ಪು-ತಿಂದವರು ನೀರು ಕುಡಿಯಬೇಕು ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವೆಗೌಡು ಬಿಜೆಪಿ ನಾಯಕರ ಹೇಳಿಕೆಗೆ ನಾನು ಉತ್ತರ ಕೊಡೊಲ್ಲ. ಎಂದು ಹೇಳಿದ್ರು ಇನ್ನೂ ಡಿಕೆಶಿ ಬಂಧನನ ವಿರೋಧಿಸಿ ಬೆಂಗಳೂರಿನಲ್ಲಿ ನಮ್ಮ ಪಕ್ಷದವರು ಕಾಂಗ್ರೆಸ್ ಜೊತೆ ಸೇರಿ ಪ್ರತಿಭಟನೆ ಮಾಡ್ತಿದ್ದಾರೆ.ನಮ್ಮ ಶಕ್ತಿ ಇರೋ ಕಡೆ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡ್ತಿದ್ದಾರೆ. ಶಕ್ತಿ ಇರೋ ಕಡೆ‌ ನಮ್ಮ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.