ETV Bharat / state

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾಖಲೆಯ ಸರಕು ಸಾಗಣೆ..

ಸೆಪ್ಟೆಂಬರ್ 2020ರಲ್ಲಿ ಭಾರತದಲ್ಲಿಯೇ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣವಾಗಿದ್ದ ಬೆಂಗಳೂರು ವಿಮಾನ ನಿಲ್ದಾಣ ಅಕ್ಟೋಬರ್ 2020ರಲ್ಲಿ ಇದೇ ರೀತಿ ಮುಂದುವರಿದಿದ್ದು, ಅಕ್ಟೋಬರ್ 2019ಕ್ಕೆ ಹೋಲಿಸಿದರೆ ಶೇ.0.1ರಷ್ಟು ಬೆಳವಣಿಗೆ ದಾಖಲಿಸಿದೆ..

Kempegowda International Airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Nov 25, 2020, 7:05 PM IST

ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು(ಕೆಐಎಬಿ) ಸಂಸ್ಥೆಯಿಂದ ಅಕ್ಟೋಬರ್ 2020ರಲ್ಲಿ 34,339 ಮೆಟ್ರಿಕ್ ಟನ್‍ಗಳಷ್ಟು ಸರಕು ಸಾಗಣೆಕೆಯಾಗಿದೆ. ಇದು ಕಳೆದ 26 ತಿಂಗಳುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಟನ್ನೇಜ್ ದಾಖಲೆಯಾಗಿದೆ.

Kempegowda International Airport
ಅಕ್ಟೋಬರ್ 2020ರಲ್ಲಿ ದಾಖಲೆಯ ಸರಕು ಸಾಗಣೆ

ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಹೋಗುವ ಸರಕು ತೂಕ 8,117 ಮೆಟ್ರಿಕ್ ಟನ್‍ಗಳಾಗಿದ್ದು, ಇದುವರೆಗಿನ ಅತ್ಯುನ್ನತ ಪ್ರಮಾಣದ್ದಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ ಪ್ರಮುಖವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಬೇಗನೇ ಕೆಡುವಂತ ಸರಕುಗಳ ಸಾಗಣಿಕೆಯಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ರಫ್ತುಗಳ ಪೈಕಿ ಇವು ಶೇ.12ರಷ್ಟು ಪಾಲು ಹೊಂದಿವೆ. 1,095 ಮೆಟ್ರಿಕ್ ಟನ್ ಒಟ್ಟು ತೂಕದೊಂದಿಗೆ ಅಕ್ಟೋಬರ್ 2020ರಲ್ಲಿ ಸರಕು ತಲುಪುವ ಸ್ಥಳಗಳ ಪೈಕಿ ದೋಹಾ ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ.

ಸೆಪ್ಟೆಂಬರ್ 2020ರಲ್ಲಿ ಭಾರತದಲ್ಲಿಯೇ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣವಾಗಿದ್ದ ಬೆಂಗಳೂರು ವಿಮಾನ ನಿಲ್ದಾಣ ಅಕ್ಟೋಬರ್ 2020ರಲ್ಲಿ ಇದೇ ರೀತಿ ಮುಂದುವರಿದಿದ್ದು, ಅಕ್ಟೋಬರ್ 2019ಕ್ಕೆ ಹೋಲಿಸಿದರೆ ಶೇ.0.1ರಷ್ಟು ಬೆಳವಣಿಗೆ ದಾಖಲಿಸಿದೆ.

ಅಕ್ಟೋಬರ್ 22ರಂದು ಒಂದೇ ದಿನದಲ್ಲಿ 52 ಏರ್​ಟ್ರಾಫಿಕ್ ಮೂಮೆಂಟ್(ಎಟಿಎಂ)ಗಳೊಂದಿಗೆ ವಾಯುಸಂಚಾರ ಚಲನೆಯಲ್ಲಿ ನೂತನ ದಾಖಲೆಯಾಗಿದೆ. ಆ ದಿನ 1,359 ಮೆಟ್ರಿಕ್ ಟನ್‍ಗಳಷ್ಟು ಸರಕು ಸಾಗಣೆ ಪ್ರಕ್ರಿಯೆ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.