ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2018 ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 5 ಮಂದಿ ಶಿಲ್ಪಿಗಳು
ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ತಲಾ 50,000. ರೂ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಶಿವಮೊಗ್ಗದಲ್ಲಿ ಮುಂದಿನ ತಿಂಗಳು ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರು
: 1 ದ್ಯಾಮಣ್ಣ ಕಾಳಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ) - ಬಾಗಲಕೋಟೆ ಜಿಲ್ಲೆ
2. ಅಶೋಕ ಗುಡಿಗಾರ್ (ಸಂಪ್ರದಾಯ ಶಿಲ್ಪ) - ರಾಮನಗರ ಜಿಲ್ಲೆ
3. ಡಾ.ಶಿವಾನಂದ ಹೆಚ್. ಬಂಟನೂರು (ಸಮಕಾಲೀನ ಶಿಲ್ಪ) - ವಿಜಯಪುರ ಜಿಲ್ಲೆ
4. ಜಯರಾಂ.ಬಿ.ಎನ್ (ಸಿಮೆಂಟ್‍ಶಿಲ್ಪ) - ಶಿವಮೊಗ್ಗ ಜಿಲ್ಲೆ
5. ಶ್ರೀಮತಿ ರತ್ನ ಟಿ.ಎನ್ (ಸಂಪ್ರದಾಯ ಶಿಲ್ಪ) - ಉಡುಪಿ ಜಿಲ್ಲೆ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2018ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ 6 ಶಿಲ್ಪಿಗಳ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಿದೆ.
ಇನ್ನು ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ, ದಿ.ಕೆ.ಎಸ್.ಆರ್.ಪಿ.ಗಂಗಾಧರ್ ಎಂ.ಬಡಿಗೇರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ, ಸ್ಮಾರಕ ಬಹುಮಾನ, ಅಜ್ಜಿಹಳ್ಳಿ, ಇವರು ಶಿಲ್ಪಕಲಾ ಅಕಾಡೆಮಿ ಏರ್ಪಡಿಸುವ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಬಂದಿರುವ ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
1 ನವೀನ್‍ಕುಮಾರ್.ಎಸ್ (ಮೈಸೂರು ಜಿಲ್ಲೆ) ಬೆಳವಣಿಗೆ (ಸಮಕಾಲೀನ)
2. ಮುಕುಂದ ಎಂ.ಗೌಡ (ಉತ್ತರ ಕನ್ನಡ ಜಿಲ್ಲೆ) ಶೀರ್ಷಿಕೆ ರಹಿತ (ಸಮಕಾಲೀನ)
3. ದಾನಯ್ಯ.ಎಸ್.ಚೌಕಿಮಠ (ಬಾಗಲಕೋಟೆಜಿಲ್ಲೆ) (ಸಮಕಾಲೀನ)
4. ಮಧುಸೂದನ್.ಹೆಚ್ (ಬೆಂಗಳೂರು ಗ್ರಾ. ಜಿಲ್ಲೆ) ವಾಯುಪುತ್ರ (ಸಮಕಾಲೀನ)
5. ಜಯಚಂದ್ರ ಎನ್ (ದಕ್ಷಿಣ ಕನ್ನಡ ಜಿಲ್ಲೆ) ಗಣೇಶ (ಸಂಪ್ರದಾಯ)
6. ಶಿವಕುಮಾರ್ (ಬೆಂಗಳೂರು ಗ್ರಾ. ಜಿಲ್ಲೆ) ನರಸಿಂಹ (ಸಂಪ್ರದಾಯ)
1. ಲೋಹರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು. ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ
ವೀರಾಚಾರಿ ಬಿ(ಬಳ್ಳಾರಿ ಜಿಲ್ಲೆ)ಹೊಯ್ಸಳ ಕಾಲಭೈರವ (ಸಂಪ್ರದಾಯ)
2. ದಿ.ಕೆ.ಎಸ್.ಆರ್.ಪಿ.ಗಂಗಾಧರ್ ಎಂ.ಬಡಿಗೇರ ಪ್ರಶಸ್ತಿ ವಿಜಯಪುರ. ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ
ಸಂದೀಪ್.ಐ, (ಉಡುಪಿ ಜಿಲ್ಲೆ) ಅವಲೋಕಿತೇಶ್ವರ(ಸಂಪ್ರದಾಯ)
3. ಮರ ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ. ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ
ಶ್ರೀ ಜಿ.ಎಸ್.ಮೋಹನ್‍ಕುಮಾರ್(ದಕ್ಷಿಣಕನ್ನಡಜಿಲ್ಲೆ) ಹೊಯ್ಸಳ ಗಣೇಶ (ಸಂಪ್ರದಾಯ)